ಹೃತಿಕ್ ರೋಷನ್ ಆಸ್ತಿ ಎಷ್ಟು ಸಾವಿರ ಕೋಟಿ ರೂಪಾಯಿ? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?

Hrithik Roshan Birthday: ಹೃತಿಕ್ ರೋಷನ್ ಅವರು ಬ್ರ್ಯಾಂಡ್ ಪ್ರಚಾರಕ್ಕಾಗಿ 10-12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್​​ಸ್ಟಾಗ್ರಾಮ್​ ಮೂಲಕ ಪ್ರಚಾರ ಮಾಡಲು ಪ್ರತಿ ಪೋಸ್ಟ್​ಗೆ 4-5 ಕೋಟಿ ರೂಪಾಯಿ ಪಡೆಯುತ್ತಾರೆ.

ಹೃತಿಕ್ ರೋಷನ್ ಆಸ್ತಿ ಎಷ್ಟು ಸಾವಿರ ಕೋಟಿ ರೂಪಾಯಿ? ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?
ಹೃತಿಕ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 10, 2024 | 8:07 AM

ನಟ ಹೃತಿಕ್ ರೋಷನ್ (Hrithik Roshan) ಅವರು ಇಂದು (ಜನವರಿ 9) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಹೃತಿಕ್ ರೋಷನ್ ಅವರು 12ನೇ ವಯಸ್ಸಿಗೆ ಬಣ್ಣದ ಬದುಕು ಆರಂಭಿಸಿದರು. ರಜನಿಕಾಂತ್ ನಟನೆಯ ‘ಭಗವಾನ್ ದಾದ’ ಸಿನಿಮಾದಲ್ಲಿ ಹೃತಿಕ್ ರೋಷನ್ ಬಾಲ ಕಲಾವಿದನಾಗಿ ನಟಿಸಿದರು. ಈ ಸಿನಿಮಾದಲ್ಲಿ ಅವರ ತಂದೆ ರಾಕೇಶ್ ರೋಷನ್ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಈ ಚಿತ್ರವನ್ನು ಹೃತಿಕ್ ತಾತ ಜೆ. ಓಂ ಪ್ರಕಾಶ್ ನಿರ್ದೇಶನ ಮಾಡಿದ್ದರು. ಹೃತಿಕ್ ಬರ್ತ್​ಡೇ ದಿನ ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಹೃತಿಕ್ ರೋಷನ್ ಅವರು ‘ಕಹೋ ನ ಪ್ಯಾರ್ ಹೈ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಹೃತಿಕ್ ರೋಷನ್ ಅವರು ದೊಡ್ಡ ಗೆಲುವು ಕಂಡರು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಆಸ್ತಿ 3,101 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹೃತಿಕ್ ರೋಷನ್ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿಂದ 100 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಹೆಚ್ಚೆಚ್ಚು ಸಿನಿಮಾ ಮಾಡಲು ಅವರು ಇಷ್ಟಪಡುತ್ತಾರೆ.

ಹೃತಿಕ್ ರೋಷನ್ ಅವರು ಬ್ರ್ಯಾಂಡ್ ಪ್ರಚಾರಕ್ಕಾಗಿ 10-12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇನ್​​ಸ್ಟಾಗ್ರಾಮ್​ ಮೂಲಕ ಪ್ರಚಾರ ಮಾಡಲು ಪ್ರತಿ ಪೋಸ್ಟ್​ಗೆ 4-5 ಕೋಟಿ ರೂಪಾಯಿ ಪಡೆಯುತ್ತಾರೆ. ಎಚ್​ಆರ್​ಎಕ್ಸ್​ ಬ್ರ್ಯಾಂಡ್​ನ ಹೃತಿಕ್ ಆರಂಭಿಸಿದ್ದಾರೆ. ಶ್ಯೂ, ಶರ್ಟ್​ ಸೇರಿ ಅನೇಕ ಸ್ಪೋರ್ಟ್ಸ್ ವಸ್ತುಗಳು ಇದರಲ್ಲಿ ಸಿಗುತ್ತವೆ. ಈ ಕಂಪನಿಯ ಮೌಲ್ಯ 200 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಹೃತಿಕ್ ರೋಷನ್ ಅವರು ಮುಂಬೈನ ಜುಹುದಲ್ಲಿ ಡುಪ್ಲೆಕ್ಸ್ ಮನೆ ಹೊಂದಿದ್ದು, ಇದರ ಬೆಲೆ 97.50 ಕೋಟಿ ರೂಪಾಯಿ. ಜುಹುದಲ್ಲಿ ಪೆಂಟ್​ಹೌಸ್​ ಹೊಂದಿದ್ದು, ಇದರ ಬೆಲೆ 67 ಕೋಟಿ ರೂಪಾಯಿ ಇದೆ. ಜುಹುದಲ್ಲಿ ಮತ್ತೊಂದು ಅಪಾರ್ಟ್​​ಮೆಂಟ್ ಹೊಂದಿದ್ದು ಇದು 32 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಲೋನೋವಾಲಾದಲ್ಲಿ ಫಾರ್ಮ್​ಹೌಸ್ ಹೊಂದಿದ್ದು 7 ಎಕರೆಯಲ್ಲಿದೆ. ಇದು ಕೂಡ ನೂರಾರು ಕೋಟಿ ಬೆಲೆ ಬಾಳುತ್ತದೆ.

ಹೃತಿಕ್ ರೋಷನ್ ಅವರು ಸಾಕಷ್ಟು ಲಕ್ಷುರಿ ಕಾರ್ ಕಲೆಕ್ಷನ್ ಹೊಂದಿದ್ದಾರೆ. ಅವರ ಬಳಿ ಬಿಎಂಡಬ್ಲ್ಯೂ ಕಾರಿದೆ. ಮಸ್ಟಂಗ್, ಮರ್ಸೀಡಿಸ್ ಹಾಗೂ ಇತರ ಲಕ್ಷುರಿ ಕಾರುಗಳ ಕಲೆಕ್ಷನ್ ಇದೆ. ವ್ಯಾನಿಟಿ ವ್ಯಾನ್ ಇದ್ದು ಇದರ ಬೆಲೆ 3 ಕೋಟಿ ರೂಪಾಯಿ.

ಇದನ್ನೂ ಓದಿ: ಹೃತಿಕ್ ರೋಷನ್-ಜೂ ಎನ್​ಟಿಆರ್ ಸಿನಿಮಾ ಬಿಡುಗಡೆ ಯಾವಾಗ?

ಹೃತಿಕ್ ರೋಷನ್ ಅವರು ‘ಫೈಟರ್’ ಸಿನಿಮಾ ರಿಲೀಸ್​ಗಾಗಿ ಕಾದಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಆಗಿದ್ದಾರೆ. ಅನಿಲ್ ಕಪೂರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪಠಾಣ್’ ಗೆಲುವಿನ ಬಳಿಕ ಮತ್ತೊಂದು ಗೆಲವಿಗಾಗಿ ಅವರು ಕಾದಿದ್ದಾರೆ. ಈ ಸಿನಿಮಾ ಜನವರಿ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:58 am, Wed, 10 January 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್