AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯ ಈ ವಿಚಾರವನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ವರ್ತೂರು ಸಂತೋಷ್

ಬಿಗ್ ಬಾಸ್ ಪೂರ್ಣಗೊಂಡು ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಅದರ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಿಂತಿಲ್ಲ. ದೊಡ್ಮನೆಯಿಂದ ಹೊರಗೆ ಬಂದ ಸ್ಪರ್ಧಿಗಳು ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ನಾನಾ ಕಡೆಗಳಿಗೆ ಭೇಟಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹಲವು ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾರೆ. ‘ನನ್ನಮ್ಮ ಸೂಪರ್ ಸ್ಟಾರ್ 3’ ಕಾರ್ಯಕ್ರಮಕ್ಕೆ ವರ್ತೂರು ಸಂತೋಷ್ ಅವರು ಬಂದಿದ್ದಾರೆ. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯ ಈ ವಿಚಾರವನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ವರ್ತೂರು ಸಂತೋಷ್
ವರ್ತೂರು ಸಂತೋಷ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Feb 25, 2024 | 3:25 PM

Share

ವರ್ತೂರು ಸಂತೋಷ್ (Varthur Santhosh) ಅವರು ದೊಡ್ಮನೆಗೆ ಬಂದು ಎಲ್ಲರ ಗಮನ ಸೆಳೆದರು. ಅವರು ಕತ್ತಿಗೆ ಧರಿಸಿದ್ದ ಹುಲಿ ಉಗುರಿನ ಲಾಕೆಟ್ ಕಾರಣಕ್ಕೆ ಅವರು ಜೈಲಿಗೆ ಹೋಗಿ ಬರಬೇಕಾಯಿತು. ಒಂದು ವಾರಗಳ ಕಾಲ ಅವರು ಬಿಗ್ ಬಾಸ್​ನಿಂದ (Bigg Boss Kannada) ಹೊರಗೆ ಇರಬೇಕಾದ ಪರಿಸ್ಥಿತಿ ಬಂತು. ನಂತರ ವರ್ತೂರು ಸಂತೋಷ್ ಮರಳಿ ದೊಡ್ಮನೆಗೆ ಬಂದರು. ಆ ಬಳಿಕ ಅವರು ಸಖತ್ ಆ್ಯಕ್ಟೀವ್ ಆದರು. ಅವರು ಫಿನಾಲೆವರೆಗೆ ತಲುಪಿದರು. ಟಾಪ್​ 6ರಲ್ಲಿ ವರ್ತೂರು ಸಂತೋಷ್ ಕೂಡ ಇದ್ದರು. ಅವರು ಬಿಗ್ ಬಾಸ್ ಮನೆಯಲ್ಲಿ ಏನನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂಬುದನ್ನು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಬೀನ್ ಬ್ಯಾಗ್​ನಲ್ಲಿ ಕುಳಿತು ಸದಾ ಹರಟೆ ಹೊಡೆಯುತ್ತಾ ಇರುತ್ತಿದ್ದರು. ಇವರಿಗೆ ಸಂತು-ಪಂತು ಎನ್ನುವ ಹೆಸರನ್ನು ನೀಡಲಾಗಿದೆ. ವರ್ತೂರು ಸಂತೋಷ್ ಈಗ ಬೀನ್ ಬ್ಯಾಗ್​ನ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಈ ವಿಚಾರದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ‘ನನ್ನಮ್ಮ ಸೂಪರ್ ​ಸ್ಟಾರ್ 3’ ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ. ತಾರಾ ಅನುರಾಧಾ ಎರಡು ಬೀನ್ ಬ್ಯಾಗ್​ನ ತರಿಸಿ ಹರಟೆ ಹೊಡೆದಿದ್ದಾರೆ. ಈ ಕಾರ್ಯಕ್ರಮಕ್ಕೆ ‘ವರ್ತೂರು ಕತೆ ತಾರಮ್ಮನ ಜೊತೆ’ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: ವರ್ತೂರು ಸಂತೋಷ್ ತಾನು ಹಳ್ಳಿಕಾರ್ ಒಡೆಯ ಅಂದಿದಕ್ಕೆ ಹಳ್ಳಿಕಾರ್ ತಳಿ ಹೊಂದಿರುವ ಇತರ ರೈತರು ವ್ಯಗ್ರ, ಕಾನೂನು ಸಮರಕ್ಕೆ ಸಿದ್ಧತೆ!

‘ಬೀನ್ ಬ್ಯಾಗ್​ಗೆ ಆ ಪವರ್ ಇದೆ. ಆ ಬ್ಯಾಗ್​ದೇ ತಪ್ಪು. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್​ ಅವರದ್ದು ಏನೂ ತಪ್ಪಿಲ್ಲ. ಇದರಲ್ಲಿ ಕುಳಿತರೆ ಮನಸ್ಸಿನ ಮಾತು ಹಾಗೆಯೇ ಬಂದು ಬಿಡುತ್ತದೆ’ ಎಂದರು ತಾರಾ. ಸುಷ್ಮಾ ರಾವ್ ಕೂಡ ಈ ಮಾತನ್ನು ಒಪ್ಪಿದರು. ಈ ಎಪಿಸೋಡ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದೆ. ‘ನಿನಗೆ ಕಪ್ ಸಿಗಬೇಕಿತ್ತು’ ಎಂದು ತಾರಾ ಹೇಳಿದ್ದಾರೆ. ಅವರು ಬೀನ್ ಬ್ಯಾಗ್​ ಮೇಲೆ ಕುಳಿತು ಥೇಟ್ ತುಕಾಲಿ ಸಂತೋಷ್ ರೀತಿಯೇ ಮಾತನಾಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್​ಗೆ ಸನ್ಮಾನ ಮಾಡಿದ ಇನ್​ಸ್ಪೆಕ್ಟರ್​ಗೆ ವರ್ಗಾವಣೆ ಶಿಕ್ಷೆ

ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಅವರು ವರ್ತೂರು ಸಂತೋಷ್​ಗೆ ಹಲವು ಬಾರಿ ಕಿವಿಮಾತು ಹೇಳಿದ್ದಾರೆ. ಈ ಮಾತನ್ನು ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ ಸಂತೋಷ್. ‘ಕೆಲವು ವಿಚಾರಗಳನ್ನು ನೆಗ್ಲೆಟ್ ಮಾಡಬೇಕು ಎಂದು ಸುದೀಪ್ ಹೇಳಿಕೊಟ್ಟಿದ್ದರು. ಅದನ್ನು ನಾನು ಕಲಿತಿದ್ದೇನೆ. ಹಾಗೆಯೇ ಮಾಡುತ್ತಿದ್ದೇನೆ’ ಎಂದಿದ್ದಾರೆ ವರ್ತೂರು ಸಂತೋಷ್. ಬಿಗ್ ಬಾಸ್​ನಿಂದ ಬಂದ ಬಳಿಕ ವರ್ತೂರು ಸಂತೋಷ್ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಮದುವೆ ವಿಚಾರಗಳನ್ನು ತೆಗೆದವರಿಗೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಕೂಡ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ