Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಸೀರಿಸ್ ಘೋಷಿಸಿದ ರಾಜಮೌಳಿ; ಶೀಘ್ರವೇ ಟ್ರೇಲರ್ ರಿಲೀಸ್

‘ಬಾಹುಬಲಿ’ ಸಿನಿಮಾ ಮಾಡಿದ ಮೇಲೆ ಅದನ್ನು ಸೀರಿಸ್ ಮಾಡೋದು ಏಕೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಇದು ಅನಿಮೇಟೆಡ್ ಸೀರಿಸ್. ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಎಂದು ಸರಣಿಗೆ ಹೆಸರಿಡಲಾಗಿದೆ. ರಿಲೀಸ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ಬಾಹುಬಲಿ.. ಬಾಹುಬಲಿ ಎಂಬ ಘೋಷ ಕೇಳುತ್ತಿದೆ.

‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಸೀರಿಸ್ ಘೋಷಿಸಿದ ರಾಜಮೌಳಿ; ಶೀಘ್ರವೇ ಟ್ರೇಲರ್ ರಿಲೀಸ್
ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on:May 01, 2024 | 7:04 AM

ಎಸ್​.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಿಂದ ರಾಜಮೌಳಿ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಾಡಿದ ಕಲೆಕ್ಷನ್​ ತುಂಬಾನೇ ದೊಡ್ಡದು. ಈ ದಾಖಲೆಗಳನ್ನು ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಈ ಮಧ್ಯೆ ರಾಜಮೌಳಿ ಅವರು ಒಂದು ಅಚ್ಚರಿಯ ಅಪ್​​ಡೇಟ್ ನೀಡಿದ್ದಾರೆ. ‘ಬಾಹುಬಲಿ’ ಹೆಸರಲ್ಲಿ ಸೀರಿಸ್ ಘೋಷಣೆ ಮಾಡಿದ್ದಾರೆ. ಇದರ ಟ್ರೇಲರ್ ಕೂಡ ಶೀಘ್ರವೇ ರಿಲೀಸ್ ಆಗಲಿದೆಯಂತೆ.

‘ಬಾಹುಬಲಿ’ ಸಿನಿಮಾ ಮಾಡಿದ ಮೇಲೆ ಅದನ್ನು ಸೀರಿಸ್ ಮಾಡೋದು ಏಕೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಇದು ಅನಿಮೇಟೆಡ್ ಸೀರಿಸ್. ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಎಂದು ಸರಣಿಗೆ ಹೆಸರಿಡಲಾಗಿದೆ. ರಿಲೀಸ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ಬಾಹುಬಲಿ.. ಬಾಹುಬಲಿ ಎಂಬ ಘೋಷ ಕೇಳುತ್ತಿದೆ. ಇದು ಸಾಕಷ್ಟು ಕುತೂಹಲ ಮೂಡಿಸುತ್ತದೆ.

ಇದನ್ನೂ ಓದಿ: ವಿಫಲವಾಯ್ತಾ ರಾಜಮೌಳಿ ಪ್ರಯತ್ನ? ಮಹೇಶ್​ ಬಾಬು ಲುಕ್​ ಬಹಿರಂಗ

ಈ ಬಗ್ಗೆ ರಾಜಮೌಳಿ ಮಾಹಿತಿ ನೀಡಿದ್ದಾರೆ. ‘ಮಾಹಿಷ್ಮತಿಯ ಜನರು ಅವನ ಹೆಸರನ್ನು ಜಪಿಸಿದಾಗ, ಬ್ರಹ್ಮಾಂಡದ ಯಾವುದೇ ಶಕ್ತಿಯು ಅವನ ಹಿಂತಿರುಗಿವುಕೆಯನ್ನು ತಡೆಯಲು ಸಾಧ್ಯವಿಲ್ಲ. ಬಾಹುಬಲಿ: ಕ್ರೌನ್ ಆಫ್ ಬ್ಲಡ್ ಅನಿಮೇಟೆಡ್ ಸರಣಿ ಶೀಘ್ರವೇ ಬರಲಿದೆ’ ಎಂದಿದ್ದಾರೆ ರಾಜಮೌಳಿ. ರಾಜಮೌಳಿ ಅವರೇ ಇದನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಇದು ‘ಬಾಹುಬಲಿ’ ಸಿನಿಮಾ ಕಥೆಯನ್ನೇ ಹೊಂದಿರಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ. ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Wed, 1 May 24

ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ