ಮದುವೆ ಫೋಟೋ ಹಂಚಿಕೊಂಡು ಕಮೆಂಟ್ ಆಯ್ಕೆ ಆಫ್ ಮಾಡಿದ ದೀಪಿಕಾ ದಾಸ್
ದೀಪಿಕಾ ಅವರು ಸದ್ದಿಲ್ಲದೆ ಮದುವೆ ಆಗುತ್ತಾರೆ ಎಂದು ಫ್ಯಾನ್ಸ್ ಊಹಿಸಿರಲಿಲ್ಲ. ಈ ವಿಚಾರದ ಬಗ್ಗೆ ಅನೇಕರು ಶಾಕ್ ವ್ಯಕ್ತಪಡಿಸಿದ್ದಾರೆ. ಈ ರೀತಿ ಆದಾಗ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ. ಹಾಗಾಗಬಾರದು ಎನ್ನುವ ಕಾರಣದಿಂದಲೇ ದೀಪಿಕಾ ದಾಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಆಯ್ಕೆಯನ್ನೇ ಆಫ್ ಮಾಡಿದ್ದಾರೆ.
ನಟಿ ದೀಪಿಕಾ ದಾಸ್ (Deepika Das) ಅವರು ಸೈಲೆಂಟ್ ಆಗಿ ವಿವಾಹ ಆಗಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರ ಮದುವೆ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ದೀಪಿಕಾ ಅವರು ಸದ್ದಿಲ್ಲದೆ ಮದುವೆ ಆಗುತ್ತಾರೆ ಎಂದು ಫ್ಯಾನ್ಸ್ ಊಹಿಸಿರಲಿಲ್ಲ. ಈ ವಿಚಾರದ ಬಗ್ಗೆ ಅನೇಕರು ಶಾಕ್ ವ್ಯಕ್ತಪಡಿಸಿದ್ದಾರೆ. ಈ ರೀತಿ ಆದಾಗ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ. ಹಾಗಾಗಬಾರದು ಎನ್ನುವ ಕಾರಣದಿಂದಲೇ ದೀಪಿಕಾ ದಾಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಆಯ್ಕೆಯನ್ನೇ ಆಫ್ ಮಾಡಿದ್ದಾರೆ. ದೀಪಿಕಾ ದಾಸ್ ಮದುವೆ ನಡೆದಿದ್ದು ಗೋವಾದಲ್ಲಿ. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ಅವರು ವರಿಸಿದ್ದಾರೆ. ‘ನಾಗಿಣಿ’ ಧಾರಾವಾಹಿಯಲ್ಲಿ ದೀಪಿಕಾ ನಟಿಸಿದ್ದರು. ‘ಬಿಗ್ ಬಾಸ್’ನಲ್ಲೂ ಸ್ಪರ್ಧಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos