ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​

ಅಯೋಧ್ಯೆಗೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ನಟ ಅಮಿತಾಭ್​ ಬಚ್ಚನ್​ ಅವರು ಕಳೆದ ತಿಂಗಳು ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈಗ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಮತ್ತೆ ಅಯೋಧ್ಯೆ ಭೇಟಿ ನೀಡಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನೇಕ ಪ್ರಾಜೆಕ್ಟ್​ಗಳಲ್ಲಿ ಅಮಿತಾಭ್​ ಬಚ್ಚನ್​ ಬ್ಯುಸಿ ಆಗಿದ್ದಾರೆ.

ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​
ಅಮಿತಾಭ್​ ಬಚ್ಚನ್​
Follow us
ಮದನ್​ ಕುಮಾರ್​
|

Updated on: Feb 09, 2024 | 1:06 PM

ಬಾಲಿವುಡ್ ಸೂಪರ್​ ಸ್ಟಾರ್​ ಅಮಿತಾಭ್​ ಬಚ್ಚನ್ (Amitabh Bachchan) ಅವರು ಎರಡನೇ ಬಾರಿಗೆ ಅಯೋಧ್ಯೆಗೆ (Ayodhya) ಭೇಟಿ ನೀಡಿದ್ದಾರೆ. ಇತ್ತೀಚೆಗೆ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರಕ್ಕೆ (Ram Mandir) ಅವರು ಮತ್ತೊಮ್ಮೆ ಭೇಟಿ ನೀಡುವ ಸಾಧ್ಯತೆ ಇದೆ. ಆಭರಣ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ‘ಆಜ್ ತಕ್’ ವರದಿಯ ಪ್ರಕಾರ, ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈವೆಂಟ್‌ನಲ್ಲಿ ‘ಬಿಗ್​ ಬಿ’ ಅವರು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಕಳೆದ ತಿಂಗಳು ಪ್ರಾಣ ಪ್ರತಿಷ್ಠಾಪನೆಯಲ್ಲಿ ಅಮಿತಾಭ್ ಬಚ್ಚನ್​ ಭಾಗವಹಿಸಿದ್ದರು. ಪುತ್ರ ಅಭಿಷೇಕ್ ಬಚ್ಚನ್​ ಜೊತೆ ಅವರು ಸಮಾರಂಭಕ್ಕೆ ಬಂದಿದ್ದರು.

ಅಯೋಧ್ಯೆಯಲ್ಲಿ ರಾಮಮಂದಿರ ಜನವರಿ 22ರಂದು ಉದ್ಘಾಟನೆಗೊಂಡಿತು. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು, ಹೆಸರಾಂತ ಕಲಾವಿದರು ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು. ತಿಂಗಳು ಕಳೆಯುವುದರೊಳಗೆ ಅಯೋಧ್ಯೆಗೆ ಅಮಿತಾಭ್​ ಬಚ್ಚನ್​ ಅವರು ಎರಡನೇ ಬಾರಿಗೆ ಭೇಟಿ ನೀಡಿರುವುದು ವಿಶೇಷ. ಇನ್ನೂ ಅನೇಕ ಸೆಲೆಬ್ರಿಟಿಗಳು ಅಯೋಧ್ಯೆ ಭೇಟಿ ನೀಡುತ್ತಿದ್ದಾರೆ.

ಅಯೋಧ್ಯೆಯಲ್ಲಿ ಮನೆ ಮಾಡಲು ಭೂಮಿ ಖರೀದಿಸಿದ ಅಮಿತಾಭ್; ಬೆಲೆ ಎಷ್ಟು ಕೋಟಿ?

ಮೊದಲ ಬಾರಿಗೆ ಆಯೋಧ್ಯೆಗೆ ಬಂದು ಶ್ರೀರಾಮನ ದರ್ಶನ ಪಡೆದ ನಂತರ ಅಮಿತಾಭ್​ ಬಚ್ಚನ್​ ಅವರು ಫೋಟೋ ಹಂಚಿಕೊಂಡಿದ್ದರು. ಅಲ್ಲದೇ ಅವರು ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ‘ದೈವಿಕ ಚೈತನ್ಯದ ಪ್ರಸ್ತುತತೆಯಿಂದ ತುಂಬಿದ ದಿನ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದಿಂದ ಹಿಂತಿರುಗಿದ್ದೇನೆ. ವೈಭವ, ಆಚರಣೆ ಮತ್ತು ನಂಬಿಕೆಯು ಈ ದೇವಾಲಯದಲ್ಲಿದೆ. ರಾಮನ ಜನ್ಮಸ್ಥಳ. ಇದಕ್ಕಿಂತ ಹೆಚ್ಚಿನದನ್ನು ಹೇಳಲಾಗುವುದಿಲ್ಲ. ಏಕೆಂದರೆ ನಂಬಿಕೆಯನ್ನು ವಿವರಿಸಲಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.

ಬಾಲಿವುಡ್​ ವರ್ಸಸ್​ ಸೌತ್​: ಯಾವುದರ ಪರ ವಹಿಸಿದ್ರು ಅಮಿತಾಭ್​ ಬಚ್ಚನ್​?

ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಅಲ್ಲಿನ ಅಯೋಧ್ಯೆಯಲ್ಲಿ ರಿಯಲ್​ ಎಸ್ಟೇಟ್​ ಬಿಸ್ನೆಸ್​ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಮಿತಾಭ್​ ಬಚ್ಚನ್​ ಅವರು ಅಯೋಧ್ಯೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಖರೀದಿ ಮಾಡಿದ್ದಾರೆ ಎಂದು ಈ ಮೊದಲು ಸುದ್ದಿ ಆಗುತ್ತು. ರಿಯಲ್​ ಎಸ್ಟೇಟ್​ನಲ್ಲಿ ಅವರು ಹೂಡಿಕೆ ಮಾಡಿರುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಈಗಲೂ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದಲೂ ಅವರು ಅದಾಯ ಪಡೆಯುತ್ತಾರೆ. ಕಿರುತೆರೆ ಕಾರ್ಯಕ್ರಮಗಳ ನಿರೂಪಣೆ ಮೂಲಕವೂ ಅವರಿಗೆ ಬಹುಕೋಟಿ ರೂಪಾಯಿ ಸಂಭಾವನೆ ಬರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ