Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ: ಪ್ರತಾಪ್​ ಸಿಂಹ

ಸಿದ್ದರಾಮಯ್ಯ ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ: ಪ್ರತಾಪ್​ ಸಿಂಹ

ವಿವೇಕ ಬಿರಾದಾರ
|

Updated on: Mar 04, 2024 | 1:36 PM

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು 2023ರ ವಿಧಾನಸಭಾ ಚುನಾವಣೆ ಪ್ರಚಾರದಲ್ಲೇ ಹೇಳಿದ್ದೆ, ನೀವು ಕಾಂಗ್ರೆಸ್​ಗೆ ಮತ ಹಾಕಿದರೆ ತಾಲಿಬಾನಿ ಸರ್ಕಾರ ಬರುತ್ತೆ ಅಂತ. ಇವತ್ತು ತಾಲಿಬಾನಿ ಸರ್ಕಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ (Pro Pakistan Slogan) ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು 2023ರ ವಿಧಾನಸಭಾ ಚುನಾವಣೆ (Vidhan Sabha Election) ಪ್ರಚಾರದಲ್ಲೇ ಹೇಳಿದ್ದೆ, ನೀವು ಕಾಂಗ್ರೆಸ್​ಗೆ (Congress) ಮತ ಹಾಕಿದರೆ ತಾಲಿಬಾನಿ ಸರ್ಕಾರ ಬರುತ್ತೆ ಅಂತ. ಇವತ್ತು ತಾಲಿಬಾನಿ ಸರ್ಕಾರ ನಡೆಯುತ್ತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿಯಾಗಿವೆ. ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಮೊಳಗಿದೆ ಅಂದರೆ ಯಾರು ಅಧಿಕಾರ ಮಾಡುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಮುಂದುವರೆದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದರು ಆಶ್ಚರ್ಯ ಪಡಬೇಡಿ ಎಂದು ಸಂಸದ ಪ್ರತಾಪ್​ ಸಿಂಹ್​ (Pratap Simha) ಹೇಳಿದರು.

ಬಾಂಬ್ ಬ್ಲಾಸ್ಟ್‌ಗಳು ಶುರುವಾಗಿವೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಹತ್ತು ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆದಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ, ಲುಂಬಿಣಿ ಗಾರ್ಡನ್, ಜರ್ಮನ್ ಬೇಕರಿ, ಪುಣೆ, ಮುಂಬೈ, ಡೆಲ್ಲಿ, ಸೂರತ್ ದೇಶಾದ್ಯಂತ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆಯುತ್ತಿದ್ದವು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿವೆ. ಇದು ಟ್ರೈಲರ್ ಮಾತ್ರ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ. ಒಸಮಾಬಿನ್, ಮುಲ್ಲಾ ಉಮರ್‌ ಅಂತಹವರು ಅಧಿಕಾರ ಮಾಡುವಾಗ ಬಾಂಬ್ ಹಾಕುವವರಿಗೆ ರಕ್ಷಣೆ ಕೊಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಅವರೆ, ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ. ಮತ್ತೇಕೆ ನೀವು ರಕ್ಷಣೆ ಮಾಡಲು ಹೊರಟಿದ್ದಿರಿ? ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ ಎಂದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ