ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ, ವಿಡಿಯೋ ನೋಡಿ

|

Updated on: Jan 04, 2025 | 5:23 PM

Daali Dhananjay: ಧನಂಜಯ್ ಅವರ ಹುಟ್ಟೂರಾದ ಹಾಸನದ ಕಾಳೇನಹಳ್ಳಿಯ ಸರ್ಕಾರಿ ಶಾಲೆಯನ್ನು ನವೀಕರಣಗೊಳಿಸುತ್ತಿದ್ದಾರೆ. ಬಿರುಕು ಬಿಟ್ಟ ಗೋಡೆಗಳು, ಛಾವಣಿಗಳನ್ನು ರಿಪೇರಿ ಮಾಡಿಸಿ ಹೊಸ ಬಣ್ಣ ಬಳಿಸುತ್ತಿದ್ದಾರೆ. ಶಾಲೆಯ ನೆಲಹಾಸಿಗೆ ಟೈಲ್ಸ್ ಹಾಕಿಸುತ್ತಿದ್ದಾರೆ. ಶೌಚಾಲಯ ದುರಸ್ತಿ ಮಾಡಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅಳವಡಿಸುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.

ಬೆಂಗಳೂರಿಗೆ ಬಂದು ಬದುಕು ಕಂಡು ಕೊಂಡ ಬಳಿಕ ಎಷ್ಟೋ ಮಂದಿ ಹುಟ್ಟೂರನ್ನು ಮರೆತು ಬಿಡುತ್ತಾರೆ. ಆದರೆ ಡಾಲಿ ಧನಂಜಯ್ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ನವೀಕರಣಗೊಳಿಸುವ ಮೂಲಕ ಊರಿಗೆ ಸೇವೆ ಮಾಡುತ್ತಿದ್ದಾರೆ. ಧನಂಜಯ್ ಅವರ ಹುಟ್ಟೂರಾದ ಹಾಸನದ ಕಾಳೇನಹಳ್ಳಿಯ ಸರ್ಕಾರಿ ಶಾಲೆಯನ್ನು ನವೀಕರಣಗೊಳಿಸುತ್ತಿದ್ದಾರೆ. ಬಿರುಕು ಬಿಟ್ಟ ಗೋಡೆಗಳು, ಛಾವಣಿಗಳನ್ನು ರಿಪೇರಿ ಮಾಡಿಸಿ ಹೊಸ ಬಣ್ಣ ಬಳಿಸುತ್ತಿದ್ದಾರೆ. ಶಾಲೆಯ ನೆಲಹಾಸಿಗೆ ಟೈಲ್ಸ್ ಹಾಕಿಸುತ್ತಿದ್ದಾರೆ. ಶೌಚಾಲಯ ದುರಸ್ತಿ ಮಾಡಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಫಿಲ್ಟರ್ ಅಳವಡಿಸುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ