AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಿದೆ ‘ರಾನಿ’ ಚಿತ್ರತಂಡ; ವಿಶೇಷ ಸಮಯಕ್ಕೆ ಟೀಸರ್​ ಬಿಡುಗಡೆ

‘ಚಂದ್ರಯಾನ 3’ ಲ್ಯಾಂಡಿಂಗ್​ ಸಮಯವಾದ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ‘ರಾನಿ’ ಚಿತ್ರದ ಹೊಸ ಟೀಸರ್​ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಕಿರಣ್​ ರಾಜ್​ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಹಿಂದಿ ವರ್ಷನ್​ ಟೀಸರ್​ ಬಿಡುಗಡೆಗೆ ಈ ವಿಶೇಷ ಸಮಯವನ್ನು ಆಯ್ದುಕೊಳ್ಳಲಾಗಿದೆ.

ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಿದೆ ‘ರಾನಿ’ ಚಿತ್ರತಂಡ; ವಿಶೇಷ ಸಮಯಕ್ಕೆ ಟೀಸರ್​ ಬಿಡುಗಡೆ
ಅಪೂರ್ವಾ, ರಾಧ್ಯ
Follow us
ಮದನ್​ ಕುಮಾರ್​
|

Updated on: Aug 21, 2023 | 10:24 PM

ಭಾರತದ ಚಂದ್ರಯಾನವನ್ನು ಇಡೀ ಜಗತ್ತು ಗಮನಿಸುತ್ತಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆ ಸಮಯಕ್ಕೆ ನಮ್ಮ ರಾಷ್ಟ್ರದ ಹೆಮ್ಮೆಯ ‘ಚಂದ್ರಯಾನ 3’ (Chandrayaan 3) ಉಪಗ್ರಹವು ಚಂದ್ರನ ಮೇಲೆ ಕಾಲಿಡಲಿದೆ ಎಂದು ಈಗಾಗಲೇ ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ. ಅದು ಐತಿಹಾಸಿಕ ಕ್ಷಣವಾಗಲಿದೆ. ಅಂಥ ಸ್ಮರಣೀಯ ಕ್ಷಣದಲ್ಲೇ ಒಂದು ವಿಶೇಷ ಪ್ರಯತ್ನ ನಡೆಸಲು ‘ರಾನಿ’ ಸಿನಿಮಾ (Ronny Movie) ತಂಡ ಸಜ್ಜಾಗಿದೆ. ಹೌದು, ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ‘ರಾನಿ’ ಚಿತ್ರದ ಹೊಸ ಟೀಸರ್​ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಕಿರಣ್​ ರಾಜ್​ (Kiran Raj) ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಹಿಂದಿ ವರ್ಷನ್​ ಟೀಸರ್​ ಬಿಡುಗಡೆಗೆ ಈ ವಿಶೇಷ ಸಮಯವನ್ನು ಆಯ್ದುಕೊಳ್ಳಲಾಗಿದೆ. ಆ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲು ಚಿತ್ರತಂಡ ತೀರ್ಮಾನಿಸಿದೆ.

ಕಿರಣ್​ ರಾಜ್​ ಅವರು ಕಿರುತೆರೆ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ‘ಕನ್ನಡತಿ’ ಸೀರಿಯಲ್​ ಪೂರ್ಣಗೊಂಡ ಬಳಿಕ ಅವರು ಪೂರ್ತಿ ಗಮನ ‘ರಾನಿ’ ಸಿನಿಮಾದ ಮೇಲಿದೆ. ಕೆಲವೇ ದಿನಗಳ ಹಿಂದೆ 1.35 ನಿಮಿಷ ಅವಧಿಯ ಕನ್ನಡದ ಟೀಸರ್ ರಿಲೀಸ್​ ಆಗಿ ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅಲ್ಲದೇ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಈಗ 2.22 ನಿಮಿಷ ಅವಧಿಯ ಎರಡನೇ ಟೀಸರ್​ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಆಗಸ್ಟ್ 23ರಂದು ಚಂದ್ರಯಾನ-3 ಲ್ಯಾಂಡಿಂಗ್ ಆಗದಿದ್ದರೆ ಆಗಸ್ಟ್ 27ಕ್ಕೆ ಮತ್ತೊಮ್ಮೆ ಪ್ರಯತ್ನ

‘ಇದು ಹಿಂದಿ ವರ್ಷನ್​ ಟೀಸರ್ ಆಗಿರಲಿದ್ದು, ಇದರ ಮೂಲಕ ‘ರಾನಿ’ ಸಿನಿಮಾದ ಕಥೆಯ ಕುರಿತು ಮತ್ತಷ್ಟು ಮಾಹಿತಿಯನ್ನು ಬಿಟ್ಟುಕೊಡುತ್ತಿದ್ದೇವೆ. ಹಿಂದಿ ನೇಟಿವಿಟಿಗೆ ಸೂಕ್ತ ಆಗುವ ರೀತಿಯಲ್ಲಿ ಟೀಸರ್ ಕಟ್ಸ್ ಇರುತ್ತದೆ’ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಿ ಸೀರಿಸ್’ ಸಂಸ್ಥೆ ಮೂಲಕ‌ ‘ರಾನಿ’ ಚಿತ್ರದ ಹಿಂದಿ ಟೀಸರ್​ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಕಿರಣ್​ ರಾಜ್​ ಅವರು ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಾನಿ’ ಸಿನಿಮಾದಲ್ಲಿ ಅಪೂರ್ವಾ, ಸಮೀಕ್ಷಾ ಮತ್ತು ರಾಧ್ಯ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಚಂದ್ರಯಾನ 3: ಚಂದ್ರನ ಮೇಲೆ ಲ್ಯಾಂಡರ್ ಇಳಿಯಬೇಕಾದರೆ ಸೂರ್ಯನ ಬೆಳಕು ಬೇಕು, ಕಾರಣವೇನು?

ಮೈಕೋ ನಾಗರಾಜ್, ರವಿ ಶಂಕರ್, ಗಿರೀಶ್ ಹೆಗ್ಡೆ, ಮಂಡ್ಯ ರಮೇಶ್, ಬಿ. ಸುರೇಶ, ಧರ್ಮಣ್ಣ, ಸೂರ್ಯ ಕುಂದಾಪುರ, ಉಗ್ರಂ ಮಂಜು, ಮನಮೋಹನ್ ರೈ, ಅನಿಲ್ ಯಾದವ್, ಉಗ್ರಂ ರವಿ, ಪ್ರಥ್ವಿ, ಸುಜಯ್ ಶಾಸ್ತ್ರಿ, ಧರ್ಮೇಂದ್ರ ಅರಸ್ ಸೇರಿದಂತೆ ದೊಡ್ಡ ಪಾತ್ರವರ್ಗ ‘ರಾನಿ’ ಸಿನಿಮಾದಲ್ಲಿದೆ. ‘ಸ್ಟಾರ್ ಕ್ರಿಯೇಷನ್ಸ್’ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾ ಇದು. ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ ಹೆಗ್ಡೆ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ 3 : ವಿಕ್ರಮ್ ಲ್ಯಾಂಡರ್ ತೆಗೆದ ಚಂದ್ರನ ಹೊಸ ಚಿತ್ರಗಳನ್ನು ಹಂಚಿಕೊಂಡ ಇಸ್ರೋ

ಮಣಿಕಾಂತ್ ಕದ್ರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಸತೀಶ್ ಅವರ ಕಲಾ ನಿರ್ದೇಶನ, ಸಚಿನ್ ಬಸ್ರೂರ್ ಅವರ ಹಿನ್ನೆಲೆ ಸಂಗೀತದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಾಹಣ ಮಾಡುತ್ತಿದ್ದಾರೆ. ಉಮೇಶ ಆರ್​.ಬಿ. ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್