ಪುತ್ರ ಪ್ರಜ್ವಲ್ ಹೆಸರಲ್ಲಿ ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿದ ಎಚ್‌ಡಿ ರೇವಣ್ಣ
ಎಚ್‌ಡಿ ರೇವಣ್ಣ ಅವರು ಚಾಮುಂಡೇಶ್ವರಿ ದರ್ಶನ ಪಡೆದರು. ಗರ್ಭಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಯ ಮೊರೆ ಹೋದರು. ಆಲ್ಲದೇ ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲೂ ಸಹ ವಿಶೇಷ ಪೂಜೆ ಮಾಡಿಸಿದರು.
ಮೈಸೂರು, (ಮೇ.14): ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಟೆಂಪಲ್ ರನ್ ನಡೆಸಿದ್ದಾರೆ. ಇಂದು (ಮೇ 14) ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ದೇವೇಗೌಡ್ರ ನಿವಾಸಕ್ಕೆ ಆಗಮಿಸಿದ ರೇವಣ್ಣ ಮನೆಯಲ್ಲಿ ಪೂಜೆ ಮಾಡಿದರು. ಬಳಿಕ ಬಸವನಗುರಿಯಲ್ಲಿರುವ ಆಂಜನೇಯಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತದನಂತರ ಬನಶಂಕರಿಯ ತಮ್ಮ ನಿವಾಸಕ್ಕೆ ಆಗಮಿಸಿ ಅಲ್ಲಿಗೂ ಸಹ ದೇವರ ಪ್ರಾರ್ಥನೆ ಮಾಡಿದರು. ಬಳಿಕ ಅಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡಿನ ದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಸಿಲುಕಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿನಲ್ಲೂ ಸಹ ವಿಶೇಷ ಪೂಜೆ ಮಾಡಿಸಿದರು. ಕುಟುಂಬದ ಪ್ರತಿಯೊಬ್ಬರ ಹೆಸರು ಹಾಗೂ ನಕ್ಷತ್ರ ಹೇಳಿ ಅರ್ಚನೆ ಮಾಡಿಸಿದರು. ಬಳಿಕ ದೇವಾಲಯದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಏಕಾಂಗಿಯಾಗಿ ಕುಳಿತು ದೇವಿಗೆ ಪ್ರಾರ್ಥನೆ ಮಾಡಿದರು.

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್ಎಸ್ ಕ್ರೆಸ್ಟ್ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
