AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೊಡ್ಡ ಸಿನಿಮಾದೊಂದಿಗೆ ದಕ್ಷಿಣಕ್ಕೆ ಕಾಲಿಡಲಿದ್ದೇನೆ’; ಕರೀನಾ ಮಾತಿನಿಂದ ಹುಟ್ಟಿದೆ ಅನುಮಾನ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಅವರು ಮತ್ತೆ ದಕ್ಷಿಣದ ಸಿನಿಮಾಗಳ ಬಗ್ಗೆ ಅವರು ಮಾತನಾಡುತ್ತಿರುವುದು ಸಹಜವಾಗಿಯೇ ಕುತೂಹಲ ಸೃಷ್ಟಿಸಿದೆ.

‘ದೊಡ್ಡ ಸಿನಿಮಾದೊಂದಿಗೆ ದಕ್ಷಿಣಕ್ಕೆ ಕಾಲಿಡಲಿದ್ದೇನೆ’; ಕರೀನಾ ಮಾತಿನಿಂದ ಹುಟ್ಟಿದೆ ಅನುಮಾನ
ಕರೀನಾ
ರಾಜೇಶ್ ದುಗ್ಗುಮನೆ
|

Updated on: Mar 20, 2024 | 7:24 AM

Share

ಕರೀನಾ ಕಪೂರ್​ (Kareena Kapoor) ಅವರಿಗೆ ದೊಡ್ಡ ಬೇಡಿಕೆ ಇದೆ. ಅವರ ವಯಸ್ಸು ಈಗ 43. ಈಗಲೂ ಗ್ಲಾಮರಸ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕರೀನಾಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅವರು ಇಲ್ಲಿಯವರೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿಲ್ಲ. ಇತ್ತೀಚೆಗೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ದೊಡ್ಡ ಸಿನಿಮಾ ಜೊತೆ ದಕ್ಷಿಣ ಭಾರತಕ್ಕೆ ಕಾಲಿಡಲಿದ್ದೇನೆ’ ಎಂದು ಅವರು ಹೇಳಿದ್ದು ಸಾಕಷ್ಟು ಅನುಮಾನ ಮೂಡಿದೆ. ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವುದು ನಿಜವೇ ಎನ್ನುವ ಪ್ರಶ್ನೆ ಮೂಡಿದೆ.

‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳು ಇವೆ. ‘ಕೆಜಿಎಫ್ 2’ ಬಳಿಕ ಯಶ್ ನಟಿಸುತ್ತಿರೋ ಸಿನಿಮಾ ಇದು. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಗೋವಾದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ಈ ಬೆನ್ನಲ್ಲೇ ಕರೀನಾ ಅವರು ದಕ್ಷಿಣಕ್ಕೆ ಕಾಲಿಡೋ ಬಗ್ಗೆ ಮಾತನಾಡುತ್ತಿದ್ದಾರೆ.

ಕರೀನಾ ಕಪೂರ್, ಕೃತಿ ಸನೋನ್ ಹಾಗು ಟಬು ‘ಕ್ರ್ಯೂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 29ರಂದು ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರದ ವೇಳೆ ಕರೀನಾ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಾತನಾಡಿರೋ ಅವರು, ‘ನಾನು ದಕ್ಷಿಣಕ್ಕೆ ಕಾಲಿಡಲಿದ್ದೇನೆ. ಅದೂ ದೊಡ್ಡ ಸಿನಿಮಾದೊಂದಿಗೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಯಶ್ ಬ್ಯುಸಿ; ಸೆಟ್​ ಫೋಟೋ, ವಿಡಿಯೋ ಲೀಕ್

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಅವರು ಮತ್ತೆ ದಕ್ಷಿಣದ ಸಿನಿಮಾಗಳ ಬಗ್ಗೆ ಅವರು ಮಾತನಾಡುತ್ತಿರುವುದು ಸಹಜವಾಗಿಯೇ ಕುತೂಹಲ ಸೃಷ್ಟಿಸಿದೆ. ಕನ್ನಡ ಮಾತ್ರವಲ್ಲದೆ ಟಾಲಿವುಡ್​ನಲ್ಲೂ ಹಲವು ದೊಡ್ಡ ಸಿನಿಮಾಗಳು ಸಿದ್ಧವಾಗುತ್ತಿವೆ. ಅವುಗಳಲ್ಲಿ ಕರೀನಾ ನಟಿಸುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ