ರಾಮಾಯಣ ಕಥೆ ಆಧಾರಿತ ಸಿನಿಮಾದಲ್ಲಿ ಬಾಬಿ ಡಿಯೋಲ್​ಗೆ ಕುಂಭಕರ್ಣನ ಪಾತ್ರ?

ರಾಮಾಯಣದ ಪ್ರತಿ ಪಾತ್ರಕ್ಕೂ ತೂಕವಿದೆ. ರಣಬೀರ್​ ಕಪೂರ್​ ಅವರು ರಾಮನ ಪಾತ್ರ ಮಾಡುತ್ತಾರೆ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಲವು ಮಾಧ್ಯಮಗಳು ಕುಂಭಕರ್ಣನ ಪಾತ್ರದ ಬಗ್ಗೆ ಸುದ್ದಿ ಮಾಡಿವೆ. ಈ ಪಾತ್ರವನ್ನು ಬಾಬಿ ಡಿಯೋಲ್​ಗೆ ನೀಡಲಾಗುವುದು ಎಂದು ವರದಿ ಆಗಿದೆ.

ರಾಮಾಯಣ ಕಥೆ ಆಧಾರಿತ ಸಿನಿಮಾದಲ್ಲಿ ಬಾಬಿ ಡಿಯೋಲ್​ಗೆ ಕುಂಭಕರ್ಣನ ಪಾತ್ರ?
ಬಾಬಿ ಡಿಯೋಲ್​
Follow us
ಮದನ್​ ಕುಮಾರ್​
| Updated By: Digi Tech Desk

Updated on:Feb 14, 2024 | 3:00 PM

ನಟ ಬಾಬಿ ಡಿಯೋಲ್​ (Bobby Deol) ಅವರು ‘ಅನಿಮಲ್​’ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಅವರು ಮಾಡಿದ ಅಬ್ರಾರ್​ ಹಖ್​ ಎಂಬ ಪಾತ್ರ ತುಂಬ ಫೇಮಸ್​ ಆಗಿದೆ. ಅವರ ಎಂಟ್ರಿ ಸೀನ್​ ನೋಡಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಈ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಬಾಬಿ ಡಿಯೋಲ್​ ಅವರ ಬೇಡಿಕೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಂದ ಅವರಿಗೆ ಆಫರ್​ ಬರುತ್ತಿದೆ. ರಾಮಾಯಣದ (Ramayan) ಕಥೆಯನ್ನು ಆಧರಿಸಿ ನಿರ್ದೇಶಕ ನಿತೇಶ್​ ತಿವಾರಿ ಮಾಡಲಿರುವ ಸಿನಿಮಾದಲ್ಲಿ ಬಾಬಿ ಡಿಯೋಲ್​ ಅವರು ಕುಂಭಕರ್ಣನ (Kumbhakarna) ಪಾತ್ರ ಮಾಡಲಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ.

ರಾಮಾಯಣದಲ್ಲಿ ಪ್ರತಿ ಪಾತ್ರಕ್ಕೂ ತೂಕವಿದೆ. ರಣಬೀರ್​ ಕಪೂರ್​ ಅವರು ರಾಮನ ಪಾತ್ರ ಮಾಡುತ್ತಾರೆ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವಣನ ಪಾತ್ರ ಮಾಡಲು ‘ರಾಕಿಂಗ್​ ಸ್ಟಾರ್​’ ಯಶ್​ಗೆ ಆಫರ್​ ನೀಡಲಾಗಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ನಡುವೆ ಕೆಲವು ಮಾಧ್ಯಮಗಳು ಕುಂಭಕರ್ಣನ ಪಾತ್ರದ ಬಗ್ಗೆ ಸುದ್ದಿ ಮಾಡಿವೆ. ಈ ಪಾತ್ರವನ್ನು ಬಾಬಿ ಡಿಯೋಲ್​ಗೆ ನೀಡಲಾಗುವುದು ಎಂದು ವರದಿ ಆಗಿದೆ.

ಇದನ್ನೂ ಓದಿ:  ‘ಅನಿಮಲ್​’ ಸೂಪರ್​ ಹಿಟ್​ ಆದ ಬಳಿಕ ಹೆಚ್ಚಿದೆ ಬಾಬಿ ಡಿಯೋಲ್​ ಬೇಡಿಕೆ

ಈ ಮಾಹಿತಿ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಎಲ್ಲವೂ ಅಂತೆ-ಕಂತೆಗಳ ಹಂತದಲ್ಲಿದೆ. ಚಿತ್ರತಂಡದವರು ಬಾಬಿ ಡಿಯೋಲ್​ ಜೊತೆ ಆ ರೀತಿಯ ಯಾವುದೇ ಮಾತುಕತೆ ಕೂಡ ನಡೆಸಿಲ್ಲ ಎಂದು ನಟನ ಆಪ್ತರು ಮತ್ತೊಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವುದಾಗಿಯೂ ಸುದ್ದಿ ಪ್ರಕಟ ಆಗಿದೆ. ಹಾಗಾಗಿ, ಯಾವುದನ್ನು ನಂಬುವುದು? ಯಾವುದನ್ನು ಬಿಡೋದು ಎಂಬ ಗೊಂದಲ ಅಭಿಮಾನಿಗಳಿಗೆ ಉಂಟಾಗಿದೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರದಲ್ಲಿ ಕ್ರೂರಿಯಾದ ಬಾಬಿ ಡಿಯೋಲ್​ ನಿಜ ಜೀವನದಲ್ಲಿ ಎಷ್ಟು ಸ್ವೀಟ್​ ನೋಡಿ..

ನಟಿ ಲಾರಾ ದತ್ತ ಅವರು ಕೈಕೇಯಿ ಪಾತ್ರ ಮಾಡುತ್ತಾರೆ. ಸನ್ನಿ ಡಿಯೋಲ್​ ಅವರು ಹನುಮಂತನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೂಡ ಕೆಲವು ಕಡೆ ಸುದ್ದಿ ಆಗಿದೆ. ಚಿತ್ರತಂಡದ ಕಡೆಯಿಂದ ಯಾವುದೂ ಅಧಿಕೃತವಾಗಿಲ್ಲ. ‘ದಂಗಲ್​’ ಸಿನಿಮಾದಿಂದ ನಿರ್ದೇಶಕ ನಿತೇಶ್​ ತಿವಾರಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗ ಅವರು ರಾಮಾಯಣ ಸಿನಿಮಾವನ್ನು ಯಾವ ರೀತಿ ಕಟ್ಟಿಕೊಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:14 am, Wed, 17 January 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್