ಹೃತಿಕ್-ದೀಪಿಕಾ ನಟನೆಯ ‘ಫೈಟರ್’ ಹೇಗಿದೆ? ನೆಟ್ಟಿಗರು ಹೇಳಿದ್ದು ಹೀಗೆ…

Fighter Twitter Review: ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ನೆಟ್ಟಿಗರು ಹೇಳಿರುವುದು ಹೀಗೆ.

ಹೃತಿಕ್-ದೀಪಿಕಾ ನಟನೆಯ ‘ಫೈಟರ್’ ಹೇಗಿದೆ? ನೆಟ್ಟಿಗರು ಹೇಳಿದ್ದು ಹೀಗೆ...
Follow us
ಮಂಜುನಾಥ ಸಿ.
|

Updated on: Jan 25, 2024 | 2:34 PM

ಹೃತಿಕ್ ರೋಷನ್ (Hritik Roshan) ಹಾಗೂ ದೀಪಿಕಾ ಪಡುಕೋನೆ ನಟನೆಯ ‘ಫೈಟರ್’ ಸಿನಿಮಾ ಬಿಡುಗಡೆ ಆಗಿದೆ. ಸಿದ್ಧಾರ್ಥ್ ಆನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಿನಿಮಾದ ಕತೆ ಭಾರತೀಯ ವಾಯುಸೇನೆಯ ಕತೆಯನ್ನು ಒಳಗೊಂಡಿದೆ. ಭಾರತದ ಮೊಟ್ಟ ಮೊದಲ ಫೈಟರ್ ಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾವನ್ನು ಮೊದಲ ದಿನ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೇ ಏನೆಂದಿದ್ದಾರೆ? ಇಲ್ಲಿದೆ ‘ಫೈಟರ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ.

‘ಇದು ಹಾಲಿವುಡ್ ಲೆವೆಲ್ ಸಿನಿಮಾ. ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಆನಂದ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ’ ಎಂದಿದ್ದಾರೆ ಸಿನಿಮಾದ ಮೊದಲ ದಿನ ಮೊದಲ ಶೋ ನೋಡಿದ ಅಭಿಜಿತ್. ‘ಫೈಟರ್, ಫುಲ್ ಆಕ್ಷನ್ ಸಿನಿಮಾ. ಪಕ್ಕಾ ಪೈಸಾ ವಸೂಲ್. ದೇಶಪ್ರೇಮದ ಭಾವುಕ ಕತೆ ಸಿನಿಮಾದಲ್ಲಿದೆ. ತೋರಿಕೆಯ ಪಾಕ್ ಪ್ರೇಮ ಇದರಲ್ಲಿಲ್ಲ. ಈಗಲೇ ಹೋಗಿ ಈ ಏರಿಯಲ್ ಆಕ್ಷನ್ ಸಿನಿಮಾ ವೀಕ್ಷಿಸಿ’ ಎಂದಿದ್ದಾರೆ ಬನ್ನಿ ಕೆಕೆ. ಜೊತೆಗೆ ಸಿನಿಮಾದ ಕೆಲವು ವಿಡಿಯೋ ತುಣುಕುಗಳನ್ನು ಸಹ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಹೃತಿಕ್ ರೋಷನ್ ಆಸ್ತಿ ಎಷ್ಟು ಸಾವಿರ ಕೋಟಿ ರೂಪಾಯಿ? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?

‘ಫೈಟರ್’ ಹೃತಿಕ್ ರೋಷನ್ ನಟನೆಯ ಅತ್ಯುತ್ತಮ ಸಿನಿಮಾ. ಸುಂದರವಾದ, ಬುದ್ಧಿವಂತಿಕೆಯಿಂದ ನಿರ್ದೇಶನ ಮಾಡಿರುವ ಸಿನಿಮಾ ಇದು. ಸಿದ್ಧಾರ್ಥ್ ಆನಂದ್ ಅವರ ಮಾಸ್ಟರ್ ಪೀಸ್ ಇದು. ಹೃತಿಕ್ ರೋಷನ್ ಅವರ ನಟನೆ, ಆಕ್ಷನ್ ಅತ್ಯದ್ಭುತ. ದೀಪಿಕಾ ಪಡುಕೋಣೆ ಸಖತ್ ಫರ್ಪಾರ್ಮೆನ್ಸ್. ಅನಿಲ್ ಕಪೂರ್ ನಟನೆಯೂ ಅತ್ಯದ್ಭುತ ಎಂದಿದ್ದಾರೆ ರಾಹುಲ್ ಮೀನ.

‘ಫೈಟರ್ ಹೃತಿಕ್ ರೋಷನ್ ಅವರ ಅದ್ಭುತ ಅಭಿನಯ ಅವರ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸುವ ಒಂದು ಆಹ್ಲಾದಕರವಾದ ಏರೋ ಆಕ್ಷನ್ ಸಿನಿಮಾ ಫೈಟರ್. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅದ್ಭುತ ಅನುಭವ ನೀಡಿದ್ದಾರೆ. ಹೃತಿಕ್ ಮತ್ತು ದೀಪಿಕಾ ನಡುವಿನ ಕೆಮಿಸ್ಟ್ರಿ ಮನಸ್ಸಿಗೆ ಮುದ ನೀಡುತ್ತದೆ. ಆಕರ್ಷಕವಾದ ಕಥಾಹಂದರ, ಪರಿಣಾಮಕಾರಿ ಸಿಜಿಐ ಮಾಡಿರುವ ಕಮಾಲ್ ಅನ್ನು ಚಿತ್ರಮಂದಿರಗಳಲ್ಲಿ ನೋಡಲೇಬೇಕು. ಗೂಸ್‌ಬಂಪ್ಸ್, ಭಾವುಕ ಸನ್ನಿವೇಶಗಳು, ಉನ್ನತ ದರ್ಜೆಯ ನಿರ್ದೇಶನ, ಫೈಟರ್ ಚಿತ್ರತಂಡ ನಮ್ಮ ವಾಯುಸೇನೆಗೆ ಸೂಕ್ತ ಗೌರವ ಸಲ್ಲಿಸಿದೆ’ ಎಂದಿದ್ದಾರೆ ಹರಿಮಂದೇರ್.

‘ಫೈಟರ್’ ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರಿಗೆ ಗೊತ್ತಾಗುತ್ತದೆ, ‘ಪಠಾಣ್’ ಸಿನಿಮಾ ಗೆದ್ದಿದ್ದು ಶಾರುಖ್ ಖಾನ್ ಇಂದಾಗಿ ಅಲ್ಲ ಬದಲಿಗೆ ಸಿದ್ಧಾರ್ಥ್ ಆನಂದ್ ಮಾಡಿರುವ ಮ್ಯಾಜಿಕ್​ನಿಂದಾಗಿ ಎಂದು ಬರೆದಿದ್ದಾರೆ ರೂಪೇಶ್ ಭಾರತೀಯ. ಸಾಯಿರಾಜ್ ಶಿಂಧೆ ಮಾಡಿರುವ ಟ್ವೀಟ್​ನಂತೆ, ‘ಫೈಟರ್’ ಸಿನಿಮಾ ಅತ್ಯುತ್ತಮ ಸಿನಿಮ್ಯಾಟಿಕ್ ಬ್ಯೂಟಿ. ಅತ್ಯುತ್ತಮ ನಟನೆ, ಬೋರ್ ಹೊಡೆಸದ ಕತೆ, ದೃಶ್ಯಕ್ಕೆ ತಕ್ಕ ಹಿನ್ನೆಲೆ ಸಂಗೀತ, ಭಾವನೆಗಳ ಸರಿಯಾದ ಮಿಶ್ರಣ, ಈ ಸಿನಿಮಾ ಪಕ್ಕಾ ಗೆಲ್ಲಲಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ