ಕೋರ್ಟ್ ನನಗೆ 10,000 ರೂ. ದಂಡ ವಿಧಿಸಿದೆ: ತುಂಬಿದ ಸಭೆಯಲ್ಲಿ ಕಷ್ಟ ಹೇಳಿಕೊಂಡ ಸಿದ್ದರಾಮಯ್ಯ
ಮೈಸೂರು ನಗರದ ಕಲಾಮಂದಿರದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಲ್ಲಿ ಯಾವುದೇ ಹೋರಾಟ ಫ್ರೀಡಂಪಾರ್ಕ್ನಲ್ಲೇ ಮಾಡಬೇಕು. ಫ್ರೀಡಂಪಾರ್ಕ್ನಲ್ಲೇ ಹೋರಾಟ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ನಾವು ಹೋರಾಟ ಮಾಡಿದ್ದೆವು. ಆಗ ನನ್ನ ವಿರುದ್ಧ ಪೊಲೀಸರು ಕೇಸ್ ಹಾಕಿದ್ದರು ಎಂದು ಹೇಳಿದ್ದಾರೆ.
ಮೈಸೂರು, ಮಾರ್ಚ್ 1: ಕೋರ್ಟ್ ನನಗೆ 10,000 ರೂ. ದಂಡ ವಿಧಿಸಿದೆ ಎಂದು ತುಂಬಿದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಷ್ಟ ಹೇಳಿಕೊಂಡಿದ್ದಾರೆ. ನಗರದ ಕಲಾಮಂದಿರದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಯಾವುದೇ ಹೋರಾಟ ಫ್ರೀಡಂಪಾರ್ಕ್ನಲ್ಲೇ ಮಾಡಬೇಕು. ಫ್ರೀಡಂಪಾರ್ಕ್ನಲ್ಲೇ ಹೋರಾಟ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ. ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ನಾವು ಹೋರಾಟ ಮಾಡಿದ್ದೆವು. ಆಗ ನನ್ನ ವಿರುದ್ಧ ಪೊಲೀಸರು ಕೇಸ್ ಹಾಕಿದ್ದರು. ಫ್ರೀಡಂಪಾರ್ಕ್ನಲ್ಲೇ ಬಿಟ್ಟು ಬೇರೆ ಜಾಗದಲ್ಲಿ ಹೋರಾಟ ಮಾಡಿದ್ದಕ್ಕೆ ಕೇಸ್. ಇತ್ತೀಚೆಗೆ ಹೈಕೋರ್ಟ್ ನನಗೆ ದಂಡ ಹಾಕಿದೆ. ನಾನು ಈಗ ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Mar 01, 2024 09:29 PM
Latest Videos