Daily Devotional: ಗಂಗಾ ಸಪ್ತಮಿಯ ಆಚರಣೆ ಮತ್ತು ಮಹತ್ವ ತಿಳಿಯಿರಿ

Updated on: May 04, 2025 | 7:08 AM

ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸುವ ಗಂಗಾ ಸಪ್ತಮಿ ಪವಿತ್ರ ದಿನ. ಈ ದಿನ ಗಂಗಾ ನದಿಗೆ ಕೃತಜ್ಞತೆ ಸಲ್ಲಿಸುವುದು, ಅರಿಶಿನ-ಉಪ್ಪು ಹಾಕಿ ಸ್ನಾನ ಮಾಡುವುದು, ವಿಷ್ಣು ಪೂಜೆ ಮತ್ತು ದಾನ ಮಾಡುವುದು ಮುಖ್ಯ. ಈ ದಿನ ನೀರಿನ ದಾನ ಮಾಡುವುದು ವಿಶೇಷ ಫಲ ನೀಡುತ್ತದೆ ಎಂದು ನಂಬಲಾಗಿದೆ.

ಬೆಂಗಳೂರು, ಮೇ 04: ಗಂಗಾ ಸಪ್ತಮಿ ಹಿಂದೂ ಧರ್ಮದಲ್ಲಿ ಒಂದು ಮಹತ್ವದ ಪರ್ವ. ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸಲಾಗುವ ಈ ದಿನ. ಗಂಗಾ ನದಿಯ ಪವಿತ್ರತೆಯನ್ನು ಸ್ಮರಿಸುವ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ಗಂಗಾ ನದಿ ಭೂಮಿಗೆ ಅವತರಿಸಿದ್ದಳು. ಈ ದಿನ ಅರಿಶಿನ ಮತ್ತು ಉಪ್ಪು ಬೆರೆಸಿದ ನೀರಿನಿಂದ ಸ್ನಾನ ಮಾಡುವುದು ಶುಭಕರ ಎನ್ನಲಾಗುತ್ತದೆ. ಸಪ್ತನದಿಗಳ ಹೆಸರುಗಳನ್ನು ಹೇಳಿಕೊಂಡು ಸ್ನಾನ ಮಾಡುವುದು ವಾಡಿಕೆ. ವಿಷ್ಣು ಪೂಜೆ, ಉಪವಾಸ ಮತ್ತು ದಾನ ಕಾರ್ಯಗಳನ್ನು ಮಾಡುವುದು ಕೂಡ ಈ ದಿನದ ವಿಶೇಷ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More