ಜೂನಿಯರ್​ ಎನ್​ಟಿಆರ್​ ಎದುರು ವಿಲನ್​ ಆಗ್ತಾರಾ ಬಾಲಿವುಡ್​ ನಟ ಬಾಬಿ ಡಿಯೋಲ್​?

‘ಅನಿಮಲ್​’ ಸಿನಿಮಾದ ಯಶಸ್ಸಿನಿಂದ ಬಾಬಿ ಡಿಯೋಲ್​ ಅವರ ಇಮೇಜ್​ ಬದಲಾಯ್ತು. ನೆಗೆಟಿವ್​ ಪಾತ್ರ ಮಾಡಿ ಮಿಂಚಿದ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್​ನಲ್ಲಿ ಅವರು ಬ್ಯಾಕ್ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ಅಭಿನಯದ ಬಹುನಿರೀಕ್ಷಿತ ‘ದೇವರ: ಪಾರ್ಟ್​ 1’​ ಸಿನಿಮಾ ತಂಡಕ್ಕೆ ಬಾಬಿ ಡಿಯೋಲ್​ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಜೂನಿಯರ್​ ಎನ್​ಟಿಆರ್​ ಎದುರು ವಿಲನ್​ ಆಗ್ತಾರಾ ಬಾಲಿವುಡ್​ ನಟ ಬಾಬಿ ಡಿಯೋಲ್​?
ಬಾಬಿ ಡಿಯೋಲ್​, ಜೂನಿಯರ್​ ಎನ್​ಟಿಆರ್​
Follow us
ಮದನ್​ ಕುಮಾರ್​
|

Updated on: Jul 25, 2024 | 9:37 PM

ಟಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ದೇವರ: ಪಾರ್ಟ್​ 1’ ಕೂಡ ಇದೆ. ಜೂನಿಯರ್​ ಎನ್​ಟಿಆರ್​ ನಟನೆಯ ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಎಕ್ಸೈಟಿಂಗ್​ ವಿಷಯ ಕೇಳಿಬಂದಿದೆ. ಈ ಚಿತ್ರದಲ್ಲಿ ಬಾಲಿವುಡ್​ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ‘ದೇವರ: ಪಾರ್ಟ್​ 1’ ಚಿತ್ರತಂಡದವರು ಬಿ-ಟೌನ್ ಮಂದಿಗೆ ಮಣೆ ಹಾಕಿದಂತಿದೆ. ಸೈಫ್​ ಅಲಿ ಖಾನ್​, ಜಾನ್ವಿ ಕಪೂರ್​ ಬಳಿಕ ಈಗ ಬಾಬಿ ಡಿಯೋಲ್​ ಕೂಡ ಈ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಕೊರಟಾಲ ಶಿವ ಅವರು ‘ದೇವರ: ಪಾರ್ಟ್​ 1’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಐಎಂಡಿಬಿ ಪ್ರಕಟ ಮಾಡಿದ 2024ರ ಅತಿ ನಿರೀಕ್ಷಿತ ಭಾರತೀಯ ಸಿನಿಮಾಗಳ ಟಾಪ್​ 10 ಪಟ್ಟಿಯಲ್ಲಿ ‘ದೇವರ: ಪಾರ್ಟ್​ 1’ ಸಿನಿಮಾಗೆ ಮೂರನೇ ಸ್ಥಾನ ಸಿಕ್ಕಿದೆ. ಈಗ ಬಾಬಿ ಡಿಯೋಲ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿದ ಬಳಿಕ ಫ್ಯಾನ್ಸ್​ ನಿರೀಕ್ಷೆ ಹೆಚ್ಚಾಗಿದೆ.

ಎರಡು ಪಾರ್ಟ್​ಗಳಲ್ಲಿ ‘ದೇವರ’ ಸಿನಿಮಾ ಮೂಡಿಬರಲಿದೆ. ಮೊದಲ ಪಾರ್ಟ್​ನ ಕೊನೆಯಲ್ಲಿ ಬಾಬಿ ಡಿಯೋಲ್ ಅವರ ಪಾತ್ರ ಎಂಟ್ರಿ ನೀಡಲಿದೆ ಎಂಬ ಮಾತು ಕೇಳಿಬಂದಿದೆ. ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರವೇ ಹೈಲೈಟ್​ ಆಗಲಿದೆ. ಮುಖ್ಯ ವಿಲನ್​ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ: ಕಾಮಿಡಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ ‘ಅನಿಮಲ್​’ ನಟ ಬಾಬಿ ಡಿಯೋಲ್​

ಒಂದಷ್ಟು ವರ್ಷಗಳ ಕಾಲ ಬಾಬಿ ಡಿಯೋಲ್​ ಅವರ ವೃತ್ತಿ ಜೀವನ ಡಲ್​ ಆಗಿತ್ತು. ಆದರೆ ಕಳೆದ ವರ್ಷ ‘ಅನಿಮಲ್​’ ಸಿನಿಮಾ ಮೂಲಕ ಅವರು ಭರ್ಜರಿ ಕಮ್​ಬ್ಯಾಕ್​ ಮಾಡಿದರು. ಆ ಸಿನಿಮಾದಲ್ಲಿ ಕೂಡ ಅವರು ನೆಗೆಟಿವ್​ ಪಾತ್ರ ಮಾಡಿದ್ದರು. ಆ ಬಳಿಕ ಅಂಥ ಪಾತ್ರಗಳು ಅವರಿಗೆ ಹೇರಳವಾಗಿ ಸಿಗುತ್ತಿವೆ. ಅದರಲ್ಲೂ ಟಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಪವನ್​ ಕಲ್ಯಾಣ್​ ನಟನೆಯ ‘ಹರಿ ಹರ ವೀರ ಮಲ್ಲು’ ಹಾಗೂ ಬಾಲಕೃಷ್ಣ ನಟನೆಯ 109ನೇ ಸಿನಿಮಾದಲ್ಲಿ ಕೂಡ ಬಾಬಿ ಡಿಯೋಲ್​ ಅವಕಾಶ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.