ಕಾಮಿಡಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ ‘ಅನಿಮಲ್​’ ನಟ ಬಾಬಿ ಡಿಯೋಲ್​

ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್​ ಮತ್ತು ಬಾಬಿ ಡಿಯೋಲ್​ ಅವರು 2023ರಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ಅದಕ್ಕೂ ಮುನ್ನ ಅವರ ವೃತ್ತಿಜೀವನ ಬಹಳ ಕಷ್ಟದ ಪರಿಸ್ಥಿತಿಯಲ್ಲಿತ್ತು. ಆ ದಿನಗಳನ್ನು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ವೇದಿಕೆಯಲ್ಲಿ ಅವರು ನೆನಪಿಸಿಕೊಂಡಿದ್ದಾರೆ. ಈ ಎಪಿಸೋಡ್​ನಲ್ಲಿ ಬಾಬಿ ಡಿಯೋಲ್​ ಅವರು ಅತ್ತಿದ್ದಾರೆ.

ಕಾಮಿಡಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ ‘ಅನಿಮಲ್​’ ನಟ ಬಾಬಿ ಡಿಯೋಲ್​
ಬಾಬಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Apr 30, 2024 | 5:52 PM

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗುತ್ತಿರುವ ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ (The Great Indian Kapil Show) ಕಾರ್ಯಕ್ರಮಕ್ಕೆ ಭಾರಿ ಜನಮೆಚ್ಚುಗೆ ಸಿಗುತ್ತಿದೆ. ಕಳೆದ ಎಪಿಸೋಡ್​ನಲ್ಲಿ ನಟ ಆಮಿರ್​ ಖಾನ್​ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ಈಗ ಈ ಶೋಗೆ ಸನ್ನಿ ಡಿಯೋಲ್​ ಮತ್ತು ಬಾಬಿ ಡಿಯೋಲ್​ (Bobby Deol) ಅವರು ಅತಿಥಿಯಾಗಿ ಬಂದಿದ್ದಾರೆ. ಈ ಹೊಸ ಸಂಚಿಕೆಗಳು ಶನಿವಾರ ರಾತ್ರಿ 8 ಗಂಟೆಗೆ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ಪ್ರಸಾರ ಆಗಲಿವೆ. ಇದು ಕಾಮಿಡಿ ಶೋ. ಹಾಗಿದ್ದರೂ ಕೂಡ ಬಾಬಿ ಡಿಯೋಲ್​ ಅವರು ಕಣ್ಣೀರು ಹಾಕಿದ್ದಾರೆ. ಅದರ ಪ್ರೋವೋವನ್ನು ನೆಟ್​ಫ್ಲಿಕ್ಸ್​ (Netflix) ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸದ್ಯಕ್ಕೆ ಡಿಯೋಲ್​ ಕುಟುಂಬಕ್ಕೆ ಒಳ್ಳೆಯ ಕಾಲ ಬಂದಿದೆ. ಸನ್ನಿ ಡಿಯೋಲ್​ ನಟಿಸಿದ ‘ಗದರ್​ 2’, ಬಾಬಿ ಡಿಯೋಲ್​ ನಟಿಸಿದ ‘ಅನಿಮಲ್​’, ಧರ್ಮೇಂದ್ರ ಅಭಿನಯಿಸಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾಗಳು 2023ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆದವು. ಈ ವಿಚಾರದ ಬಗ್ಗೆ ಸನ್ನಿ ಡಿಯೋಲ್​ ಮಾತನಾಡುವಾಗ ಬಾಬಿ ಡಿಯೋಲ್​ ಅವರು ಎಮೋಷನಲ್​ ಆಗಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರದಲ್ಲಿ ಕ್ರೂರಿಯಾದ ಬಾಬಿ ಡಿಯೋಲ್​ ನಿಜ ಜೀವನದಲ್ಲಿ ಎಷ್ಟು ಸ್ವೀಟ್​ ನೋಡಿ..

‘ನಾವು 1960ರ ದಶಕದಿಂದಲೂ ಚಿತ್ರರಂಗದಲ್ಲಿ ಇದ್ದೇವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಯಶಸ್ಸು ಸಿಗುತ್ತಿರಲಿಲ್ಲ. ಅದು ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ. ಆದರೆ 2023ರಲ್ಲಿ ನನ್ನ ಮಗನ ಮದುವೆ ಆಯ್ತು, ನಂತರ ‘ಗದರ್​ 2’ ಸಿನಿಮಾ ಬಂತು. ಅದಕ್ಕೂ ಮುನ್ನ ಅಪ್ಪನ ಸಿನಿಮಾ ಗೆಲುವು ಕಂಡಿತು. ಬಳಿಕ ‘ಅನಿಮಲ್​’ ಚಿತ್ರ ಬಂದು ಧೂಳೆಬ್ಬಿಸಿತು. ಇಷ್ಟೆಲ್ಲ ಆಶೀರ್ವಾದ ಹೇಗೆ ಬಂತೋ ಗೊತ್ತಿಲ್ಲ’ ಎಂದು ಸನ್ನಿ ಡಿಯೋಲ್​ ಹೇಳುವಾಗ ಪಕ್ಕದಲ್ಲಿ ಕುಳಿತ ಬಾಬಿ ಡಿಯೋಲ್​ ಅವರು ಕಣ್ಣೀರು ಹಾಕಿದ್ದಾರೆ.

View this post on Instagram

A post shared by Netflix India (@netflix_in)

‘ಗದರ್​ 2’ ಗೆಲುವಿನ ಬಳಿಕ ಸನ್ನಿ ಡಿಯೋಲ್​ ಅವರ ಡಿಮ್ಯಾಂಡ್​ ಮತ್ತೆ ಹೆಚ್ಚಾಗಿದೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ. ಅದೇ ರೀತಿ, ‘ಅನಿಮಲ್​’ ಸಿನಿಮಾ ಗೆದ್ದ ಬಳಿಕ ಬಾಬಿ ಡಿಯೋಲ್​ ಅವರಿಗೆ ಆಫರ್​ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ಅವಕಾಶ ಪಡೆಯುತ್ತಿದ್ದಾರೆ. ಮತ್ತೆ ಲೈಮ್​ಲೈಟ್​ಗೆ ಬಂದಿದ್ದಕ್ಕೆ ಈ ಸಹೋದರರಿಗೆ ಖುಷಿ ಇದೆ. ಕೆಲವು ತಮಾಷೆಯ ಪ್ರಸಂಗಗಳನ್ನು ಕೂಡ ಅವರು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.