ಸಮಂತಾ-ವರುಣ್ ನಟನೆಯ ‘ಸಿಟಾಡೆಲ್ ಹನಿ ಬನಿ’ ವೆಬ್ ಸಿರೀಸ್ ಬಿಡುಗಡೆ ದಿನಾಂಕ ಆ.1ಕ್ಕೆ ಪ್ರಕಟ
ಬಾಲಿವುಡ್ನ ಸ್ಟಾರ್ ನಟ ವರುಣ್ ಧವನ್ ಅವರು ಇದೇ ಮೊದಲ ಬಾರಿಗೆ ‘ಸಿಟಾಡೆಲ್: ಹನಿ ಬನಿ’ ಮೂಲಕ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಸಮಂತಾ ರುತ್ ಪ್ರಭು ಅಭಿನಯಿಸಿದ್ದಾರೆ. ಆಗಸ್ಟ್ 1ರಂದು ಈ ವೆಬ್ ಸರಣಿ ಬಗ್ಗೆ ಅಪ್ಡೇಟ್ ನೀಡಲು ತಯಾರಿ ನಡೆದಿದೆ. ರಿಲೀಸ್ ಡೇಟ್ ಘೋಷಣೆ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಅವರು ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ಗಳಲ್ಲೂ ನಟಿಸಿ ಹೆಸರು ಗಳಿಸಿದ್ದಾರೆ. ಈ ಮೊದಲು ಅವರು ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ರಾಜಿ ಎಂಬ ಪಾತ್ರ ಮಾಡಿ ಜನಮನ ಗೆದ್ದರು. ಆ ಸೀರಿಸ್ನ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರು ಈಗ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಿದ್ದು, ಅದರಲ್ಲೂ ಸಮಂತಾ ರುತ್ ಪ್ರಭು ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ವರುಣ್ ಧವನ್ ಅಭಿನಯಿಸಿದ್ದಾರೆ. ಅದರ ಬಿಡುಗಡೆ ದಿನಾಂಕ ತಿಳಿಸಲು ತಂಡದವರು ಸಜ್ಜಾಗಿದ್ದಾರೆ.
ರಾಜ್ ಮತ್ತು ಡಿಕೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ‘01.08’ ಎಂಬುದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಇದನ್ನು ನೆಟ್ಟಿಗರು ಡಿಕೋಡ್ ಮಾಡುತ್ತಿದ್ದಾರೆ. ಆಗಸ್ಟ್ 1ರಂದು ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿಯ ರಿಲೀಸ್ ದಿನಾಂಕ ಘೋಷಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ಅವರ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಟ ವರುಣ್ ಧವನ್ ಮಾಸ್ ಅವತಾರ
‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ನಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಸೀರೀಸ್ಗಾಗಿ ಸಮಂತಾ ರುತ್ ಪ್ರಭು ಅವರು ಸಖತ್ ಕಷ್ಟಪಟ್ಟಿದ್ದಾರೆ. ಅನಾರೋಗ್ಯದ ನಡುವೆಯೂ ತುಂಬಾ ದಿನ ತರಬೇತಿ ಪಡೆದು ಅವರು ಶೂಟಿಂಗ್ನಲ್ಲಿ ಪಾಲ್ಗೊಂಡರು. ‘ಅಮೇಜಾನ್ ಪ್ರೈಂ ವಿಡಿಯೋ’ ಸಂಸ್ಥೆಯು ಈ ವೆಬ್ ಸರಣಿಗೆ ಬಂಡವಾಳ ಹೂಡಿದೆ. ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿರುವ ಈ ಸಿರೀಸ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಸಮಂತಾ ಅವರ ಆ್ಯಕ್ಷನ್ ದೃಶ್ಯಗಳ ಬಗ್ಗೆ ಹೆಚ್ಚು ಹೈಪ್ ಸೃಷ್ಟಿಯಾಗಿದೆ.
— Raj & DK (@rajndk) July 25, 2024
ಸಮಂತಾ, ವರುಣ್ ಧವನ್ ಮಾತ್ರವಲ್ಲದೇ ಸೋಹಮ್ ಮಜುಮ್ದಾರ್, ಕೆ.ಕೆ. ಮೆನನ್, ಸಿಮ್ರನ್, ಶಿವಾಂಕಿತ್ ಸಿಂಗ್ ಪರಿಹಾರ್, ಸಖೀಬ್ ಸಲೀಂ, ಕಶ್ವಿ ಮಜುಮ್ದಾರ್, ಸಿಕಂದರ್ ಖೇರ್ ಮುಂತಾದವರು ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ. ಹಾಲಿವುಡ್ನ ‘ಸಿಟಾಡೆಲ್’ ವೆಬ್ ಸಿರೀಸ್ನ ಇಂಡಿಯನ್ ವರ್ಷನ್ ಇದಾಗಿದ್ದು, ಕಥೆಯ ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಕುತೂಹಲ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.