‘ಕಾರ್ತಿಕ್​ಗೂ ಇಷ್ಟು ಹೈಪ್ ಇಲ್ಲ’; ವರ್ತೂರು ಸಂತೋಷ್​ಗೆ ಸಿಕ್ಕ ಸ್ವಾಗತ ನೋಡಿ ಅಭಿಪ್ರಾಯ ತಿಳಿಸಿದ ಫ್ಯಾನ್ಸ್

ವರ್ತೂರು ಸಂತೋಷ್ ಮಾಲೂರು, ಚನ್ನಪಟ್ಟಣ, ಹೊಸಕೋಟೆಗೆ ಭೇಟಿ ನೀಡಿದ್ದಾರೆ. ಆಗ ಜನಸಾಗರವೇ ನೆರೆದಿತ್ತು. ಅಷ್ಟೇ ಅಲ್ಲ ಹೂವಿನ ದಳಗಳನ್ನು ಹಾಕಿ ಅವರನ್ನು ಸ್ವಾಗತಿಸಲಾಗಿದೆ. ಪುಷ್ಪ ರಾಶಿಯಲ್ಲಿ ಅವರು ಮಿಂದೆದ್ದಿದ್ದಾರೆ. ದೊಡ್ಡ ದೊಡ್ಡ ಹೂವಿನ ಮಾಲೆಯನ್ನು ಹಾಕಲಾಗಿದೆ.  ಅವರಿಗೆ ಸಿಕ್ಕ ಸ್ವಾಗತ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

‘ಕಾರ್ತಿಕ್​ಗೂ ಇಷ್ಟು ಹೈಪ್ ಇಲ್ಲ’; ವರ್ತೂರು ಸಂತೋಷ್​ಗೆ ಸಿಕ್ಕ ಸ್ವಾಗತ ನೋಡಿ ಅಭಿಪ್ರಾಯ ತಿಳಿಸಿದ ಫ್ಯಾನ್ಸ್
ಸಂತೋಷ್
Follow us
|

Updated on: Feb 09, 2024 | 12:36 PM

ವರ್ತೂರು ಸಂತೋಷ್ (varthur Santosh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿ ಆಗಿದ್ದರು. ಅವರು ಹುಲಿ ಉಗುರು ಪ್ರಕರಣದ ಕಾರಣದಿಂದ ಒಂದು ವಾರ ಹೊರಗೆ ಇರಬೇಕಾಯಿತು. ನಂತರ ಮರಳಿ ದೊಡ್ಮನೆಗೆ ಬಂದ ಅವರು ಬೇರೆಯದೇ ರೀತಿಯಲ್ಲಿ ಆಟ ಶುರು ಮಾಡಿದರು. ತುಕಾಲಿ ಸಂತೋಷ್ ಜೊತೆಗಿನ ಫ್ರೆಂಡ್​ಶಿಪ್ ಕಾರಣಕ್ಕೂ ವರ್ತೂರು ಸಂತೋಷ್ ಅನೇಕರಿಗೆ ಇಷ್ಟವಾಗಿದ್ದಾರೆ. ಈಗ ಬಿಗ್ ಬಾಸ್ ಪೂರ್ಣಗೊಂಡಿದೆ. ಅವರು ನಾನಾ ಊರುಗಳಿಗೆ ತೆರಳುತ್ತಿದ್ದಾರೆ. ಈಗ ಅವರು ಕೋಲಾರ ಸಮೀಪದ ಮಾಲೂರಿಗೆ ತೆರಳಿದ್ದರು. ಈ ವೇಳೆ ಅವರಿಗೆ ಸಿಕ್ಕ ಸ್ವಾಗತ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಹೋರಿಗಳ ತಳಿ ರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ. ಈ ಬಗ್ಗೆ ಜನರಿಗೆ ತಿಳಿಸಬೇಕು ಎನ್ನುವ ದ್ಯೇಯೋದ್ದೇಶ ಇಟ್ಟುಕೊಂಡು ಅವರು ಬಿಗ್ ಬಾಸ್ ಮನೆಗೆ ತೆರಳಿದರು. ಫಿನಾಲೆವರೆಗೂ ಅವರು ದೊಡ್ಮನೆಯಲ್ಲಿ ಇದ್ದರು. ಅವರ ಮ್ಯಾನರಿಸಂ, ಮಾತನಾಡೋ ಶೈಲಿ ಅನೇಕರಿಗೆ ಇಷ್ಟ ಆಗಿದೆ. ಈ ಕಾರಣಕ್ಕೆ ವರ್ತೂರು ಸಂತೋಷ್ ಅವರ ಅಭಿಮಾನಿ ಬಳಗ ಹೆಚ್ಚಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಮೂರು ಲಕ್ಷಕ್ಕೂ ಅಧಿಕ ಹಿಂಬಾಲಕರು ಸಿಕ್ಕಿದ್ದಾರೆ. ಅವರು ಹಂಚಿಕೊಂಡಿರೋ ವಿಡಿಯೋ ಈಗ ವೈರಲ್ ಆಗಿದೆ.

ವರ್ತೂರು ಸಂತೋಷ್​ಗೆ ಸ್ವಾಗತ ಸಿಕ್ಕಿದ್ದು ಹೀಗೆ..

ವರ್ತೂರು ಸಂತೋಷ್ ಅವರು ಮಾಲೂರಿಗೆ ಭೇಟಿ ನೀಡಿದ್ದರು. ಈ ವೇಳೆ ಜನಸಾಗರವೇ ನೆರೆದಿತ್ತು. ಅಷ್ಟೇ ಅಲ್ಲ ಹೂವಿನ ದಳಗಳನ್ನು ಹಾಕಿ ಅವರನ್ನು ಸ್ವಾಗತಿಸಲಾಯಿತು. ಪುಷ್ಪ ರಾಶಿಯಲ್ಲಿ ಅವರು ಮಿಂದೆದ್ದರು. ದೊಡ್ಡ ದೊಡ್ಡ ಹೂವಿನ ಮಾಲೆಯನ್ನು ಹಾಕಲಾಗಿದೆ. ಪಟಾಕಿ ಸಿಡಿ ಸಂಭ್ರಮಿಸಲಾಗಿದೆ. ಅವರು ಹೋದಲೆಲ್ಲೇ ಜನರೇ ನೆರೆದಿದ್ದರು. ಇದು ಅವರ ಬಗ್ಗೆ ಇರೋ ಕ್ರೇಜ್​ಗೆ ಸಾಕ್ಷಿ. ‘ಸಮಸ್ತ ಮಾಲೂರು ಜನತೆಗೆ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಕೆಲವರು ‘ಕಾರ್ತಿಕ್​ಗೂ ಈ ಪರಿ ಕ್ರೇಜ್ ಇಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿನಿಮಾ ಮಾಡ್ತಾರೆ ವರ್ತೂರು ಸಂತೋಷ್; ಸೂಚನೆ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

ಹೊಸಕೋಟೆ, ಚನ್ನಪಟ್ಟಣಕ್ಕೆ ವರ್ತೂರು ಸಂತೋಷ್ ತೆರಳಿದ್ದರು. ಅಲ್ಲಿಯೂ ಇದೇ ರೀತಿಯ ಬೆಂಬಲ ಸಿಕ್ಕಿದೆ. ಇದರಿಂದ ಅವರಿಗೆ ಖುಷಿ ಆಗಿದೆ. ಅವರ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಿದೆ. ಮುಂದಿನ ವರ್ಷಗಳಲ್ಲಿ ಅವರು ಸಿನಿಮಾ ನಿರ್ಮಾಣ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ