ಸಾರ್ವಜನಿಕವಾಗಿ ಸುದೀಪ್​ ಬಗ್ಗೆ ಹೇಳಿಕೆ ನೀಡದಂತೆ ಎಂ.ಎನ್​. ಕುಮಾರ್​ಗೆ ನ್ಯಾಯಾಲಯ ಆದೇಶ

ನ್ಯಾಯಾಲಯದಿಂದ ಎಂ.ಎನ್​. ಕುಮಾರ್​ ಅವರಿಗೆ ಇಂಜೆಂಕ್ಷನ್​ ಆರ್ಡರ್​ ನೀಡಲಾಗಿದೆ. ಸುದೀಪ್​ ಅವರ ವಿರುದ್ಧ ಅವಹೇಳನಕಾರಿಯಾಗಿ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಆದೇಶಿಸಲಾಗಿದೆ. ಕೋರ್ಟ್​ನಲ್ಲಿ ಕೇಸ್​ ಅಂತ್ಯವಾಗುವ ತನಕವೂ ಈ ಆದೇಶ ಅನ್ವಯ ಆಗಲಿದೆ.

ಸಾರ್ವಜನಿಕವಾಗಿ ಸುದೀಪ್​ ಬಗ್ಗೆ ಹೇಳಿಕೆ ನೀಡದಂತೆ ಎಂ.ಎನ್​. ಕುಮಾರ್​ಗೆ ನ್ಯಾಯಾಲಯ ಆದೇಶ
ಕಿಚ್ಚ ಸುದೀಪ್​, ಎಂ.ಎನ್​. ಕುಮಾರ್​
Follow us
Mangala RR
| Updated By: ಮದನ್​ ಕುಮಾರ್​

Updated on:Aug 21, 2023 | 6:47 PM

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಿಚ್ಚ ಸುದೀಪ್​ (Kichcha Sudeep) ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ ಅವರ ನಡುವಿನ ವಿವಾದ ಈಗ ಕೋರ್ಟ್​ ಅಂಗಳದಲ್ಲಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೂಡ ಆರಂಭ ಆಗಿದೆ. ಇತ್ತೀಚೆಗೆ ಸುದೀಪ್​ ಮತ್ತು ಎಂ.ಎನ್​. ಕುಮಾರ್​ (MN Kumar) ಅವರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಈಗ ನ್ಯಾಯಾಲಯದಿಂದ ಎಂ.ಎನ್​. ಕುಮಾರ್​ ಅವರಿಗೆ ಇಂಜಂಕ್ಷನ್​ ಆರ್ಡರ್ (Injunction Order)​ ನೀಡಲಾಗಿದೆ. ಸುದೀಪ್​ ಅವರ ವಿರುದ್ಧ ಅವಹೇಳನಕಾರಿಯಾಗಿ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಆದೇಶಿಸಲಾಗಿದೆ. ಕೋರ್ಟ್​ನಲ್ಲಿ ಕೇಸ್​ ಅಂತ್ಯವಾಗುವ ತನಕವೂ ಈ ಆದೇಶ ಅನ್ವಯ ಆಗಲಿದೆ. ಚಿತ್ರರಂಗದ ಹಿರಿಯರು ಈ ವಿವಾದವನ್ನು ಬಗೆಹರಿಸಲು ಪ್ರಯತ್ನಿದರು. ಆದರೆ ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಸುದೀಪ್​ ಅವರು ನಿರ್ಧರಿಸಿದ್ದಾರೆ.

ಕಿಚ್ಚ ಸುದೀಪ್​ ಅವರು ಮುಂಗಡ ಹಣ ಪಡೆದು ಕಾಲ್​ಶೀಟ್​ ನೀಡಿಲ್ಲ ಎಂಬುದು ಎಂ.ಎನ್​. ಕುಮಾರ್ ಮಾಡಿದ ಆರೋಪ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಅವರು ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಇದರಿಂದ ತಮಗೆ ಮಾನಹಾನಿ ಆಗಿದೆ ಎಂದು ಸುದೀಪ್​ ಅವರು ಕೋರ್ಟ್​ ಮೆಟ್ಟಿಲೇರಿದರು. ಎಂ.ಎನ್​. ಕುಮಾರ್​ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಎನ್​.ಎಂ. ಸುರೇಶ್​ ಕೂಡ ಭಾಗಿ ಆಗಿದ್ದರು. ಅವರ ವಿರುದ್ಧವೂ ಸುದೀಪ್​ ದೂರು ನೀಡಿದ್ದರು. ಹಾಗಾಗಿ ಎನ್​.ಎಂ. ಸುರೇಶ್​ ಸಹ ಕಾನೂನಿನ ಸಂಕಷ್ಟ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕೋರ್ಟ್​ ಕಟಕಟೆಯಲ್ಲಿ ಎಂ.ಎನ್​. ಕುಮಾರ್​ ವಿರುದ್ಧ ಹೇಳಿಕೆ ನೀಡಿದ ಸುದೀಪ್​; ಫಲ ನೀಡಲಿಲ್ಲ ಸಂಧಾನ

ಆಗಸ್ಟ್​ 10ರಂದು ಸುದೀಪ್​ ಅವರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಂದು ತಮ್ಮ ಹೇಳಿಕೆ ದಾಖಲಿಸಿದ್ದರು. ಆ ವೇಳೆ ಏನೆಲ್ಲ ನಡೆಯಿತು ಎಂಬುದನ್ನು ಮಾಧ್ಯಮಗಳ ಎದುರು ಸುದೀಪ್​ ಪರ ಲಾಯರ್​ ವಿವರಿಸಿದ್ದಾರೆ. ‘ಕಾನೂನಿನ ಪ್ರಕಾರವಾಗಿ ಸುದೀಪ್​ ಅವರು ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗಿದ್ದಕ್ಕೆ ಸಾಕ್ಷಿಗಳನ್ನು ಸಲ್ಲಿಸಿದ್ದಾರೆ. ಈ ಹಂತದಲ್ಲಿ ರಾಜಿಗೆ ಯಾವುದೇ ಅವಕಾಶ ಇಲ್ಲ’ ಎಂದು ಸುದೀಪ್​ ಪರ ವಕೀಲರು ಹೇಳಿದ್ದರು.

ಇದನ್ನೂ ಓದಿ: ಕ್ಷಮೆ ಕೇಳಲ್ಲ, ಕಾನೂನು ಹೋರಾಟ ಮಾಡ್ತೀನಿ: ಸುದೀಪ್ ಸಮನ್ಸ್​ಗೆ ಸುರೇಶ್ ಪ್ರತಿಕ್ರಿಯೆ

ಎಂ.ಎನ್​. ಕುಮಾರ್​ ನಡುವಿನ ಜಟಾಪಟಿಯಲ್ಲಿ ರಾಜಿ ಮಾಡಿಕೊಳ್ಳಲು ಸುದೀಪ್​ ಸಿದ್ಧರಿಲ್ಲ. ಸಂಧಾನ ನಡೆಸುವ ಉದ್ದೇಶದಿಂದ ರವಿಚಂದ್ರನ್​ ಮತ್ತು ಶಿವರಾಜ್​ಕುಮಾರ್​ ಅವರ ಮಧ್ಯಸ್ಥಿಕೆಯಲ್ಲಿ ಮಾತುಕಥೆ ನಡೆದಿತ್ತು. ಅದರಲ್ಲಿ ಸುದೀಪ್​ ಕೂಡ ಭಾಗಿ ಆಗಿದ್ದರು. ಆದರೆ ಕೋರ್ಟ್​ನ ಹೊರಗೆ ಸಂಧಾನ ಮಾಡಿಕೊಳ್ಳಲು ಸುದೀಪ್​ ಒಪ್ಪಿಕೊಂಡಿಲ್ಲ. ಹಾಗಾಗಿ ಅವರು ಕಾನೂನಿ ಹಾದಿ ಹಿಡಿದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:31 pm, Mon, 21 August 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ