Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ವಿಮಾನದಲ್ಲಿ ಎಂಟ್ರಿ ಕೊಟ್ಟ ‘ಗುಂಟೂರು ಖಾರಂ’ ತಂಡ; ಹೈಲೈಟ್ ಆದ ಶ್ರೀಲೀಲಾ

‘ಗುಂಟೂರು ಖಾರಂ’ ಚಿತ್ರಕ್ಕೆ ಈ ಮೊದಲು ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಆದರೆ, ಅವರು ಚಿತ್ರದಿಂದ ಹೊರ ನಡೆದರು. ಅತಿಥಿ ಪಾತ್ರದಲ್ಲಿದ್ದ ಶ್ರೀಲೀಲಾ ನಾಯಕಿ ಆದರು. ಈಗ ಸಿನಿಮಾದಲ್ಲಿ ಮೀನಾಕ್ಷಿ ಅವರದ್ದು ಕೇವಲ ಅತಿಥಿ ಪಾತ್ರ ಎನ್ನಲಾಗುತ್ತಿದೆ.

ಖಾಸಗಿ ವಿಮಾನದಲ್ಲಿ ಎಂಟ್ರಿ ಕೊಟ್ಟ ‘ಗುಂಟೂರು ಖಾರಂ’ ತಂಡ; ಹೈಲೈಟ್ ಆದ ಶ್ರೀಲೀಲಾ
ಗುಂಟೂರು ಖಾರಂ ಟೀಂ
Follow us
ರಾಜೇಶ್ ದುಗ್ಗುಮನೆ
|

Updated on: Jan 10, 2024 | 7:03 AM

‘ಗುಂಟೂರು ಖಾರಂ’ ಸಿನಿಮಾ (Guntur Kaaram Movie) ರಿಲೀಸ್​ಗೆ ಇನ್ನು ಬಾಕಿ ಇರೋದು ಎರಡು ದಿನ ಮಾತ್ರ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಸಿನಿಮಾ ಕೆಲಸಗಳು ವಿಳಂಬ ಆಗಿದ್ದರಿಂದ ಸಿನಿಮಾ ಟ್ರೇಲರ್ ಹಾಗೂ ಇವೆಂಟ್ ಕೂಡ ವಿಳಂಬ ಆಯಿತು. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಮಂಗಳವಾರ (ಜನವರಿ 9) ಸಿನಿಮಾದ ಪ್ರೀರಿಲೀಸ್ ಇವೆಂಟ್ ಗುಂಟೂರಿನಲ್ಲಿ ನಡೆದಿದೆ. ಇದಕ್ಕೆ ಇಡೀ ತಂಡ ಹೈದರಾಬಾದ್​ನಿಂದ ಖಾಸಗಿ ವಿಮಾನದಲ್ಲಿ ಆಗಮಿಸಿದೆ. ಇವೆಂಟ್​ನಲ್ಲಿ ಕನ್ನಡದ ನಟಿ ಶ್ರೀಲೀಲಾ ಹೈಲೈಟ್ ಆಗಿದ್ದಾರೆ.

ಪ್ರೈವೆಟ್​ ಜೆಟ್​ನಲ್ಲಿ ತಂಡ ಪೋಸ್ ಕೊಟ್ಟಿದೆ. ಮಹೇಶ್ ಬಾಬು ಅವರು ಹಿಂಭಾಗದಲ್ಲಿ ನಿಂತಿದ್ದಾರೆ. ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್, ನಟಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ನಿರ್ಮಾಪಕ ಎಸ್​. ರಾಧಾಕೃಷ್ಣ, ನಾಗ ವಂಶಿ, ಸಂಗೀತ ನಿರ್ದೇಶಕ ಎಸ್​ಎಸ್ ತಮನ್ ಹಾಗೂ ‘ಗುಂಟೂರು ಖಾರಂ’ ಚಿತ್ರದ ನಿಜಾಮ್ ಹಂಚಿಕೆದಾರ ದಿಲ್ ರಾಜು ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆಯುತ್ತಿದೆ. ಎಲ್ಲರ ಮುಖದಲ್ಲೂ ಮಂದಹಾಸ ಇದೆ.

‘ಗುಂಟೂರು ಖಾರಂ’ ಚಿತ್ರಕ್ಕೆ ಈ ಮೊದಲು ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಆದರೆ, ಅವರು ಚಿತ್ರದಿಂದ ಹೊರ ನಡೆದರು. ಅತಿಥಿ ಪಾತ್ರದಲ್ಲಿದ್ದ ಶ್ರೀಲೀಲಾ ನಾಯಕಿ ಆದರು. ಈಗ ಸಿನಿಮಾದಲ್ಲಿ ಮೀನಾಕ್ಷಿ ಅವರದ್ದು ಕೇವಲ ಅತಿಥಿ ಪಾತ್ರ ಎನ್ನಲಾಗುತ್ತಿದೆ. ಈ ಮೂಲಕ ಮುಖ್ಯಭೂಮಿಕೆಯಲ್ಲಿ ಮಿಂಚಲು ಶ್ರೀಲೀಲಾ ರೆಡಿ ಆಗಿದ್ದಾರೆ.

ಇದನ್ನೂ ಓದಿ: ಥಿಯೇಟರ್​ನಲ್ಲಿ ಓಡುತ್ತಿರುವಾಗಲೇ ಒಟಿಟಿಗೆ ಬಂತು ‘ಸರ್ಕಾರು ವಾರಿ ಪಾಟ’; ಮಹೇಶ್ ಬಾಬು ಫ್ಯಾನ್ಸ್ ಆಕ್ರೋಶ

‘ಸರ್ಕಾರು ವಾರಿ ಪಾಟ’ ಸಿನಿಮಾ ಬಳಿಕ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ರಿಲೀಸ್ ಆಗುತ್ತಿದೆ. ಟ್ರೇಲರ್​ ಮಾಸ್ ಆಗಿ ಮೂಡಿ ಬಂದಿದೆ. ಮಹೇಶ್ ಬಾಬು ಅವರ ಗೆಟಪ್ ಜನರಿಗೆ ಇಷ್ಟ ಆಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ಹಲವು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅವುಗಳ ಜೊತೆ ಈ ಚಿತ್ರ ಸ್ಪರ್ಧೆ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ