ಕನ್ನಡ ಸಿನಿಮಾ ಶೂಟಿಂಗ್ ವೇಳೆ ಹೋಟೆಲ್​ನಲ್ಲಿ ಕೃತಿ ಕರಬಂಧ​ಗೆ ಕೆಟ್ಟ ಅನುಭವ; ನಟಿ ದೂರಿದ್ದು ಯಾರನ್ನ?

ಹೋಟೆಲ್​ಗಳಲ್ಲಿ ತಂಗಿದ್ದಾಗ ಸಾಕಷ್ಟು ಎಚ್ಚರಿಕೆ ಬೇಕು. ಏಕೆಂದರೆ ಕೆಲವರು ಕದ್ದು ಶೂಟ್ ಮಾಡಲು ಕ್ಯಾಮೆರಾ ಇಟ್ಟಿರುತ್ತಾರೆ. ಕೃತಿಗೆ ಆದ ಅನುಭವ ಕೂಡ ಇಂಥದ್ದೇ. ಅದೂ ಕನ್ನಡ ಸಿನಿಮಾ ಶೂಟಿಂಗ್ ವೇಳೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಹೇಗೆ ಕ್ಯಾಮೆರಾ ಪತ್ತೆ ಹಚ್ಚಿದ್ದರು ಎಂಬುದನ್ನು ಅವರು ವಿವರಿಸಿದ್ದಾರೆ.

ಕನ್ನಡ ಸಿನಿಮಾ ಶೂಟಿಂಗ್ ವೇಳೆ ಹೋಟೆಲ್​ನಲ್ಲಿ ಕೃತಿ ಕರಬಂಧ​ಗೆ ಕೆಟ್ಟ ಅನುಭವ; ನಟಿ ದೂರಿದ್ದು ಯಾರನ್ನ?
ಕೃತಿ ಕರಬಂಧ
Follow us
ರಾಜೇಶ್ ದುಗ್ಗುಮನೆ
|

Updated on: Aug 23, 2023 | 11:33 AM

ನಟಿ ಕೃತಿ ಕರಬಂಧ (Kriti Kharbanda) ಅವರು ಹಲವು ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಹಲವು ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಈಗ ಕೃತಿ ಕರಬಂಧ ಅವರು ಒಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಕನ್ನಡ ಸಿನಿಮಾ ಶೂಟಿಂಗ್​ಗಾಗಿ ಆಗಮಿಸಿದ್ದ ವೇಳೆ ಅವರಿಗೆ ಹಾರಿಬಲ್ ಅನುಭವ ಆಗಿತ್ತು. ಇದನ್ನು ಅವರು ವಿವರಿಸಿದ್ದಾರೆ. ಒಂದೊಮ್ಮೆ ಅವರು ಸ್ವಲ್ಪ ಎಚ್ಚರ ತಪ್ಪಿದ್ದರೂ ಅವರ ಖಾಸಗಿ ವಿಡಿಯೋ ಲೀಕ್ ಆಗುತ್ತಿತ್ತು.

ಹೋಟೆಲ್​ಗಳಲ್ಲಿ ತಂಗಿದ್ದಾಗ ಸಾಕಷ್ಟು ಎಚ್ಚರಿಕೆ ಬೇಕು. ಏಕೆಂದರೆ ಕೆಲವರು ಕದ್ದು ಶೂಟ್ ಮಾಡಲು ಕ್ಯಾಮೆರಾ ಇಟ್ಟಿರುತ್ತಾರೆ. ಕೃತಿಗೆ ಆದ ಅನುಭವ ಕೂಡ ಇಂಥದ್ದೇ. ಅದೂ ಕನ್ನಡ ಸಿನಿಮಾ ಶೂಟಿಂಗ್ ವೇಳೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಹೇಗೆ ಕ್ಯಾಮೆರಾ ಪತ್ತೆ ಹಚ್ಚಿದ್ದರು ಎಂಬುದನ್ನು ಅವರು ವಿವರಿಸಿದ್ದಾರೆ.

‘ಕನ್ನಡ ಸಿನಿಮಾ ಶೂಟಿಂಗ್​ನ ಸಂದರ್ಭದ ಒಂದು ಘಟನೆ ನನಗೆ ಇನ್ನೂ ನೆನಪಿದೆ. ಹೋಟೆಲ್ ಬಾಯ್ ನನ್ನ ರೂಂನಲ್ಲಿ ಕ್ಯಾಮೆರಾ ಇಟ್ಟಿದ್ದ. ನಾನು ಮತ್ತು ನನ್ನ ಸ್ಟಾಫ್​ಗಳು ಹೋಟೆಲ್​ಗೆ ಹೋದ ತಕ್ಷಣ ಒಮ್ಮೆ ಎಲ್ಲವನ್ನೂ ಪರೀಕ್ಷೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದೇವೆ. ಕ್ಯಾಮೆರಾ ಇಟ್ಟವನು ಪ್ರೋ ಆಗಿರಲಿಲ್ಲ. ಹೀಗಾಗಿ, ನನಗೆ ಆ ಕ್ಯಾಮೆರಾ ಸುಲಭದಲ್ಲಿ ಕಂಡಿತು. ಸೆಟ್​ಟಾಪ್ ಬಾಕ್ಸ್ ಹಿಂಭಾಗದಲ್ಲಿ ಆತ ಕ್ಯಾಮೆರಾ ಇಟ್ಟಿದ್ದ. ನಿಜಕ್ಕೂ ಇದು ಭಯಾನಕ ಅನುಭವ ಆಗಿತ್ತು’ ಎಂದು ಕೃತಿ ಕರಬಂಧ ಹೇಳಿದ್ದಾರೆ.

ಇದನ್ನೂ ಓದಿ: ಬಿಕಿನಿ ಧರಿಸಿ ಗ್ಲಾಮರಸ್ ಅವತಾರ ತಾಳಿದ;ಗೂಗ್ಲಿ; ಚೆಲುವೆ ಕೃತಿ ಕರಬಂಧ

ಕನ್ನಡ ಚಿತ್ರರಂಗದ ಜೊತೆ ಕೃತಿ ಒಳ್ಳೆಯ ನಂಟು ಹೊಂದಿದ್ದಾರೆ. 2010ರಲ್ಲಿ ರಿಲೀಸ್ ಆದ ‘ಚಿರು’ ಅವರ ನಟನೆಯ ಕನ್ನಡದ ಮೊದಲ ಸಿನಿಮಾ. ‘ಪ್ರೇಮ್ ಅಡ್ಡ’, ‘ಗಲಾಟೆ’ ಸಿನಿಮಾಗಳಲ್ಲಿ ಅವರು ನಟಿಸಿದರು. ‘ಗೂಗ್ಲಿ’ ಸಿನಿಮಾದಲ್ಲಿ ಯಶ್ ಜೊತೆ ತೆರೆಹಂಚಿಕೊಂಡು ಮಿಂಚಿದರು. ಬಳಿಕ ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 2018ರ ‘ದಳಪತಿ’ ಅವರು ಕೊನೆಯದಾಗಿ ನಟಿಸಿದ ಕನ್ನಡ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ