AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ‘ತಪಸ್ಸಿ’ ಸಿನಿಮಾದಲ್ಲಿ ರವಿಚಂದ್ರನ್ ನಟನೆ

ನಟ ವಿ. ರವಿಚಂದ್ರನ್​ ಅವರು ‘ತಪಸ್ಸಿ’ ಸಿನಿಮಾದಲ್ಲಿ ಪ್ರಾಧ್ಯಾಪಕನ ಪಾತ್ರ ಮಾಡಲಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ. ಸ್ಪೆನ್ಸರ್​ ಮ್ಯಾಥ್ಯೂ ಅವರು ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದು ನೈಜ ಘಟನೆ ಆಧರಿಸಿ ಸಿದ್ಧವಾಗುತ್ತಿರುವ ಮಹಿಳಾ ಪ್ರಧಾನ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ‘ತಪಸ್ಸಿ’ ಸಿನಿಮಾದಲ್ಲಿ ರವಿಚಂದ್ರನ್ ನಟನೆ
ಸುದ್ದಿಗೋಷ್ಠಿಯಲ್ಲಿ ‘ತಪಸ್ಸಿ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Mar 19, 2024 | 9:38 PM

ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್​ (Ravichandran) ಅವರ ಹೊಸ ಸಿನಿಮಾ ಬಗ್ಗೆ ಅಪ್​ಡೇಟ್​ ತಿಳಿಯಲು ಕಾದಿದ್ದ ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಹೌದು, ‘ಕ್ರೇಜಿಸ್ಟಾರ್’ ಅವರು ‘ತಪಸ್ಸಿ’ (Tapassi) ಶೀರ್ಷಿಕೆ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರಲ್ಲಿ ಅವರ ಪಾತ್ರ ಬಹಳ ಮುಖ್ಯದ್ದಾಗಿರಲಿದೆ. ‘ಬೆಂಗಳೂರು ಮೂವೀಸ್’ ಮೂಲಕ ‘ತಪಸ್ಸಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಸ್ಪೆನ್ಸರ್ ಮ್ಯಾಥ್ಯೂ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಕೂಡ ಸ್ಪೆನ್ಸರ್​ ಮ್ಯಾಥ್ಯೂ ಅವರದ್ದೇ ಆಗಿದೆ.

ಇತ್ತೀಚೆಗೆ ‘ತಪಸ್ಸಿ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ನಿರ್ದೇಶಕ ಮ್ಯಾಥ್ಯೂ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು. ‘ಇದೊಂದು ಮಹಿಳಾ ಪ್ರಧಾನ ಸಿನಿಮಾ. ರವಿಚಂದ್ರನ್ ಸರ್ ಅವರಿಂದಲೇ ಈ ಸಿನಿಮಾದ ಕೆಲಸ ಆರಂಭ ಆಗಿದೆ. ಹಾಗಾಗಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಸಿನಿಮಾದಲ್ಲಿ ಒಂದು ಗಟ್ಟಿಯಾದ ಸಂದೇಶ ಇದೆ. ಜನರಿಗೆ ಆ ಮೆಸೇಜ್​ ರೀಚ್​ ಆಗಬೇಕೆಂದರೆ ರವಿಚಂದ್ರನ್ ಅವರಂತಹ ವ್ಯಕ್ತಿ ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎನಿಸಿತು’ ಎಂದಿದ್ದಾರೆ ನಿರ್ದೇಶಕರು. ಬೆಂಗಳೂರು ಸುತ್ತಮುತ್ತವೇ ‘ತಪಸ್ಸಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ರವಿಚಂದ್ರನ್ ಅವರ ‘ತಪಸ್ಸಿ’ ತಮ್ಮ ಮಾಹಿತಿ ಹಂಚಿಕೊಂಡರು. ‘ಚಿತ್ರತಂಡದವರು ಸಿನಿಮಾ ಮಾಡಿ ಮುಗಿಸಿದ್ದಾರೆ. ಈಗ ನನ್ನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ. ಈ ಪಾತ್ರ ನೀವೇ ಮಾಡಬೇಕು ಎಂಬ ಆರೇಳು ತಿಂಗಳಿಂದ ಹಠ ಹಿಡಿದಿದ್ದಾರೆ. ಮ್ಯಾಥ್ಯೂ ಅವರು ನನಗೆ ಬಹಳ ಹತ್ತಿರದ ಸ್ನೇಹಿತ. ತುಂಬ ಶಿಸ್ತಿನ ವ್ಯಕ್ತಿ ಅವರು. ‘ರವಿ ಬೋಪಣ್ಣ’ ಸಿನಿಮಾದಿಂದ ನನಗೆ ಅವರು ಪರಿಚಯ. ಅದಕ್ಕೂ ಮೊದಲಿಂದಲೂ ಅವರು ಗಾಂಧಿನಗರದಲ್ಲಿದ್ದಾರೆ. ಒಂದು ಸಾಮಾಜಿಕ ಸಂದೇಶ ಸಾರುವ ತೂಕವಾದ ಪಾತ್ರ ನನ್ನದು. ಇಡೀ ಚಿತ್ರಕ್ಕೆ ನ್ಯಾಯ ಒದಗಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ’ ಎಂದಿದ್ದಾರೆ ರವಿಚಂದ್ರನ್​.

ಇದನ್ನೂ ಓದಿ: ‘ಅಪ್ಪನ ಸಾವಿನ ನೋವಿನಲ್ಲಿ ಇದ್ದಾಗಲೇ ಹಣದ ವಿಷಯ’: ಆ ಕ್ಷಣ ನೆನಪಿಸಿಕೊಂಡ ರವಿಚಂದ್ರನ್​

ಚಿತ್ರತಂಡ ಹೇಳಿಕೊಂಡಿರುವಂತೆ ಇದು ನೈಜ ಘಟನೆ ಆಧರಿಸಿ ಸಿದ್ಧವಾಗುತ್ತಿರುವ ಸಿನಿಮಾ. ಈ ಮಹಿಳಾ ಪ್ರಧಾನ ಸಿನಿಮಾದಲ್ಲಿ ವಿ. ರವಿಚಂದ್ರನ್ ಅವರು ಪ್ರಾಧ್ಯಾಪಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ಅಮೈರಾ ಗೋಸ್ವಾಮಿ ನಾಯಕಿ. ಪಾತ್ರವರ್ಗದಲ್ಲಿ ಪ್ರಜ್ವಲ್, ವಿನಯಾ ಪ್ರಸಾದ್, ಸಚಿನ್, ಭಾಸ್ಕರ್, ಅನುಷಾ ಕಿಣಿ ಮುಂತಾದವರು ಇದ್ದಾರೆ. ವೀರೇಶ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಅರುಣ್ ಪಿ. ಥಾಮಸ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸ್ಪೆನ್ಸರ್ ಮ್ಯಾಥ್ಯೂ ಅವರು ನಿರ್ದೆಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಆರ್. ಗಂಗಾಧರ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ