ರಣ್​ಬೀರ್​ ಬಳಿಕ ರಣ್​ಬೀರ್ ಪತ್ನಿಗೆ ವಿಲನ್ ಆದ ಬಾಬಿ ಡಿಯೋಲ್

Bobby Deol: ‘ಅನಿಮಲ್’ ಸಿನಿಮಾನಲ್ಲಿ ರಣ್​ಬೀರ್ ಕಪೂರ್​ಗೆ ವಿಲನ್ ಆಗಿದ್ದ ನಟ ಬಾಬಿ ಡಿಯೋಲ್ ಈಗ ರಣ್​ಬೀರ್ ಪತ್ನಿ ಆಲಿಯಾ ಭಟ್​ಗೂ ವಿಲನ್.

ರಣ್​ಬೀರ್​ ಬಳಿಕ ರಣ್​ಬೀರ್ ಪತ್ನಿಗೆ ವಿಲನ್ ಆದ ಬಾಬಿ ಡಿಯೋಲ್
Follow us
ಮಂಜುನಾಥ ಸಿ.
|

Updated on: Mar 28, 2024 | 7:25 PM

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಒಂದು ಕಾಲದಲ್ಲಿ ನಾಯಕ ನಟನಾಗಿ ಮಿಂಚಿದವರು. ಶಾರುಖ್ ಖಾನ್, ಸಲ್ಮಾನ್ ಖಾನ್ ಅಂಥಹವರಿಗೆ ಭಾರಿ ಪೈಪೋಟಿ ಕೊಟ್ಟಿದ್ದರು. ಆದರೆ ಕಾಲಾನಂತರದಲ್ಲಿ ಅವರ ಚಾರ್ಮ್ ಮಸುಕಾಗಿ ಅವಕಾಶಗಳನ್ನು ಕಳೆದುಕೊಂಡು ಚಿತ್ರರಂಗದಿಂದ ದೂರಾಗಿದ್ದರು. ಅವರನ್ನು ಹುಡುಕಿ ಅವಕಾಶ ಕೊಟ್ಟಿದ್ದು ಸಲ್ಮಾನ್ ಖಾನ್. ಹಾಗೆ ಸಿಕ್ಕ ಮರು ಅವಕಾಶವನ್ನು ಬಳಸಿಕೊಂಡ ಬಾಬಿ ಡಿಯೋಲ್, ತಮ್ಮನ್ನು ನಾಯಕ ನಟನಾಗಿ ಅಲ್ಲದೆ ವಿಲನ್ ಆಗಿ ಮರು ಸ್ಥಾಪಿಸಿಕೊಂಡಿದ್ದಾರೆ. ಪ್ರಸ್ತುತ ಭಾರತ ಚಿತ್ರರಂಗದ ಬಹುಬೇಡಿಕೆಯ ವಿಲನ್ ಆಗಿದ್ದಾರೆ ಬಾಬಿ ಡಿಯೋಲ್.

ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ಖಡಕ್ ವಿಲನ್​ ಪಾತ್ರದಲ್ಲಿ ಮಿಂಚಿದ್ದಾರೆ. ಬಾಬಿ ಡಿಯೋಲ್​ನ ಪಾತ್ರಕ್ಕೆ ಭಾರಿ ಪ್ರಶಂಸೆಗಳು ವ್ಯಕ್ತವಾಗಿವೆ. ರಣ್​ಬೀರ್​ಗೆ ವಿಲನ್ ಆಗಿದ್ದ ಬಾಬಿ ಡಿಯೋಲ್ ಈಗ ರಣ್​ಬೀರ್​ ಕಪೂರ್ ಪತ್ನಿ ಆಲಿಯಾ ಭಟ್​ಗೆ ವಿಲನ್​ ಆಗಿದ್ದಾರೆ. ಯಶ್​ರಾಜ್ ಫಿಲಮ್ಸ್​ನ ಹೊಸ ಗೂಢಚಾರಿ ಸರಣಿ ಸಿನಿಮಾನಲ್ಲಿ ವಿಲನ್ ಆಗಿ ಬಾಬಿ ಡಿಯೋಲ್ ನಟಿಸಲಿದ್ದಾರೆ.

ಈಗಾಗಲೇ ‘ಟೈಗರ್’, ‘ವಾರ್’, ‘ಪಠಾಣ್’ ಸಿನಿಮಾಗಳ ಮೂಲಕ ಯಶ್ ರಾಜ್ ಫಿಲಮ್ಸ್​ ‘ಸ್ಪೈ ವರ್ಸ್’ ಒಂದನ್ನು ಸೃಷ್ಟಿಸಿದೆ. ಇದೀಗ ಮಹಿಳಾ ಸ್ಪೈ ಪರಿಚಯ ಮಾಡಲು ಮುಂದಾಗಿದ್ದು ಆಲಿಯಾ ಭಟ್ ನಟನೆಯ ಸ್ಪೈ ಸಿನಿಮಾ ಒಂದರ ನಿರ್ಮಾಣಕ್ಕೆ ಮುಂದಾಗಿದೆ. ಆಲಿಯಾ ಭಟ್ ಹಾಗೂ ಶರ್ವರಿ ವಾಘ್ ನಟನೆಯ ಹೊಸ ಸ್ಪೈ ಸಿನಿಮಾಕ್ಕೆ ಬಾಬಿ ಡಿಯೋಲ್ ವಿಲನ್ ಆಗಿದ್ದಾರೆ.

ಇದನ್ನೂ ಓದಿ:ರಾಮಾಯಣ ಕಥೆ ಆಧಾರಿತ ಸಿನಿಮಾದಲ್ಲಿ ಬಾಬಿ ಡಿಯೋಲ್​ಗೆ ಕುಂಭಕರ್ಣನ ಪಾತ್ರ?

ಆಲಿಯಾ ಹಾಗೂ ಶರ್ವರಿ ಎದುರು ಪವರ್ ಫುಲ್ ವಿಲನ್ ಆಗಿ ಬಾಬಿ ಕಾಣಿಸಿಕೊಳ್ಳಲಿದ್ದಾರೆ. ಅಪಾಯಕಾರಿ ಆಗಿರುವ ಜೊತೆಗೆ ಸ್ಪೈಲ್ ಮತ್ತು ಸ್ವಾಗ್ ಹೊಂದಿರುವ ವಿಲನ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಬಾಬಿ ಡಿಯೋಲ್. ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ದೇಶನ ಮಾಡಲಿದ್ದು, ಸಿನಿಮಾದ ಚಿತ್ರೀಕರಣ ಇದೇ ವರ್ಷ ಆಗಸ್ಟ್ ತಿಂಗಳಿನಿಂದ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಬಾಬಿ ಡಿಯೋಲ್ ಪ್ರಸ್ತುತ ತಮಿಳಿನ ಭಾರಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕಂಗುವ’ನಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಮೈಮೇಲೆಲ್ಲ ಮೂಳೆಗಳನ್ನು ನೇತು ಹಾಕಿಕೊಂಡು ಮೈಗೆಲ್ಲ ಕಪ್ಪು ಬಣ್ಣ ಹಚ್ಚಿಕೊಂಡು ಭಯಾನಕವಾಗಿ ಕಾಣುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿಯೂ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಐತಿಹಾಸಿಕ ಕತೆ ಆಧರಿತವಾಗಿದೆ. ಇದರ ಜೊತೆಗೆ ನಂದಮೂರಿ ಬಾಲಕೃಷ್ಣ ನಟನೆಯ 109ನೇ ಸಿನಿಮಾದಲ್ಲಿಯೂ ವಿಲನ್ ಆಗಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ