‘ಕಿತ್ತೋದ್ ನನ್ ..’ ಜಗ್ಗೇಶ್ ಮಾತಿಗೆ ಪ್ರತಿಕ್ರಿಯಿಸಿದ ವರ್ತೂರು ಸಂತೋಷ್ ಹೇಳಿದ್ದೇನು?

Varthur Santhosh: ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ ನಟ ಜಗ್ಗೇಶ್, ವರ್ತೂರು ಸಂತೋಷ್ ಅವರನ್ನು ನಿಂದಿಸಿದ್ದರು. ಇದೀಗ ಜಗ್ಗೇಶ್ ಹೇಳಿಕೆ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ.

‘ಕಿತ್ತೋದ್ ನನ್ ..’ ಜಗ್ಗೇಶ್ ಮಾತಿಗೆ ಪ್ರತಿಕ್ರಿಯಿಸಿದ ವರ್ತೂರು ಸಂತೋಷ್ ಹೇಳಿದ್ದೇನು?
Follow us
ಮಂಜುನಾಥ ಸಿ.
|

Updated on: Feb 18, 2024 | 11:23 AM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ಕ್ಕೆ ಹೋಗಿ ಬಂದ ಬಳಿಕ ವರ್ತೂರು ಸಂತೋಷ್ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಸಿನಿಮಾ ತಾರೆಯರು ಸಹ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಏರಿದೆ. ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಾರೆ. ಜನಪ್ರಿಯತೆ ನಡುವೆ ವರ್ತೂರು ಸಂತೋಷ್​ ಅವರನ್ನು ಟೀಕೆ ಮಾಡುವವರು, ನಿಂದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚೆಗಷ್ಟೆ ನಟ ಜಗ್ಗೇಶ್, ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ ವರ್ತೂರು ಸಂತೋಷ್ ಅವರನ್ನು ಹೆಸರು ಹೇಳದೆ ನಿಂದಿಸಿದ್ದರು. ಈ ಬಗ್ಗೆ ಇದೀಗ ವರ್ತೂರು ಸಂತೋಷ್ ಉತ್ತರ ನೀಡಿದ್ದಾರೆ.

‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ‘ನಾನು ಹುಲಿ ಥರಹ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗುರಿನ ಪೆಂಡೆಂಟ್ ಕೊಟ್ಟರು, ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಜಗ್ಗೇಶ್ ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಹುಲಿ ಉಗುರು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ತೀವ್ರ ಅಸಮಾಧಾನವನ್ನು ಜಗ್ಗೇಶ್ ಪ್ರದರ್ಶಿಸಿದ್ದರು.

ಇದನ್ನೂ ಓದಿ:‘ಆ ಚೈಲ್ಡ್ ಚಪಾತಿಗೆ ಈ ವಿಡಿಯೋ’; ವರ್ತೂರು ಸಂತೋಷ್ ಖಡಕ್ ಉತ್ತರ ನೀಡಿದ್ಯಾರಿಗೆ?

ಜಗ್ಗೇಶ್ ಅವರು ವರ್ತೂರು ಸಂತೋಷ್​ಗೆ ‘ಕಿತ್ತೋದ್ ನನ್ನ ಮಗ’ ಎಂಬ ಪದ ಬಳಸಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಜಗ್ಗೇಶ್​ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವರ್ತೂರು ಸಂತೋಷ್, ‘ಬಿಡಿ ಅವರು ದೊಡ್ಡವರು. ನಾನು ಹೇಳಲಿಚ್ಛಿಸುವುದು ಇಷ್ಟೆ, ‘ಕಾಲೈ ತಸ್ಮೈ ನಮಃ’ ಅಷ್ಟೆ. ಎಲ್ಲಾದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ’ ಎಂದಿದ್ದಾರೆ.

ಮುಂದುವರೆದು, ‘ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಒಂದು ಹೇಳ್ತಾರೆ. ವರ್ತೂರು ಅವ್ರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ಅಷ್ಟೇ ಸಾಕು. ಕೆಲವು ಜಾಗಗಳಲ್ಲಿ ಮಾತನಾಡಲೇಬೇಕು ಸಂದರ್ಭ ಆ ತರ ಇರುತ್ತದೆ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು’ ಎಂದಿದ್ದಾರೆ ವರ್ತೂರು ಸಂತೋಷ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ