Daily Devotional: ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕುವುದು ಕೂಡ ಶುಭವಲ್ಲ ಏಕೆ? ವಿಡಿಯೋ ನೋಡಿ

|

Updated on: Jun 22, 2024 | 7:05 AM

ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರುತ್ತದೆ ಸನಾತನ ಧರ್ಮದಲ್ಲಿ ಹೇಳಲಾಗಿದೆ. ಆದರೆ ತುಳಸಿ ಗಿಡಕ್ಕೆ ಕೆಲವು ದಿನ ಮಾತ್ರ ನೀರು ಹಾಕುವಂತಿಲ್ಲ. ಯಾಕೆಂದ್ರೆ ಆ ದಿನಗಳು ನಿಮ್ಮ ಜೀವನದಲ್ಲಿ ದುರದೃಷ್ಟವನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನಗಳಲ್ಲಿ ತುಳಸಿಗೆ ನೀರು ಹಾಕಬೇಡಿ. ಆ ದಿನಗಳು ಯಾವುವು ಎಂದು ತಿಳಿದುಕೊಳ್ಳೋಣ.

ಸನಾತನ ಧರ್ಮದಲ್ಲಿ ಮರ-ಗಿಡಗಳಿಗೂ ದೇವರ ಸ್ಥಾನವಿದೆ. ನಮ್ಮ ದೇಶದ ಪ್ರತಿಯೊಂದು ಮನೆಯ ಅಂಗಳದಲ್ಲಿಯೂ ಜನರು ಪ್ರತಿದಿನ ನೀರನ್ನು ಅರ್ಪಿಸಿ ಪೂಜಿಸುವ ಒಂದು ಸಸ್ಯವಿದೆ. ಹೌದು, ಅದೇ ತುಳಸಿ ಗಿಡ. ತುಳಸಿ ಒಂದು ಸಸ್ಯವಾಗಿದ್ದು, ಅದರಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ಇಡುವುದು ಮಂಗಳಕರ ಎಂದು ಜನರು ನಂಬಿದ್ದಾರೆ.

ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಬಹಳ ಪೂಜನೀಯ ಸಸ್ಯವಾಗಿದೆ. ನಾವು ಇದನ್ನು ಕೇವಲೊ ಒಂದು ಸಸ್ಯವಾಗಿ ಪರಿಗಣಿಸದೇ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸುತ್ತೇವೆ.ಭಗವಾನ್ ವಿಷ್ಣುವಿನ ವರವನ್ನು ಪಡೆದ ನಂತರ, ತುಳಸಿ ದೇವಿಯು ಪ್ರಪಂಚದಾದ್ಯಂತ ಶಾಶ್ವತವಾಗಿ ಪೂಜಿಸಲ್ಪಟ್ಟಳು ಮತ್ತು ಅದಕ್ಕಾಗಿಯೇ ಆಕೆಗೆ ಹಿಂದೂ ಧರ್ಮದಲ್ಲಿ ಅಂತಹ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ನಾವೆಲ್ಲರೂ ಸಾಮಾನ್ಯವಾಗಿ ಬೆಳಿಗ್ಗೆ ಸ್ನಾನದ ನಂತರ ತುಳಸಿ ದೇವಿಗೆ ನೀರನ್ನು ಅರ್ಪಿಸುತ್ತೇವೆ. ಆದರೆ ಮುಖ್ಯವಾಗಿ ಭಾನುವಾರದ ದಿನದಂದು ತುಳಸಿಗೆ ನೀರನ್ನು ನೀಡಬಾರದು. ಇದಕ್ಕೆ ಮುಖ್ಯ ಕಾರಣವೇನು? ಭಾನುವಾರ ತುಳಸಿಗೆ ನೀರನ್ನು ನೀಡಬಾರದು ಎಂಬುದರ ಹಿಂದಿನ ಪೌರಾಣಿಕ ನಂಬಿಕೆಯೇನು ಗೊತ್ತೇ? ಈ ವಿಡಿಯೋ ನೋಡಿ

Follow us on