ಇದು ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ: ‘ಉತ್ತರಕಾಂಡ’ದ ಬಗ್ಗೆ ಡಾಲಿ ಮಾತು

Daali Dhananjay: 'ಉತ್ತರಕಾಂಡ' ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಪಾತ್ರವಾದ 'ಗಬ್ರು ಸತ್ಯ'ನ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಆಗಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಟ ಡಾಲಿ ಧನಂಜಯ್ ಮಾತನಾಡಿದ್ದಾರೆ. ಈಗ ಬಿಡುಗಡೆ ಆಗಿರುವುದು ಝಲಕ್ ಅಷ್ಟೆ ಎಂದಿದ್ದಾರೆ.

ಇದು ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ: 'ಉತ್ತರಕಾಂಡ'ದ ಬಗ್ಗೆ ಡಾಲಿ ಮಾತು
ಡಾಲಿ ಧನಂಜಯ್
Follow us
ಮಂಜುನಾಥ ಸಿ.
|

Updated on: Aug 22, 2023 | 10:05 PM

ನಟ ಡಾಲಿ ಧನಂಜಯ್ (Daali Dhananjay) ಹುಟ್ಟುಹಬ್ಬದ (Birthday) ಪ್ರಯುಕ್ತ ಅವರ ನಟನೆಯ ಹೊಸ ಸಿನಿಮಾ ‘ಉತ್ತರಕಾಂಡ’ದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಉತ್ತರಕಾಂಡ’ ಸಿನಿಮಾದಲ್ಲಿ ಗಬ್ರು ಸತ್ಯ ಹೆಸರಿನ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದು, ಪಾತ್ರದ ವ್ಯಕ್ತಿತ್ವ ಪರಿಚಯಿಸುವ ಟೀಸರ್ ಇಂದು (ಆಗಸ್ಟ್ 22) ಬಿಡುಗಡೆ ಮಾಡಲಾಗಿದೆ. ಗಬ್ರು ಸತ್ಯನ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಸಖತ್ ಖಡಕ್ಕಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಸರ್ (Tease) ಬಿಡುಗಡೆ ಜೊತೆಗೆ ತಮ್ಮ ಹುಟ್ಟುಹಬ್ಬ ಆಚರಣೆಗೂ ಚಾಲನೆ ನೀಡಿರುವ ಡಾಲಿ ಧನಂಜಯ್, ‘ಉತ್ತರಕಾಂಡ’ ಸಿನಿಮಾದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

”ಉತ್ತರಕಾಂಡ ಸಿನಿಮಾ ನನ್ನ ಈವರೆಗಿನ ವೃತ್ತಿ ಜೀವನದಲ್ಲಿಯೇ ದೊಡ್ಡ ಬಜೆಟ್​ನ ಸಿನಿಮಾ. ಈಗ ರಿಲೀಸ್ ಆಗಿರುವುದು ನನ್ನ ಬರ್ತಡೇಗೆ ನೀಡಿರುವ ಸಣ್ಣ ಝಲಕ್ ಅಷ್ಟೇ. ‘ಉತ್ತರಕಾಂಡ’ ಸಿನಿಮಾವನ್ನು ಇನ್ನಷ್ಟು ಎಂಜಾಯ್ ಮಾಡ್ತೀರಾ, ಅಭಿಮಾನಿಗಳಿಗೆಂದೆ ‘ಉತ್ತರಕಾಂಡ’ ಸಿನಿಮಾ ಮಾಡಿರೋದು ಎಂದ ಡಾಲಿ, ‘ಬಾಕ್ಸ್ ಆಫೀಸ್ ನ ಓಡಿತಿನಿ ಸುಬ್ಬಿ’ ಎಂದು ಭರ್ಜರಿ ಡೈಲಾಗ್ ಸಹ ಹೊಡೆದಿದ್ದಾರೆ.

ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾತನಾಡಿದ ಡಾಲಿ, ”ಇಂದು ರಾತ್ರಿ 11 ಗಂಟೆಯಿಂದಲೇ ನಂದಿ ಲಿಂಕ್ ಗ್ರೌಂಡ್​ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡ್ತೀನಿ. ನಾಳೆ (ಆಗಸ್ಟ್ 23) 11ರಿಂದ 1 ಗಂಟೆವರೆಗೆ ನಾಳೆ ಬೇರೆ ಬೇರೆ ಊರುಗಳಿಂದ ಆಗಮಿಸುವ ಫ್ಯಾನ್ಸ್ ಅನ್ನು ಭೇಟಿ ಮಾಡುತ್ತೀನಿ. ಬೇರೆ ಊರುಗಳಿಂದ ಬರುವ ಅಭಿಮಾನಿಗಳಿಗಾಗಿ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಿದ್ದೇವೆ. ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳೇ ರಕ್ತದಾನ ಮಾಡುತ್ತಿದ್ದಾರೆ ಅದು ಬಹಳ ಖುಷಿ ನೀಡಿದೆ ನಾಳೆ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ‘ಉತ್ತರಕಾಂಡ’ ಸಿನಿಮಾದ ಬಗ್ಗೆ ಹೊಸ ಅಪ್​ಡೇಟ್ ಕೊಡ್ತೀನಿ” ಎಂದಿದ್ದಾರೆ.

ಇದನ್ನೂ ಓದಿ: ಉತ್ತರಕಾಂಡದಲ್ಲಿ ಗಬ್ರು ಸತ್ಯನಾಗಿ ಡಾಲಿ ಧನಂಜಯ್: ಹುಟ್ಟುಹಬ್ಬಕ್ಕೆ ಖಡಕ್ ಎಂಟ್ರಿ

ಚಂದ್ರಯಾನ 3 ಬಗ್ಗೆಯೂ ಈ ಸಮಯದಲ್ಲಿ ಮಾತನಾಡಿದ ನಟ ಡಾಲಿ, ”ಬಹಳ ಖುಷಿಯಾದ, ಹೆಮ್ಮೆತರುವ ವಿಷಯ. ನನ್ನ ಹುಟ್ಟುಹಬ್ಬದಂದೇ ಚಂದ್ರಯಾನ 3 ಯಶಸ್ವಿಯಾಗುತ್ತಿರುವುದು ಬಹಳ ಖುಷಿ ತಂದಿದೆ. ವಿಜ್ಞಾನಿಗಳ ಶ್ರಮಕ್ಕೆ ನಾಳೆ ಫಲಿತ ಸಿಗುತ್ತಿದೆ. ಸಹಜವಾಗಿಯೇ ಹೆಮ್ಮೆಯ ವಿಷಯ. ಇಸ್ರೋ ಮಾಡಿರುವ ಸಾಧನೆ ಎಲ್ಲರಿಗೂ ಹೆಮ್ಮೆ ತಂದಿದೆ. ಇಸ್ರೋ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಆ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂಬುದು ಹಾರೈಕೆ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?