AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಕೃತ್ಯದಲ್ಲಿ ಪೊಲೀಸರೂ ಶಾಮೀಲಾಗಿರುವ ಅನುಮಾನ, ಇಲ್ಲಿದೆ ಕಾರಣ

ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್ ಹಾಗೂ ಗ್ಯಾಂಗ್​​ ರಕ್ಷಣೆಗೆ ಪೊಲೀಸರೇ ಮುಂದಾಗಿದ್ದಾರೆಯೇ ಎಂಬ ಅನುಮಾನ ಇದೀಗ ಬಲವಾಗಿದೆ. ಇದಕ್ಕೆ ಕೆಲವು ಕಾರಣಗಳೂ ಇವೆ. ಹಾಗಾದರೆ ಪೊಲೀಸರ ಮೇಲೆ ಅನುಮಾನ ಬರಲು ಕಾರಣಗಳೇನು? ದರ್ಶನ್ ಮತ್ತು ಮತ್ತೊಬ್ಬರ ಆರೋಪಿಯ ರಕ್ಷಣೆಗೆ ಪೊಲೀಸರ ಜತೆಗೇ ನಡೆದಿತ್ತಾ ಡೀಲ್? ವಿವರಗಳಿಗೆ ಮುಂದೆ ಓದಿ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಕೃತ್ಯದಲ್ಲಿ ಪೊಲೀಸರೂ ಶಾಮೀಲಾಗಿರುವ ಅನುಮಾನ, ಇಲ್ಲಿದೆ ಕಾರಣ
ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: Ganapathi Sharma|

Updated on:Jun 13, 2024 | 2:16 PM

Share

ಬೆಂಗಳೂರು, ಜೂನ್ 13: ರೇಣುಕಾಸ್ವಾಮಿ ಹತ್ಯೆ (Renukaswamy Murder) ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತು ಗ್ಯಾಂಗ್ ಈಗಾಗಲೇ ಜೈಲುಪಾಲಾಗಿದೆ. ಕೊಲೆಗೆ ಸಂಬಂಧಿಸಿ ದಿನಕ್ಕೊಂದು ಮಾಹಿತಿ ಬೆಳಕಿಗೆ ಬರುತ್ತಿದೆ. ಈ ಮಧ್ಯೆ, ಕೃತ್ಯದಲ್ಲಿ ಪೊಲೀಸರೂ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ದರ್ಶನ್ ಮತ್ತು 13ನೇ ಆರೋಪಿ ದೀಪಕ್​​ನನ್ನು ಪ್ರಕರಣದಿಂದ ಬಚಾವ್ ಮಾಡಲು 5 ಕೋಟಿ ರೂಪಾಯಿಗೆ ಡೀಲ್​ ನಡೆಸಲು ಮುಂದಾಗಿದ್ದರು ಎಂಬ ಆರೋಪ ಇದೀಗ ಕೇಳಿ ಬಂದಿದೆ. ಇಷ್ಟೇ ಅಲ್ಲದೆ, ಪಿಎಸ್​ಐಯೊಬ್ಬರ ಸೂಚನೆ ಮೇರೆಗೆ ಶವವನ್ನು ಕಾಮಾಕ್ಷಿಪಾಳ್ಯಕ್ಕೆ ಕೊಂಡೊಯ್ದು ಅಲ್ಲಿ ಎಸೆಯಲಾಗಿತ್ತು ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ನಂತರ ಆರೋಪಿಗಳು ಪಿಎಸ್​ಐಯೊಬ್ಬರಿಗೆ ಕರೆ ಮಾಡಿದ್ದರು. ಆಗ, ನಮ್ಮ ಠಾಣಾ ವ್ಯಾಪ್ತಿಯಲ್ಲಿ ಹೆಣ ಹಾಕಬೇಡಿ ಎಂದು ಪಿಎಸ್​ಐ ಹೇಳಿದ್ದರು ಎನ್ನಲಾಗಿದೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಹೊಡೆದು ಕೊಲೆ ಮಾಡಿದ ಆರೋಪ ದರ್ಶನ್ ಗ್ಯಾಂಗ್ ಮೇಲಿದೆ. ಈ ಪ್ರದೇಶದ ಬೆಂಗಳೂರಿನ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿದೆ. ಪಿಎಸ್​ಐ ಬಳಿ ಚರ್ಚಿಸಿದ ನಂತರವೇ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿ ಶವವನ್ನು ಕಾಮಾಕ್ಷಿಪಾಳ್ಯಕ್ಕೆ ಶವ ಕೊಂಡೊಯ್ದು ಎಸೆದಿದ್ದರು.

ಹತ್ಯೆ ಮಾಡಿ ಶವ ಎಸೆದ ಬಳಿಕ ಪೊಲೀಸ್​ ಅಧಿಕಾರಿ ಜತೆಗೂ ಜೊತೆ ಕೊಲೆ ಆರೋಪಿಗಳು ಚರ್ಚೆ ನಡೆಸಿದ್ದಾರೆ. ನಟ ದರ್ಶನ್ ಹೆಸರು ಬರುವುದನ್ನು ತಪ್ಪಿಸಲು ಡೀಲ್​ಗೆ ಮುಂದಾಗಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ, 13ನೇ ಆರೋಪಿ ದೀಪಕ್ ಪ್ರಭಾವಿ ರಾಜಕಾರಣಿ ಸಂಬಂಧಿಯಾಗಿದ್ದಾನೆ. ಆತನನ್ನೂ ಈತನನ್ನೂ ಕೊಲೆ ಕೇಸ್​ನಿಂದ ಹೊರಗಿಡಲು ಪ್ರಯತ್ನ ನಡೆದಿತ್ತೇ ಎಂಬ ಶಕೆಯೂ ಈಗ ವ್ಯಕ್ತವಾಗಿದೆ.

ಜೊತೆಗೆ ದೀಪಕ್ ಫೋಟೋ ಸಹ ಹೊರಬಾರದಂತೆ ವ್ಯವಸ್ಥೆ ಮಾಡಲಾಗಿತ್ತು. ದೀಪಕ್​ನನ್ನು ಅಪ್ರೂವರ್ ಮಾಡಿಕೊಂಡಿ ಕೈಬಿಡುವ ಸಂಚು ಹೂಡಲಾಗಿತ್ತು ಎಂದು ಮೂಲಗಳು ತಿಳಿಸಿದ್ದು, ಇದೀಗ ಪೊಲೀಸ್ ಅಧಿಕಾರಿಗಳ ತನಿಖೆ ಮೇಲೆಯೇ ಹಲವು ಅನುಮಾನಗಳು ವ್ಯಕ್ತವಾಗಿವೆ.

ಆರೋಪಿಗಳಿಗೆ ಪೊಲೀಸರ ರಕ್ಷಣೆ?

ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿರುವ ದರ್ಶನ್ ಹಾಗೂ ಇತರ ಆರೋಪಿಗಳನ್ನು ಸ್ವತಃ ಪೊಲೀಸರೇ ರಕ್ಷಣೆ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಈಗ ಬಲವಾಗಿದೆ. ಠಾಣೆಯ ಇಡೀ ಕಟ್ಟಡಕ್ಕೆ ಸುತ್ತಲೂ ಶಾಮಿಯಾನ ಹಾಕಿಸಿದ ಸಿಬ್ಬಂದಿ, ಒಳಗಡೆ ಏನು ನಡೆಯುತ್ತಿದೆ ಎಂಬುದನ್ನು ಹೊರಗಿನವರಿಗೆ ತಿಳಿಯದಂತೆ ಮಾಡಿದ್ದಾರೆ. ಠಾಣೆಯ ಕಾಪೌಂಡ್ ಅಷ್ಟೇ ಅಲ್ಲದೆ, ಇಡೀ ಕಟ್ಟಡಕ್ಕೆ ಶಾಮಿಯಾನ ಹಾಕಲಾಗಿದೆ. ಕಟ್ಟಡದ 2ನೇ ಫ್ಲೋರ್​ನಲ್ಲೂ ಶಾಮಿಯಾನ ಹಾಕಿ ಕವರ್ ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್ ಪ್ರಕರಣ ಉಲ್ಲೇಖಿಸಿ ಸ್ಟಾರ್ಸ್​ ಆರಾಧನ ಸಂಸ್ಕೃತಿಯನ್ನು ಟೀಕಿಸಿದ ರಾಮ್​ ಗೋಪಾಲ್ ವರ್ಮಾ

ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಸಿಬ್ಬಂದಿಯ ಈ ಕ್ರಮ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:15 pm, Thu, 13 June 24