Loading video

Daily Devotional: ದಯೆ ಹಾಗೂ ಕ್ಷಮೆಯಿಂದ ಆಯುಷ್ಯ ವೃದ್ಧಿಯಾಗುತ್ತಾ?

Updated on: May 05, 2025 | 6:59 AM

ದಯೆ ಮತ್ತು ಕರುಣೆ ತನ್ನ ಆಯುಷ್ಯವನ್ನು ಹೆಚ್ಚಿಸುತ್ತಾ ಎಂಬ ಹಲವರ ಪ್ರಶ್ನೆಗೆ ಡಾ. ಬಸವರಾಜ ಗುರುಜಿ ಈ ವಿಡಿಯೋದಲ್ಲಿ ಉತ್ತರಿಸಿದ್ದಾರೆ. ದಯೆ ಮತ್ತು ಕರುಣೆ ಇರುವವರು ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ ಎಂಬುದು ಒಂದು ನಂಬಿಕೆ. ಜೊತೆಗೆ ಸಮಾಜ ಸೇವೆ ಮತ್ತು ಸದ್ಗುಣಗಳ ಮಹತ್ವವನ್ನು ತಿಳಿಸಿಕೊಡಲಾಗಿದೆ.

ಬೆಂಗಳೂರು, ಮೇ 05: ಹಳ್ಳಿಗಳಲ್ಲಿ ಜನಪ್ರಿಯ ಮಾತೊಂದಿದೆ. “ದಯೆ ಕರುಣೆ ತುಂಬಿದ ಹೃದಯವೇ ದೇವಾಲಯ” ಅಂತ. ದಯೆ ಮತ್ತು ಕರುಣೆಯುಳ್ಳವರು “ಇಚ್ಛಾ ಮರಣ” ವನ್ನು ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ಅಂದರೆ, ಅವರ ಆಯುಷ್ಯವನ್ನು ಭಗವಂತ ಅವರ ಇಚ್ಛೆಯಂತೆ ನಿರ್ಧರಿಸುತ್ತಾನೆ. ಸಮಾಜ ಸೇವೆ, ದಾನ, ಮತ್ತು ಇತರ ಒಳ್ಳೆಯ ಕಾರ್ಯಗಳು ದೀರ್ಘಾಯುಷ್ಯಕ್ಕೆ ಕಾರಣವಾಗಬಹುದು ಎಂಬುದು ಅವರ ಅಭಿಪ್ರಾಯ. ಈ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ ವಿಡಿಯೋ ನೋಡಿ.