Daily Devotional: ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ

Updated on: Jun 19, 2025 | 6:55 AM

ಡಾ. ಬಸವರಾಜ್ ಗುರೂಜಿ ಅವರು ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳನ್ನು ಹೊಂದುವುದರ ಮಹತ್ವವನ್ನು ವಿವರಿಸಿದ್ದಾರೆ. ಪೂರ್ವದಿಂದ ಪಶ್ಚಿಮಕ್ಕೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವುದು ಶುಭ ಎಂದು ಹೇಳಲಾಗುತ್ತದೆ. ಮೆಟ್ಟಿಲುಗಳ ಸಂಖ್ಯೆ ಮತ್ತು ಅವುಗಳ ವಿನ್ಯಾಸವು ಕೂಡ ಮನೆಯ ಒಟ್ಟಾರೆ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಬೆಂಗಳೂರು, ಜೂನ್​ 19: ವಾಸ್ತುಶಾಸ್ತ್ರದ ಪ್ರಕಾರ ಮನೆ ನಿರ್ಮಾಣದಲ್ಲಿ ಮೆಟ್ಟಿಲುಗಳು ಇರುವುದು ಬಹಳ ಮುಖ್ಯ. ಡಾ. ಬಸವರಾಜ್ ಗುರೂಜಿ ಅವರು ಈ ವಿಷಯದ ಬಗ್ಗೆ ವಿವರಿಸಿದ್ದಾರೆ. ಪೂರ್ವದಿಂದ ಪಶ್ಚಿಮಕ್ಕೆ ಅಥವಾ ಉತ್ತರದಿಂದ ದಕ್ಷಿಣಕ್ಕೆ ಮೆಟ್ಟಿಲುಗಳನ್ನು ನಿರ್ಮಿಸುವುದು ಶುಭ ಎಂದು ಹೇಳಿದ್ದಾರೆ. ಪಶ್ಚಿಮದಿಂದ ಪೂರ್ವಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಬಾರದು. ಮೆಟ್ಟಿಲುಗಳ ಸಂಖ್ಯೆ ಬೆಸವಾಗಿರಬೇಕು ಎಂಬುದು ವಾಸ್ತು ಶಾಸ್ತ್ರದಲ್ಲಿನ ಮತ್ತೊಂದು ಮುಖ್ಯ ಅಂಶ. ಮೆಟ್ಟಿಲುಗಳನ್ನು ವಕ್ರಾಕಾರದಲ್ಲಿ ನಿರ್ಮಿಸುವುದು ಸೂಕ್ತವಲ್ಲ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More