Bobby Deol

Bobby Deol

ಬಾಬಿ ಡಿಯೋಲ್ ಅವರು 1969ರ ಜನವರಿ 27ರಂದು ಜನಿಸಿದರು. ಹಿಂದಿ ಚಿತ್ರರಂಗಕ್ಕೆ ಅವರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರು ಪ್ರಸಿದ್ಧ ಬಾಲಿವುಡ್ ಕುಟುಂಬದಿಂದ ಬಂದವರು. ಅವರ ತಂದೆ ಧರ್ಮೇಂದ್ರ ಮತ್ತು ಅವರ ಹಿರಿಯ ಸಹೋದರ ಸನ್ನಿ ಡಿಯೋಲ್ ಕೂಡ ಪ್ರಸಿದ್ಧ ನಟರು. ಬಾಬಿ 1995ರಲ್ಲಿ ತೆರೆಕಂಡ ‘ಬರ್ಸಾತ್’ ಸಿನಿಮಾದ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ‘ಫಿಲ್ಮ್‌ಫೇರ್’ ಪ್ರಶಸ್ತಿಯನ್ನು ಗೆದ್ದರು. ಅವರು ‘ಗುಪ್ತ್’, ‘ಸೋಲ್ಜರ್’, ‘ಹುಮ್ರಾಜ್’ ರೀತಿಯ ಸಿನಿಮಾಗಳಿಂದ ಜನಪ್ರಿಯರಾದರು. ಬಾಬಿ ಡಿಯೋಲ್​ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಿದ್ದಾರೆ. ಒಂದಷ್ಟು ವರ್ಷಗಳ ಕಾಲ ಅವರಿಗೆ ಗೆಲುವು ಸಿಗಲಿಲ್ಲ. ನಂತರ ಅವರು ‘ರೇಸ್ 3’ ಸಿನಿಮಾ, ‘ಆಶ್ರಮ್’ ವೆಬ್ ಸರಣಿ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದರು. 2023ರಲ್ಲಿ ತೆರೆಕಂಡ ‘ಅನಿಮಲ್​’ ಸಿನಿಮಾದಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

ಇನ್ನೂ ಹೆಚ್ಚು ಓದಿ

ಜೂನಿಯರ್​ ಎನ್​ಟಿಆರ್​ ಎದುರು ವಿಲನ್​ ಆಗ್ತಾರಾ ಬಾಲಿವುಡ್​ ನಟ ಬಾಬಿ ಡಿಯೋಲ್​?

‘ಅನಿಮಲ್​’ ಸಿನಿಮಾದ ಯಶಸ್ಸಿನಿಂದ ಬಾಬಿ ಡಿಯೋಲ್​ ಅವರ ಇಮೇಜ್​ ಬದಲಾಯ್ತು. ನೆಗೆಟಿವ್​ ಪಾತ್ರ ಮಾಡಿ ಮಿಂಚಿದ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್​ನಲ್ಲಿ ಅವರು ಬ್ಯಾಕ್ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ಅಭಿನಯದ ಬಹುನಿರೀಕ್ಷಿತ ‘ದೇವರ: ಪಾರ್ಟ್​ 1’​ ಸಿನಿಮಾ ತಂಡಕ್ಕೆ ಬಾಬಿ ಡಿಯೋಲ್​ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಕಾಮಿಡಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ ‘ಅನಿಮಲ್​’ ನಟ ಬಾಬಿ ಡಿಯೋಲ್​

ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್​ ಮತ್ತು ಬಾಬಿ ಡಿಯೋಲ್​ ಅವರು 2023ರಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ಅದಕ್ಕೂ ಮುನ್ನ ಅವರ ವೃತ್ತಿಜೀವನ ಬಹಳ ಕಷ್ಟದ ಪರಿಸ್ಥಿತಿಯಲ್ಲಿತ್ತು. ಆ ದಿನಗಳನ್ನು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ವೇದಿಕೆಯಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಈ ಎಪಿಸೋಡ್​ನಲ್ಲಿ ಬಾಬಿ ಡಿಯೋಲ್​ ಅವರು ಅತ್ತಿದ್ದಾರೆ.

ಹೆಣಗಳ ರಾಶಿ, ರಕ್ತದ ಓಕುಳಿ, ರಾಕ್ಷಸರ ಹಾವಳಿ; ಭಯಂಕರವಾಗಿದೆ ‘ಕಂಗುವ’ ಟೀಸರ್​

ಸೂರ್ಯ, ಬಾಬಿ ಡಿಯೋಲ್​, ದಿಶಾ ಪಟಾನಿ ಮುಂತಾದವರು ನಟಿಸುತ್ತಿರುವ ‘ಕಂಗುವ’ ಟೀಸರ್​ ಬಿಡುಗಡೆ ಆಗಿದೆ. ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬಂದಿರುವ ಈ ಟೀಸರ್​ ನೋಡಿ ಸಿನಿಪ್ರಿಯರು ಕಣ್ಣರಳಿಸಿದ್ದಾರೆ. ಇಡೀ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್​ ಈ ಟೀಸರ್​ನಲ್ಲಿ ಕಾಣಿಸಿದೆ. ‘ಕಂಗುವ’ ಸಿನಿಮಾದ ಬಿಡುಗಡೆಗಾಗಿ ಕಾದಿರುವ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಹೆಚ್ಚಾಗಿದೆ.

‘ಅನಿಮಲ್ ಪಾರ್ಕ್’ ಸಿನಿಮಾಗೆ ವಿಲನ್ ಫೈನಲ್? ಬಾಲಿವುಡ್​ ಹೀರೋಗೆ ನೆಗೆಟಿವ್ ಶೇಡ್​

ಸಂದೀಪ್ ರೆಡ್ಡಿ ‘ಅನಿಮಲ್ ಪಾರ್ಕ್' ಚಿತ್ರ ನಿರ್ದೇಶನ ಮಾಡೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೂ ಯಾವುದೂ ಅಂತಿಮ ಆಗಿಲ್ಲ. ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಚಿತ್ರದ ವಿಲನ್ ಪಾತ್ರಕ್ಕೆ ಮತ್ತೊಬ್ಬ ನಟನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಅವರು ಬೇರಾರೂ ಅಲ್ಲ ನಟ ವಿಕ್ಕಿ ಕೌಶಲ್.

ಚಿತ್ರರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಹೆಸರು ಬದಲಿಸಿದ ನಟ ಧರ್ಮೇಂದ್ರ

ಕೃತಿ ಸನೋನ್ ಹಾಗೂ ಶಾಹಿದ್ ಕಪೂರ್ ನಟನೆಯ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಧರ್ಮೇಂದ್ರ ಅವರು ಬಣ್ಣ ಹಚ್ಚಿದ್ದಾರೆ. ಕಥಾ ನಾಯಕ ಶಾಹಿದ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಮಾಯಣ ಕಥೆ ಆಧಾರಿತ ಸಿನಿಮಾದಲ್ಲಿ ಬಾಬಿ ಡಿಯೋಲ್​ಗೆ ಕುಂಭಕರ್ಣನ ಪಾತ್ರ?

ರಾಮಾಯಣದ ಪ್ರತಿ ಪಾತ್ರಕ್ಕೂ ತೂಕವಿದೆ. ರಣಬೀರ್​ ಕಪೂರ್​ ಅವರು ರಾಮನ ಪಾತ್ರ ಮಾಡುತ್ತಾರೆ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಲವು ಮಾಧ್ಯಮಗಳು ಕುಂಭಕರ್ಣನ ಪಾತ್ರದ ಬಗ್ಗೆ ಸುದ್ದಿ ಮಾಡಿವೆ. ಈ ಪಾತ್ರವನ್ನು ಬಾಬಿ ಡಿಯೋಲ್​ಗೆ ನೀಡಲಾಗುವುದು ಎಂದು ವರದಿ ಆಗಿದೆ.