‘ಅಪ್ಪನ ಸಾವಿನ ನೋವಿನಲ್ಲಿ ಇದ್ದಾಗಲೇ ಹಣದ ವಿಷಯ’: ಆ ಕ್ಷಣ ನೆನಪಿಸಿಕೊಂಡ ರವಿಚಂದ್ರನ್
ಕೊಪ್ಪಳದಲ್ಲಿ ಅಭಿಮಾನಿಗಳ ಎದುರು ರವಿಚಂದ್ರನ್ ಮಾತನಾಡಿದ್ದಾರೆ. ‘ಊಟ ಮಾಡುವಾಗ ಮನೆಯಲ್ಲಿ ಒಂದು ಗಂಟೆ ನೀವು ಮೊಬೈಲ್ ಫೋನ್ ಆಫ್ ಮಾಡಿ ನೋಡಿ. ನಿಮ್ಮ ಮನೆಯಲ್ಲಿ ಪ್ರೇಮಲೋಕ ಹುಟ್ಟುತ್ತದೆ’ ಎಂದು ಅವರು ಹೇಳಿದ್ದಾರೆ. ದುಡ್ಡು ಮುಖ್ಯವಲ್ಲ, ಪ್ರೀತಿ ಮುಖ್ಯ ಎಂದು ಹೇಳಿರುವ ರವಿಚಂದ್ರನ್ ಅವರು ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಕೊಪ್ಪಳದ (Koppal) ಕನಕಗಿರಿ ಉತ್ಸವದಲ್ಲಿ ನಟ ರವಿಚಂದ್ರನ್ (Ravichandran) ಅವರು ಭಾಗಿ ಆಗಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಅಪ್ಪನಿಗೆ ಹುಷಾರಿರಲಿಲ್ಲ. ನಾನು ಸೋಲುವ ಟೈಮ್ನಲ್ಲಿ ಅಪ್ಪ ತೀರಿಕೊಳ್ಳುತ್ತಾರಾ ಎಂಬ ಭಯ ನನ್ನೊಳಗೆ ಇತ್ತು. ಅಪ್ಪ (N. Veeraswamy) ಬದುಕಿದ್ದಾಗಲೇ ಈ ಕ್ರೇಜಿ ಸ್ಟಾರ್ ಒಂದು ಸಕ್ಸಸ್ ನೋಡಬೇಕು ಅಂತ ರಾಮಾಚಾರಿ ಸಿನಿಮಾ ಮಾಡಿದೆ. ಅಪ್ಪ ನಗುತ್ತಲೇ ಹೋಗಬೇಕು ಎಂಬ ಉದ್ದೇಶದಿಂದ ಆ ಸಿನಿಮಾ ಮಾಡಿದೆ. ರಾಮಾಚಾರಿ ಸಿನಿಮಾ ನನ್ನನ್ನು ಗೆಲ್ಲಿಸಿತು. ದುಡ್ಡು ಮಾಡಬೇಕು ಎಂಬುದು ನನಗೆ ಅಂದೂ ಗೊತ್ತಿರಲಿಲ್ಲ. ಇವತ್ತೂ ಗೊತ್ತಿಲ್ಲ. ನಮ್ಮ ಅಪ್ಪ ತೀರಿಕೊಂಡ ತಕ್ಷಣ ಇನ್ಶ್ಯೂರೆನ್ಸ್ ಕಂಪನಿಯವರು ಬಂದು ನಿಮಗೆ ಇಷ್ಟು ದುಡ್ಡು ಬರುತ್ತೆ ಅಂದರು. ಅಪ್ಪ ಸತ್ತ ನೋವಿನಲ್ಲಿ ಇದ್ದಾಗ ದುಡ್ಡು ಬರುತ್ತೆ ಅಂತ ಅವರು ಹೇಳಿದಾಗ ಆ ದುಡ್ಡನ್ನು ನಾನು ಕಿತ್ತು ಹಾಕಿದೆ. ನಾನು ಕೂಡ ಇನ್ಶ್ಯೂರೆನ್ಸ್ ಕಟ್ಟಲ್ಲ ಅಂತ ನಿರ್ಧಾರ ಮಾಡಿದೆ. ನಾನು ಸಾಯುವುದೇ ಇಲ್ಲ. ನಿಮ್ಮ ಮನಸ್ಸಿನಲ್ಲಿ ಬದುಕಿರುತ್ತೇನೆ. ಇದಕ್ಕೆ ಯಾವ ಇನ್ಶ್ಯೂರೆನ್ಸ್ ಬೇಕಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ

ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ

ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
