‘ಆ ಚೈಲ್ಡ್ ಚಪಾತಿಗೆ ಈ ವಿಡಿಯೋ’; ವರ್ತೂರು ಸಂತೋಷ್ ಖಡಕ್ ಉತ್ತರ ನೀಡಿದ್ಯಾರಿಗೆ?

ವರ್ತೂರು ಸಂತೋಷ್ ಅವರನ್ನು ಇತ್ತೀಚೆಗೆ ಅನೇಕರು ಟೀಕೆ ಮಾಡಿದ್ದರು. ‘ಹಳ್ಳಿಕಾರ್ ಹೆಸರಲ್ಲಿ ಸಂತೋಷ್ ದುಡ್ಡು ಮಾಡಿದ್ದಾರೆ, ಪ್ರಚಾರಕ್ಕಾಗಿ ಎರಡು ವರ್ಷಗಳಿಂದ ಈ ರೀತಿ ಮಾಡುತ್ತಿದ್ದಾರೆ’ ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಎಲ್ಲಾ ಆರೋಪಗಳಿಗೆ ವರ್ತೂರು ಸಂತೋಷ್ ಉತ್ತರ ನೀಡಿದ್ದಾರೆ.

‘ಆ ಚೈಲ್ಡ್ ಚಪಾತಿಗೆ ಈ ವಿಡಿಯೋ’; ವರ್ತೂರು ಸಂತೋಷ್ ಖಡಕ್ ಉತ್ತರ ನೀಡಿದ್ಯಾರಿಗೆ?
ಸಂತೋಷ್
Follow us
|

Updated on: Feb 10, 2024 | 6:58 AM

ವರ್ತೂರು ಸಂತೋಷ್ (Varthur Santosh) ಹವಾ ಹೆಚ್ಚಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ತಲುಪಿದ್ದ ಅವರು ಈಗ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರಿಗೆ ಸಿಕ್ಕ ಜನಪ್ರಿಯತೆ ಯಾವ ಮಟ್ಟದ್ದು ಎಂದು ಅವರಿಗೆ ತಿಳಿಯುತ್ತಿದೆ. ಈ ಕಾರಣಕ್ಕೆ ಅವರು ನೇರವಾಗಿ ಮಾತುಗಳನ್ನಾಡುವುದು ಹೆಚ್ಚಿದೆ. ಈಗ ಸಂತೋಷ್ ಅಭಿಮಾನಿ ವಲಯದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಅಪ್ರಬುದ್ಧ ವ್ಯಕ್ತಿಗಳಿಗೆ ತಿರುಗೇಟು ನೀಡಿದ್ದಾರೆ. ಫ್ಯಾನ್ಸ್ ವಲಯದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವರ್ತೂರು ಸಂತೋಷ್ ಅವರು ‘ಬಿಗ್ ಬಾಸ್’ ಮನೆ ಸೇರಿದಾಗ ಡಲ್ ಇದ್ದರು. ಹಳ್ಳಿಕಾರ್ ರೈತರ ಹೋರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡೋದು ಅವರ ಉದ್ದೇಶ ಆಗಿತ್ತು. ಆದರೆ, ಅವರು ತೊಂದರೆಗೆ ಸಿಲುಕಿದ್ದು ಹುಲಿ ಉಗುರು ಪ್ರಕರಣದಿಂದ. ಅವರು ಜೈಲಿಗೆ ಹೋಗಿ ಬರಬೇಕಾಯಿತು. ಬಳಿಕ ಮರಳಿ ಬಿಗ್ ಬಾಸ್​ಗೆ ತೆರಳಿದಾಗ ಅವರ ಆಟ ಸಂಪೂರ್ಣ ಬದಲಾಯಿತು. ಬೇರೆಯದೇ ವರ್ತೂರು ಸಂತೋಷ್ ಆಗಿ ಅವರು ಕಾಣಿಸಿದ್ದಾರೆ.

ವರ್ತೂರು ಸಂತೋಷ್ ವಿಡಿಯೋ

ಇತ್ತೀಚೆಗೆ ವರ್ತೂರು ಸಂತೋಷ್ ಅವರನ್ನು ಅನೇಕರು ಟೀಕೆ ಮಾಡಿದ್ದರು. ‘ಹಳ್ಳಿಕಾರ್ ಹಸುಗಳ ಹೆಸರಲ್ಲಿ ಸಂತೋಷ್ ದುಡ್ಡು ಮಾಡಿದ್ದಾರೆ, ಪ್ರಚಾರಕ್ಕಾಗಿ ಎರಡು ವರ್ಷಗಳಿಂದ ಈ ರೀತಿ ಮಾಡುತ್ತಿದ್ದಾರೆ’ ಎನ್ನುವ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಈ ಎಲ್ಲಾ ಆರೋಪಗಳಿಗೆ ಅವರು ಉತ್ತರ ನೀಡಿದ್ದಾರೆ. ಒಂದು ವಿಡಿಯೋ ಮೂಲಕ ಅವರು ಖಡಕ್ ತಿರುಗೇಟು ನೀಡಿದ್ದಾರೆ. ಚಿಕ್ಕವನಿದ್ದಾಗ ಹೋರಿಗಳ ಜೊತೆ ನಿಂತ ಫೋಟೋನ ತೋರಿಸಿದ್ದಾರೆ ಸಂತೋಷ್. ಜೊತೆಗೆ ಅವರು ಇದಕ್ಕೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ‘ಕಾರ್ತಿಕ್​ಗೂ ಇಷ್ಟು ಹೈಪ್ ಇಲ್ಲ’; ವರ್ತೂರು ಸಂತೋಷ್​ಗೆ ಸಿಕ್ಕ ಸ್ವಾಗತ ನೋಡಿ ಅಭಿಪ್ರಾಯ ತಿಳಿಸಿದ ಫ್ಯಾನ್ಸ್

‘ಚೈಲ್ಡ್ ಚಪಾತಿಗೊಂದು ವಿಡಿಯೋ ಮಾಡಿ. ಎರಡು ವರ್ಷದಿಂದ ಇದೆಲ್ಲ ಮಾಡುತ್ತಿದ್ದೇನೆ ಎಂದು ಅವನು ಹೇಳುತ್ತಿದ್ದಾನೆ. ನಾನು ಈ ಹೋರಿ ಕಟ್ಟಿದಾಗ ಅವನು ಇನ್ನೂ ಚಡ್ಡಿ ಹಾಕುತ್ತಿರಲಿಲ್ಲ’ ಎಂದಿದ್ದಾರೆ ವರ್ತೂರು ಸಂತೋಷ್. ಈ ಮೂಲಕ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದಾರೆ. ವರ್ತೂರು ಸಂತೋಷ್ ಅವರು ಇತ್ತೀಚೆಗೆ ಹೊಸಕೋಟೆ, ಮಾಲೂರು, ಚನ್ನಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲೆಲ್ಲ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಅವರನ್ನು ಜನರು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ