ಹೆಣಗಳ ರಾಶಿ, ರಕ್ತದ ಓಕುಳಿ, ರಾಕ್ಷಸರ ಹಾವಳಿ; ಭಯಂಕರವಾಗಿದೆ ‘ಕಂಗುವ’ ಟೀಸರ್​

ಸೂರ್ಯ, ಬಾಬಿ ಡಿಯೋಲ್​, ದಿಶಾ ಪಟಾನಿ ಮುಂತಾದವರು ನಟಿಸುತ್ತಿರುವ ‘ಕಂಗುವ’ ಟೀಸರ್​ ಬಿಡುಗಡೆ ಆಗಿದೆ. ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬಂದಿರುವ ಈ ಟೀಸರ್​ ನೋಡಿ ಸಿನಿಪ್ರಿಯರು ಕಣ್ಣರಳಿಸಿದ್ದಾರೆ. ಇಡೀ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್​ ಈ ಟೀಸರ್​ನಲ್ಲಿ ಕಾಣಿಸಿದೆ. ‘ಕಂಗುವ’ ಸಿನಿಮಾದ ಬಿಡುಗಡೆಗಾಗಿ ಕಾದಿರುವ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಹೆಣಗಳ ರಾಶಿ, ರಕ್ತದ ಓಕುಳಿ, ರಾಕ್ಷಸರ ಹಾವಳಿ; ಭಯಂಕರವಾಗಿದೆ ‘ಕಂಗುವ’ ಟೀಸರ್​
ಬಾಬಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Mar 19, 2024 | 10:58 PM

2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಕಂಗುವ’ (Kanguva) ಕೂಡ ಇದೆ. ಬಹಳ ಅದ್ದೂರಿಯಾಗಿ ಈ ಸಿನಿಮಾ ಮೂಡಿಬರುತ್ತಿದೆ. ನಟ ಸೂರ್ಯ (Suriya) ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈವರೆಗೂ ಕಾಣಿಸಿಕೊಳ್ಳದಂತಹ ಡಿಫರೆಂಟ್​ ಗೆಟಪ್​ನಲ್ಲಿ ಅವರು ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಬಾಲಿವುಡ್​ ನಟ ಬಾಬಿ ಡಿಯೋಲ್​ ಅವರಿಗೂ ‘ಕಂಗುವ’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರವಿದೆ. ಈ ಸಿನಿಮಾದ ಟೀಸರ್​ ಈಗ ಬಿಡುಗಡೆ ಆಗಿದೆ. ‘ಕಂಗುವ’ ಟೀಸರ್​ (Kanguva Teaser) ನೋಡಿದ ಎಲ್ಲರೂ ವಾವ್​ ಎನ್ನುತ್ತಿದ್ದಾರೆ. ಯಾಕೆಂದರೆ ಈ ಟೀಸರ್​ನಲ್ಲಿ ಬೇರೆಯದೇ ಲೋಕ ಅನಾವರಣ ಆಗಿದೆ.

ಭೀಕರವಾದ ಕಾಳಗ, ರಾಕ್ಷಸರ ಹಾವಳಿ, ಹೆಣಗಳ ರಾಶಿ, ರಕ್ತದ ಓಕುಳಿ… ಸೇರಿದಂತೆ ಅನೇಕ ದೃಶ್ಯಗಳು ‘ಕಂಗುವ’ ಟೀಸರ್​ನಲ್ಲಿ ಕಾಣಿಸಿವೆ. ಹಿನ್ನೆಲೆ ಸಂಗೀತ ಕೂಡ ಮೈ ನವಿರೇಳಿಸುವಂತಿದೆ. ಸೂರ್ಯ ಅವರ ಗೆಟಪ್​ ನೋಡಿದ ಬಳಿಕ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ‘ಅನಿಮಲ್​’ ಚಿತ್ರದಲ್ಲಿ ಅಬ್ಬರಿಸುವ ಮೂಲಕ ಗ್ರ್ಯಾಂಡ್​ ಕಮ್​ಬ್ಯಾಕ್​ ಮಾಡಿರುವ ಬಾಬಿ ಡಿಯೋಲ್​ ಅವರು ‘ಕಂಗುವ’ ಚಿತ್ರದಲ್ಲಿ ಇನ್ನೂ ಕ್ರೂರವಾದ ಅವತಾರ ತಾಳುತ್ತಿದ್ದಾರೆ. ಈ ಎಲ್ಲ ವಿವರಗಳು ಟೀಸರ್​ನಲ್ಲಿ ಕಾಣಿಸಿವೆ. ಪ್ರತಿಯೊಂದು ಪಾತ್ರದ ಕಾಸ್ಟ್ಯೂಮ್​, ಗೆಟಪ್​ ಗಮನ ಸೆಳೆಯುತ್ತಿದೆ. ಡಿಫರೆಂಟ್​ ಆದಂತಹ ಸೆಟ್​ಗಳು ಕೂಡ ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ.

‘ಕಂಗುವ’ ಸಿನಿಮಾ ಟೀಸರ್​:

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ ತಿಂಗಳಲ್ಲಿ ‘ಕಂಗುವ’ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್​ ಆಗಿತ್ತು. ಆದರೆ ಲೋಕಸಭಾ ಚುನಾವಣೆ ನಿಗದಿ ಆಗಿರುವುದರಿಂದ ‘ಕಂಗುವ’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಬರೋಬ್ಬರಿ 10 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಪ್ಯಾನ್​ ಇಂಡಿಯಾ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರದಲ್ಲಿ ಕ್ರೂರಿಯಾದ ಬಾಬಿ ಡಿಯೋಲ್​ ನಿಜ ಜೀವನದಲ್ಲಿ ಎಷ್ಟು ಸ್ವೀಟ್​ ನೋಡಿ..

ಬಾಬಿ ಡಿಯೋಲ್​ ಅವರು ನಟಿಸಿರುವ ಮೊದಲ ದಕ್ಷಿಣ ಭಾರತದ ಸಿನಿಮಾ ‘ಕಂಗುವ’. ಇದರಲ್ಲಿ ನಾಯಕಿಯಾಗಿ ಬಾಲಿವುಡ್​ ಬೆಡಗಿ ದಿಶಾ ಪಟಾನಿ ಅಭಿನಯಿಸುತ್ತಿದ್ದಾರೆ. ಶಿವ ನಿರ್ದೇಶನದ ಈ ಸಿನಿಮಾಗೆ ದೇವಿಶ್ರೀ ಪ್ರಸಾದ್​ ಅವರು ಸಂಗೀತ ನೀಡುತ್ತಿದ್ದಾರೆ. ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಟೀಸರ್​ನಲ್ಲಿ ಈ ಸಿನಿಮಾದ ಶ್ರೀಮಂತಿಕೆ ಕಾಣಿಸುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಟೀಸರ್​ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ. ಚಿತ್ರದ ಬಗ್ಗೆ ಜನರಿಗೆ ಎಷ್ಟು ಕ್ರೇಜ್​ ಇದೆ ಎಂಬುದಕ್ಕೆ ಇದೇ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್