Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ ವರ್ಸಸ್​ ಸೌತ್​: ಯಾವುದರ ಪರ ವಹಿಸಿದ್ರು ಅಮಿತಾಭ್​ ಬಚ್ಚನ್​?

ಮಲಯಾಳಂ ಮತ್ತು ತಮಿಳಿನ ಕೆಲವು ಸಿನಿಮಾಗಳು ತುಂಬ ವಿಶೇಷವಾಗಿರುತ್ತವೆ ಎಂದು ಅಮಿತಾಭ್​ ಬಚ್ಚನ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ‘ಯಾವುದೋ ಒಂದು ಭಾಷೆಯ ಸಿನಿಮಾದ ಕಡೆಗೆ ಕೈ ತೋರಿಸಿ, ಅವರ ಸಿನಿಮಾ ಚೆನ್ನಾಗಿ ಓಡುತ್ತಿವೆ ಮತ್ತು ನಮ್ಮ ಸಿನಿಮಾ ಓಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಬಾಲಿವುಡ್​ ವರ್ಸಸ್​ ಸೌತ್​: ಯಾವುದರ ಪರ ವಹಿಸಿದ್ರು ಅಮಿತಾಭ್​ ಬಚ್ಚನ್​?
ಅಮಿತಾಭ್​ ಬಚ್ಚನ್​
Follow us
ಮದನ್​ ಕುಮಾರ್​
|

Updated on: Jan 28, 2024 | 8:14 AM

ಚಿತ್ರರಂಗದಲ್ಲಿ ಏಳು-ಬೀಳುಗಳು ಸಹಜ. ಇತ್ತೀಚಿನ ಕೆಲವು ವರ್ಷಗಳಲ್ಲಿ ಬಾಲಿವುಡ್​ (Bollywood) ಸಿನಿಮಾಗಳು ಮಂಕಾಗಿದ್ದವು. ದಕ್ಷಿಣ ಭಾರತದ ಚಿತ್ರಗಳು (South Indian Films) ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದವು. ಆದರೆ ಈಗ ಪರಿಸ್ಥಿತಿ ಮತ್ತೆ ಬದಲಾಗಿದೆ. ಸೌತ್​ ಸಿನಿಮಾಗಳ ರೀತಿಯೇ ಹಿಂದಿ ಚಿತ್ರಗಳು ಕೂಡ ಅಬ್ಬರಿಸುತ್ತಿವೆ. ಆದರೂ ಸೌತ್​ ವರ್ಸಸ್​ ಬಾಲಿವುಡ್​ ಎಂಬ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಅಮಿತಾಭ್​ ಬಚ್ಚನ್​ (Amitabh Bachchan) ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಪ್ರಾದೇಶಿಕ ಸಿನಿಮಾಗಳು ಚೆನ್ನಾಗಿ ಓಡುತ್ತಿವೆ. ಆದರೆ ಅವರ ಜೊತೆ ಮಾತನಾಡಿದಾಗ ತಿಳಿಯುತ್ತದೆ. ಹಿಂದಿ ಚಿತ್ರರಂಗದ ರೀತಿಯೇ ಅವರು ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಉಡುಗೆ ಬದಲಾಯಿಸಿದ್ದಕ್ಕೆ ಅವರು ಸುಂದರವಾಗಿ ಕಾಣುತ್ತಿದ್ದಾರೆ. ನಾನು ಭೇಟಿಯಾದ ಅನೇಕರು ಈ ಮಾತು ಹೇಳಿದ್ದಾರೆ. ನಿಮ್ಮ ದೀವಾರ್​, ಶೋಲೆ, ಶಕ್ತಿ ಮುಂತಾದ ಸಿನಿಮಾದ ಕಥೆಗಳೇ ನಮ್ಮ ಸಿನಿಮಾಗಳಲ್ಲೂ ಇವೆ ಎನ್ನುತ್ತಾರೆ’ ಎಂದು ಅಮಿತಾಭ್​ ಬಚ್ಚನ್​ ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ ಬೀಚ್​ನ ಸೌಂದರ್ಯ ಹೊಗಳಿದ ಸೆಹ್ವಾಗ್​; ಅಮಿತಾಭ್​ ಬಚ್ಚನ್​ ಪ್ರತಿಕ್ರಿಯೆ ಏನು?

ಮಲಯಾಳಂ ಮತ್ತು ತಮಿಳಿನ ಕೆಲವು ಸಿನಿಮಾಗಳು ತುಂಬ ವಿಶೇಷವಾಗಿರುತ್ತವೆ ಎಂದು ಅಮಿತಾಭ್​ ಬಚ್ಚನ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಯಾವುದೋ ಒಂದು ಭಾಷೆಯ ಸಿನಿಮಾದ ಕಡೆಗೆ ಕೈ ತೋರಿಸಿ, ಅವರ ಸಿನಿಮಾ ಚೆನ್ನಾಗಿ ಓಡುತ್ತಿವೆ ಮತ್ತು ನಮ್ಮ ಸಿನಿಮಾ ಓಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದಿದ್ದಾರೆ ಅಮಿತಾಭ್​ ಬಚ್ಚನ್​​. ಇದರ ಜೊತೆ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ಸೂರ್ಯ, ಅಮಿತಾಭ್​, ಅಕ್ಷಯ್​ ಕುಮಾರ್​; ಏನ್​ ಸಮಾಚಾರ?

ಅಮಿತಾಭ್​ ಬಚ್ಚನ್​ ಅವರಿಗೆ ಈಗ 81 ವರ್ಷ ವಯಸ್ಸು. ಈಗಲೂ ಅವರು ಬ್ಯುಸಿ ನಟನಾಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಇರುವ ಅನುಭವ ಅಪಾರ. 50 ವರ್ಷಗಳಿಗೂ ಹೆಚ್ಚು ಕಾಲ ಅವರು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಬಣ್ಣದ ಲೋಕದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಟನೆ ಜೊತೆಗೆ ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಮಿತಾಭ್​ ಬಚ್ಚನ್​ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ