Daily Devotional: ವಿವಾಹ ವಿಚ್ಛೇದನಕ್ಕೆ ಏನೇನು ಕಾರಣಗಳು ಗೊತ್ತಾ?
ಇಂದು ಸಮಾಜದಲ್ಲಿ ವಿವಾಹ ವಿಚ್ಛೇದನ ಸಾಮಾನ್ಯವಾಗುತ್ತಿದೆ. ಹಣಕಾಸು, ಅಹಂ, ಭಿನ್ನಾಭಿಪ್ರಾಯಗಳು ಸಾಮಾನ್ಯ ಕಾರಣವಾದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿ, ಕುಜ, ರಾಹು, ಶನಿ, ಕೇತು ಗ್ರಹಗಳ ಸ್ಥಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 16: ಹಿಂದಿನ ಕಾಲದಿಂದಲೂ ವಿವಾಹಕ್ಕೆ ಪವಿತ್ರ ಸ್ಥಾನವಿದೆ. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳು ಕಳವಳಕಾರಿಯಾಗಿವೆ. ಹಣಕಾಸಿನ ಸಮಸ್ಯೆ, ಅಹಂ, ಭಿನ್ನಾಭಿಪ್ರಾಯ, ಮೋಸ, ಅನಾರೋಗ್ಯ, ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ವಿಚ್ಛೇದನಕ್ಕೆ ಸಾಮಾನ್ಯ ಕಾರಣಗಳಾಗಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರವಿ, ಕುಜ, ರಾಹು, ಶನಿ ಮತ್ತು ಕೇತು ಗ್ರಹಗಳ ಸ್ಥಾನಗಳು ಮತ್ತು ಅವುಗಳ ದೋಷಗಳು ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತವೆ.
