ನಾಯಕನನ್ನು ಕಂಡಾಗ ರೋಹಿತ್ ಶರ್ಮಾ ರಿಯಾಕ್ಷನ್ ಹೇಗಿತ್ತು ನೋಡಿ
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ.
ಭಾರತ ತಂಡವು ಮುಂಬರುವ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಿದೆ. ದೆಹಲಿ ಏರ್ಪೋರ್ಟ್ ಮೂಲಕ ಪರ್ತ್ಗೆ ತೆರಳಿರುವ ಟೀಮ್ ಇಂಡಿಯಾ ಅಕ್ಟೋಬರ್ 19 ರಂದು ಮೊದಲ ಏಕದಿನ ಪಂದ್ಯವಾಡಲಿದೆ. ಈ ಪಂದ್ಯದ ಮೂಲಕ ಶುಭ್ಮನ್ ಗಿಲ್ ಭಾರತ ಏಕದಿನ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇತ್ತ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಗಿಲ್ ಸಾರಥ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಬುಧವಾರ ಬೆಳಿಗ್ಗೆ ನವದೆಹಲಿಯಿಂದ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕನನ್ನು ಗಿಲ್ ಭೇಟಿಯಾಗಿದ್ದರು. ಅಂದರೆ ವಿಮಾನ ಹತ್ತುವ ಮುನ್ನ ರೋಹಿತ್ ಶರ್ಮಾ ಅವರನ್ನು ಹಿಂದೆಯಿಂದ ಬಂದು ಮಾತನಾಡಿಸಿದ್ದಾರೆ.
ಈ ವೇಳೆ ರೋಹಿತ್ ಶರ್ಮಾ, ಗಿಲ್ ಹೇಗಿದ್ದೀಯಾ? ಎಂದು ಕುಶಲೋಪರಿ ನಡೆಸುತ್ತಿರುವುದು ಕೂಡ ವಿಡಿಯೋದಲ್ಲಿ ಕಾಣಬಹುದು. ಇದೀಗ ನಾಯಕ ಹಾಗೂ ಮಾಜಿ ನಾಯಕನ ವಿಡಿಯೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ.

