3 ದಿನ ಕಳೆದರೂ 100 ಕೋಟಿ ರೂಪಾಯಿ ಗಡಿ ಮುಟ್ಟಲಿಲ್ಲ ‘ಫೈಟರ್’ ಸಿನಿಮಾ ಕಲೆಕ್ಷನ್
2ನೇ ದಿನದ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಮೂರು ದಿನದಲ್ಲಿ ‘ಫೈಟರ್’ ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ಮೀರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಶನಿವಾರ (ಜ.27) ವೀಕೆಂಡ್ ಇದ್ದರೂ ಕೂಡ ಕಲೆಕ್ಷನ್ ಇಳಿಮುಖ ಆಯಿತು. 100 ಕೋಟಿ ರೂಪಾಯಿ ಗಡಿ ಮುಟ್ಟಲು ಈ ಸಿನಿಮಾಗೆ ಇನ್ನೂ 6.60 ಕೋಟಿ ರೂಪಾಯಿ ಬೇಕು.
ಬಾಲಿವುಡ್ನಲ್ಲಿ ‘ಫೈಟರ್’ ಸಿನಿಮಾ (Fighter Movie) ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾದಲ್ಲಿ ಹೃತಿಕ್ ರೋಷನ್ (Hrithik Roshan) ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ್ದಾರೆ. ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ಈ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಳ್ಳಬಹುದು ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡದಿದ್ದರೂ ಕೂಡ ನಿರ್ಮಾಪಕರು ಖುಷಿ ಆಗುವ ರೀತಿಯಲ್ಲಿ ‘ಫೈಟರ್’ ಸಿನಿಮಾ ಗಳಿಕೆ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಮೂರು ದಿನಕ್ಕೆ ಈ ಸಿನಿಮಾದ ಕಲೆಕ್ಷನ್ (Fighter Movie Collection) 93.40 ಕೋಟಿ ರೂಪಾಯಿ ಆಗಿದೆ.
ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅವರು ನಿರ್ದೇಶನ ಮಾಡಿದ್ದ ‘ಪಠಾಣ್’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿತ್ತು. ಆ ಸಿನಿಮಾಗೆ ಹೋಲಿಸಿದರೆ ‘ಫೈಟರ್’ ಸಿನಿಮಾದ ಗಳಿಕೆ ಕೊಂಚ ಡಲ್ ಆಗಿದೆ. ಹಾಗಿದ್ದರೂ ಕೂಡ ಪ್ರತಿ ದಿನ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಮಾಯಿ ಆಗುತ್ತಿದೆ.
ಇದನ್ನೂ ಓದಿ: ಹೃತಿಕ್-ದೀಪಿಕಾ ನಟನೆಯ ‘ಫೈಟರ್’ ಹೇಗಿದೆ? ನೆಟ್ಟಿಗರು ಹೇಳಿದ್ದು ಹೀಗೆ..
ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಫೈಟರ್’ ಸಿನಿಮಾದ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ದಿನ ಅಂದರೆ, ಜನವರಿ 25ರಂದು ಈ ಸಿನಿಮಾ ಗಳಿಸಿದ್ದು 24.60 ಕೋಟಿ ರೂಪಾಯಿ. ಎರಡನೇ ದಿನವಾದ ಶುಕ್ರವಾರ (ಜನವರಿ 26) ಈ ಚಿತ್ರ 41.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಇನ್ನೇನು ಇದೇ ರೀತಿಯಲ್ಲಿ ಕಲೆಕ್ಷನ್ ಹೆಚ್ಚಲಿದೆ ಎಂದುಕೊಂಡರೆ, ಮೂರನೇ ದಿನಕ್ಕೆ ಸ್ವಲ್ಪ ಕುಸಿಯಿತು. ಶನಿವಾರ (ಜ.27) ‘ಫೈಟರ್’ ಸಿನಿಮಾ 27.60 ಕೋಟಿ ರೂಪಾಯಿ ಗಳಿಸಿದೆ.
View this post on Instagram
2ನೇ ದಿನದ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಮೂರು ದಿನದಲ್ಲಿ ‘ಫೈಟರ್’ ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ಮೀರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಶನಿವಾರ ವೀಕೆಂಡ್ ಇದ್ದರೂ ಕೂಡ ಕಲೆಕ್ಷನ್ ಇಳಿಮುಖ ಆಯಿತು. 100 ಕೋಟಿ ರೂಪಾಯಿ ಗಡಿ ಮುಟ್ಟಲು ಈ ಸಿನಿಮಾಗೆ ಇನ್ನೂ 6.60 ಕೋಟಿ ರೂಪಾಯಿ ಬೇಕು. ನಾಲ್ಕನೇ ದಿನವಾದ ಇಂದು (ಜನವರಿ 28) ಅನಾಯಾಸವಾಗಿ ಈ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ