ಪುನೀತ್, ದರ್ಶನ್ ಜೀವನದಲ್ಲಿ ಆ ಎರಡು ಘಟನೆ ನಡೆಯಬಾರದಿತ್ತು: ಡಾಲಿ ಧನಂಜಯ್

Updated on: Jul 14, 2026 | 5:31 PM

ಮುಖ್ಯಾಂಶಗಳು

  • ಪುನೀತ್ ರಾಜ್​ಕುಮಾರ್ ನಿಧನದಿಂದ ಚಿತ್ರರಂಗಕ್ಕೆ ನಷ್ಟ.
  • ದರ್ಶನ್ ಅವರು ಜೈಲು ಸೇರಿದ್ದು ಇನ್ನೊಂದು ಆಘಾತ.
  • ಈ ಘಟನೆಗಳ ಬಗ್ಗೆ ಮಾತಾಡಿದ್ದಾರೆ ಡಾಲಿ ಧನಂಜಯ.

‘ಮದರ್ ಪ್ರಾಮಿಸ್’ ಸಿನಿಮಾದ ನಟ, ನಿರ್ಮಾಪಕ ಡಾಲಿ ಧನಂಜಯ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಪುನೀತ್ ರಾಜ್​ಕುಮಾರ್ ನಿಧನರಾಗಿದ್ದು ಹಾಗೂ ದರ್ಶನ್ ಅವರು ಜೈಲು ಸೇರಿದ್ದು ಚಿತ್ರರಂಗಕ್ಕೆ ದೊಡ್ಡ ಪೆಟ್ಟುಕೊಟ್ಟಂತೆ ಆಗಿದೆ. ಆ ಬಗ್ಗೆ ಡಾಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಟನಾಗಿ, ನಿರ್ಮಾಪಕನಾಗಿ ಡಾಲಿ ಧನಂಜಯ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯಕ್ಕೆ ಚಂದನವನ ಕಷ್ಟದಲ್ಲಿದೆ. ಪುನೀತ್ ರಾಜ್​ಕುಮಾರ್ ನಿಧನರಾಗಿದ್ದು ಮತ್ತು ದರ್ಶನ್ ಅವರು ಜೈಲು ಸೇರಿದ್ದು ಚಿತ್ರರಂಗಕ್ಕೆ ದೊಡ್ಡ ಪೆಟ್ಟುಕೊಟ್ಟಂತೆ ಆಗಿದೆ. ಆ ಬಗ್ಗೆ ಡಾಲಿ ಧನಂಜಯ (Daali Dhananjaya) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆ ಎರಡು ಘಟನೆಗಳು ದೊಡ್ಡ ಪೆಟ್ಟುಗಳು. ಪುನೀತ್ ರಾಜ್​ಕುಮಾರ್ ಮತ್ತು ದರ್ಶನ್ ಅವರು ಚಿತ್ರರಂಗದ ದೊಡ್ಡ ಮರಗಳು. ಒಂದು ವೇಳೆ ಟೈಮ್ ಟ್ರಾವೆಲ್ ಮಾಡುವ ಅವಕಾಶ ನನಗೆ ಸಿಕ್ಕರೆ ಆ ಎರಡು ಘಟನೆಗಳನ್ನು ನಾನು ತಡೆಯುತ್ತೇನೆ ಅಂತ ಸ್ನೇಹಿತರ ಬಳಿ ಆಗಾಗ ಹೇಳುತ್ತಿರುತ್ತೇನೆ. ಆ ಎರಡು ಘಟನೆಗಳು ಆಗಬಾರದಾಗಿತ್ತು. ಕೆಲವೊಂದನ್ನು ನಾವು ಬದಲಾಯಿಸೋಕೆ ಆಗಲ್ಲ. ಮುಂದಕ್ಕೆ ಏನು ಮಾಡಬಹುದು ಎಂಬುದು ಯೋಚನೆ ಮಾಡಬೇಕು’ ಎಂದು ಡಾಲಿ ಧನಂಜಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More