Daily Devotional: ಕುಂಕುಮದಿಂದ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ
ಕುಂಕುಮವು ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೇ ನಿಮ್ಮ ಯಶಸ್ಸಿಗೂ ಕಾರಣವಾಗುತ್ತವೆ. ಅದು ಹೇಗೆ, ಕುಂಕುಮದ ಇತರೆ ಪ್ರಯೋಜನಗಳೇನು? ಎನ್ನುವುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...
ಹಿಂದೂ ಧರ್ಮದಲ್ಲಿ ಸಿಂಧೂರಕ್ಕೆ ವಿಶೇಷ ಸ್ಥಾನಮಾನವಿದೆ. ಇದು ವಿವಾಹಿತ ಸ್ತ್ರೀಯರಿಗೆ ಮುತ್ತೈದೆತನದ ಸಂಕೇತವಾಗಿ ಹಾಗೂ ಹನುಮಂತನಿಗೆ ಅಲಂಕಾರವಾಗಿ ಸಿಂಧೂರ ಅಂದರೆ ಕುಂಕುಮ ವಿಶೇಷ ಸ್ಥಾನ ಪಡೆದಿದೆ. ನಮ್ಮ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲೂ ಕುಂಕುಮವನ್ನು ಬಳಸಲಾಗುತ್ತದೆ. ಹಿಂದೂ ದೇವರ ಪೂಜೆಯಲ್ಲಿ ಕುಂಕುಮವಿಲ್ಲದಿದ್ದರೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಕುಂಕುಮವು ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲದೇ ನಿಮ್ಮ ಯಶಸ್ಸಿಗೂ ಕಾರಣವಾಗುತ್ತವೆ. ಅದು ಹೇಗೆ, ಕುಂಕುಮದ ಇತರೆ ಪ್ರಯೋಜನಗಳೇನು? ಎನ್ನುವುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…
ಜೀವನದ ಎಲ್ಲ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕುಂಕುಮದ ಈ ಉಪಾಯಗಳನ್ನು ಮಾಡಬಹುದು. ಐದು ಮಂಗಳವಾರಗಳ ಕಾಲ ಮತ್ತು ಐದು ಶನಿವಾರಗಳವರೆಗೆ ಹನುಮಂತನಿಗೆ ಮಲ್ಲಿಗೆ ಎಣ್ಣೆ ಮತ್ತು ಕುಂಕುಮವನ್ನು ಅರ್ಪಿಸಬೇಕು. ಬೆಲ್ಲ ಮತ್ತು ಬೇಳೆ ಪ್ರಸಾದವನ್ನು ಸಹ ವಿತರಿಸಬೇಕು. ಇದ್ರಿಂದ ಸಮಸ್ಯೆಗಳು ಕೊನೆಗಾಣುತ್ತವೆ.