Daily Devotional: ಗೋ ಮೂತ್ರದ ಮಹತ್ವ ತಿಳಿದುಕೊಳ್ಳಿ

|

Updated on: Mar 02, 2024 | 7:02 AM

ಹಿಂದೂಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜನೀಯ ಭಾವವವಿದೆ.ಅದೇ ರೀತಿ ಗೋವಿನ ಉತ್ಪನ್ನಗಳಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.ಗೋವಿನ ಸೆಗಣಿ, ತುಪ್ಪ, ಹಾಲು ಗೋಮೂತ್ರ ಎಲ್ಲವನ್ನೂ ಕೂಡ ಅನೇಕ ರೋಗಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಗೋ ಮೂತ್ರದಿಂದ ಏನೆಲ್ಲ ಪ್ರಯೋಜನಗಳಿವೆ? ಗೋ ಮೂತ್ರ ಮಹತ್ವವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ಹಿಂದೂ ಧರ್ಮದಲ್ಲಿ ಗೋವನ್ನು ದೇವತೆಯಂತೆ ಪೂಜಿಸುತ್ತಾರೆ. ಗೋವನ್ನು ಕಾಮದೇನು ಎಂದು ಕರೆಯುತ್ತಾರೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಗೋವಿನ ಹಾಲು, ಸಗಣಿ, ಮೂತ್ರ ಬಹಳ ಶ್ರೇಷ್ಠ ಎಂದು ಭಾವಿಸಲಾಗುತ್ತದೆ. ಗೋವಿನ ಸಗಣಿಯಿಂದ ವಿಭೂತಿ ತಯಾರಿಸಲಾಗುತ್ತದೆ. ಗೋ ಮೂತ್ರವನ್ನು ಮನೆ ಶುದ್ಧೀಕರಣಕ್ಕೆ ಬಳಸಲಾಗುತ್ತದೆ. ಗೋಮೂತ್ರ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೂರವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಹಾಗಾಗಿ ಗೋಮೂತ್ರವನ್ನು ಪ್ರತಿದಿನ ಕುಡಿಯಬೇಕು. ಇಷ್ಟೇ ಅಲ್ಲದೇ ಔಷಧಿಯ ಗುಣ ಹೊಂದಿರುವ ಗೋಮೂತ್ರವು ಚರ್ಮದ ಮೇಲಿನ ಬಿಳಿ ಕಲೆ, ​ಕ್ಯಾನ್ಸರ್‌ ಜೀವಕೋಶಗಳ ತಡೆ, ಹೊಟ್ಟೆಯ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ.