ಬಾಬಿ ಡಿಯೋಲ್​ ಜನ್ಮದಿನ: 2023ರಲ್ಲಿ 3 ಸೂಪರ್​ ಹಿಟ್​ ಚಿತ್ರ ನೀಡಿದ ತಂದೆ-ಮಕ್ಕಳು

ಬಾಬಿ ಡಿಯೋಲ್​ ಅವರ ಸಹೋದರ ಸನ್ನಿ ಡಿಯೋಲ್​ ಹಾಗೂ ತಂದೆ ಧರ್ಮೇಂದ್ರ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ಈ ಮೂವರಿಗೂ ಯಶಸ್ಸು ಸಿಕ್ಕಿತ್ತು. ಹಾಗಾಗಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಅದೇ ಖುಷಿಯಲ್ಲಿ ಈಗ ಬಾಬಿ ಡಿಯೋಲ್​ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ಬಾಬಿ ಡಿಯೋಲ್​ ಜನ್ಮದಿನ: 2023ರಲ್ಲಿ 3 ಸೂಪರ್​ ಹಿಟ್​ ಚಿತ್ರ ನೀಡಿದ ತಂದೆ-ಮಕ್ಕಳು
ಬಾಬಿ ಡಿಯೋಲ್​, ಸನ್ನಿ ಡಿಯೋಲ್​, ಧರ್ಮೇಂದ್ರ
Follow us
ಮದನ್​ ಕುಮಾರ್​
|

Updated on: Jan 27, 2024 | 11:42 AM

ಬಾಲಿವುಡ್​ ನಟ ಬಾಬಿ ಡಿಯೋಲ್​ (Bobby Deol) ಅವರಿಗೆ ಇಂದು (ಜನವರಿ 27) ಜನ್ಮದಿನದ (Bobby Deol Birthday) ಸಂಭ್ರಮ. ಈ ಖುಷಿಯಲ್ಲಿ ಅವರ ಸಹೋದರ ಸನ್ನಿ ಡಿಯೋಲ್​ (Sunny Deol) ವಿಶ್ ಮಾಡಿದ್ದಾರೆ. ತಮ್ಮನ ಫೋಟೋವನ್ನು ಹಂಚಿಕೊಂಡು ಅವರು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ತಂದೆ ಧರ್ಮೇಂದ್ರ ಜೊತೆಗೆ ತಾವಿಬ್ಬರೂ ಇವರು ಫೋಟೋವನ್ನು ಕೂಡ ಸನ್ನಿ ಡಿಯೋಲ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಈ ತಂದೆ-ಮಕ್ಕಳು ತಮ್ಮದೇ ಛಾಪು ಮೂಡಿಸಿದ್ದಾರೆ. 2023ರಲ್ಲಿ ಈ ಮೂವರು ಕೂಡ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆ ಕಾರಣದಿಂದ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅದೇ ಖುಷಿಯಲ್ಲಿ ಸನ್ನಿ ಡಿಯೋಲ್ ಅವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.

2023ರ ಡಿಸೆಂಬರ್​ 1ರಂದು ‘ಅನಿಮಲ್​’ ಸಿನಿಮಾ ತೆರೆಕಂಡಿತು. ಆ ಚಿತ್ರದಲ್ಲಿ ಅಬ್ರಾರ್​ ಹಖ್​ ಎಂಬ ಪಾತ್ರದಲ್ಲಿ ಬಾಬಿ ಡಿಯೋಲ್​ ನಟಿಸಿದರು. ಒಂದೇ ಒಂದು ಡೈಲಾಗ್​ ಇಲ್ಲದ ಆ ಪಾತ್ರವನ್ನು ಅವರು ತುಂಬ ಚೆನ್ನಾಗಿ ನಿಭಾಯಿಸಿದರು. ಜನವರಿ 26ರಂದು ಆ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ಬಾಬಿ ಡಿಯೋಲ್​ ಅವರ ಜನ್ಮದಿನದ ಸಂದರ್ಭದಲ್ಲೇ ‘ಅನಿಮಲ್​’ ಒಟಿಟಿಗೆ ಬಂದಿರುವುದು ವಿಶೇಷ.

View this post on Instagram

A post shared by Sunny Deol (@iamsunnydeol)

ತಮ್ಮನ ಜನ್ಮದಿನದಂದು ಸನ್ನಿ ಡಿಯೋಲ್​ ಅವರು ಮನಸಾರೆ ಹಾರೈಸಿದ್ದಾರೆ. ಸನ್ನಿ ಡಿಯೋಲ್​ ಅವರಿಗೂ ಕಳೆದ ವರ್ಷ ಆಶಾದಾಯಕ ಆಗಿತ್ತು. ಅವರು ನಟಿಸಿದ ‘ಗದರ್​ 2’ ಸಿನಿಮಾ ಸೂಪರ್​ ಹಿಟ್​ ಆಯಿತು. ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಗಮನ ಸೆಳೆಯಿತು. ‘ಗದರ್ 2’ ಗೆಲುವಿನ ಬಳಿಕ ಸನ್ನಿ ಡಿಯೋಲ್​ ಅವರ ಬೇಡಿಕೆ ಡಬಲ್​ ಆಗಿದೆ. ಹೊಸ ಹೊಸ ಸಿನಿಮಾಗಳ ಆಫರ್​ ಅವರಿಗೆ ಸಿಗುತ್ತಿದೆ.

ಇದನ್ನೂ ಓದಿ: ‘ಆ ಸೀನ್​ ಇಲ್ಲ’: ಒಟಿಟಿಯಲ್ಲಿ ‘ಅನಿಮಲ್​’ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಬೇಸರ

ಸನ್ನಿ ಡಿಯೋಲ್​ ಮತ್ತು ಬಾಬಿ ಡಿಯೋಲ್​ ಅವರ ತಂದೆ ಧರ್ಮೇಂದ್ರ ಕೂಡ 2023ರಲ್ಲಿ ದೊಡ್ಡ ಗೆಲುವು ಕಂಡರು. ಅವರು ನಟಿಸಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಜನಮೆಚ್ಚುಗೆ  ಗಳಿಸಿತು. ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಈ ಸಿನಿಮಾದಲ್ಲಿ ಧರ್ಮೇಂದ್ರ ಅವರಿಗೆ ಒಂದು ಮುಖ್ಯ ಪಾತ್ರವಿತ್ತು. ಒಟ್ಟಿನಲ್ಲಿ ಈ ತಂದೆ-ಮಕ್ಕಳ ಸಿನಿಮಾಗಳು ಯಶಸ್ಸು ಕಂಡಿರುವುದರಿಂದ ಧರ್ಮೇಂದ್ರ ಅವರ ಕುಟುಂಬಕ್ಕೆ ಈಗ ಒಳ್ಳೆಯ ಕಾಲ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ