AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ: ಸಹೋದರಿ

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ನಂದೀಶ್ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ: ಸಹೋದರಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 22, 2024 | 11:21 AM

Share

ಕುರುಡು ಅಭಿಮಾನ, ಹುಚ್ಚು ಅವೇಶ ಎಂತೆಂಥ ಕಷ್ಟಗಳಿಗೆ ಒಂದು ಕುಟುಂಬವನ್ನು ಈಡು ಮಾಡುತ್ತದೆ ಅನ್ನೋದಿಕ್ಕೆ ನಂದೀಶ್ ಪ್ರಕರಣ ಒಂದು ಸ್ಪಷ್ಟ ಉದಾಹರಣೆ ಅನಿಸುತ್ತದೆ. ನಾವು ಮೆಚ್ಚುವಅ ನಟನೆಡೆ ಅಭಿಮಾನ ಇರಬೇಕು, ಆದರೆ ಅದು ಅಂಧಾಭಿಮಾನ ಆಗಿರಬಾರದು.

ಮಂಡ್ಯ: ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಮಹಿಳೆಯ ಗೋಳು ಕೇಳಿ. ಇವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಆರೋಪಿಗಳಲ್ಲಿ ಒಬ್ಬನಾಗಿರುವ ನಂದೀಶ್ ನ (Nandeesh) ಹಿರಿಯ ಸಹೋದರಿ. ಇವರು ಹೇಳುವಂತೆ ಮನೆಗೆ ನಂದೀಶ್ ನೇ ಆಧಾರವಾಗಿದ್ದ. ಇದು ಸ್ಥಿತಿವಂತ ಕುಟುಂಬವೇನೂ ಅಲ್ಲ. ನಂದೀಶ್ ದುಡಿದು ತಂದರೆ ಮಾತ್ರ ಮನೇಲಿ ಒಲೆ ಹೊತ್ತೋದು-ಮನೇಲಿ ಅಂಥ ಸ್ಥಿತಿ ಇದೆ. ನಂದೀಶ್ ಗೆ ಆರೋಗ್ಯದ ಸಮಸ್ಯೆಗಳೂ (health issues)ಇವೆ. ಅವನ ಮೂತ್ರಪಿಂಡದಲ್ಲಿ ಕಲ್ಲು ಪತ್ತೆಯಾಗಿದೆ. ಬೇರೆ ರೀತಿಯ ಅನಾರೋಗ್ಯಗಳೂ ಅವನನ್ನು ಕಾಡುತ್ತಿವೆಯಂತೆ. ಅವನ ಪರವಾಗಿ ಕೋರ್ಟ್ ನಲ್ಲಿ ವಾದಿಸಲು ಒಬ್ಬ ವಕೀಲನನ್ನು ನೇಮಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲದ ಸ್ಥಿತಿ ತಮ್ಮ ಕುಟುಂಬದ್ದು ಎಂದು ಅವನ ಅಕ್ಕ ಹೇಳುತ್ತಾರೆ. ಕುರುಡು ಅಭಿಮಾನ, ಹುಚ್ಚು ಅವೇಶ ಎಂತೆಂಥ ಕಷ್ಟಗಳಿಗೆ ಒಂದು ಕುಟುಂಬವನ್ನು ಈಡು ಮಾಡುತ್ತದೆ ಅನ್ನೋದಿಕ್ಕೆ ನಂದೀಶ್ ಪ್ರಕರಣ ಒಂದು ಸ್ಪಷ್ಟ ಉದಾಹರಣೆ ಅನಿಸುತ್ತದೆ. ನಾವು ಮೆಚ್ಚುವ ನಟನೆಡೆ ಅಭಿಮಾನ ಇರಬೇಕು, ಆದರೆ ಅದು ಅಂಧಾಭಿಮಾನ ಆಗಿರಬಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಕೃತ್ಯದಲ್ಲಿ ಪೊಲೀಸರೂ ಶಾಮೀಲಾಗಿರುವ ಅನುಮಾನ, ಇಲ್ಲಿದೆ ಕಾರಣ

Published on: Jun 22, 2024 10:52 AM