Daily Devotional: ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಅರ್ಚಕರು, ನಮ್ಮ ಹೆಸರಿನಲ್ಲಿ ಅರ್ಚನೆ ಮಾಡಿ, ತೀರ್ಥ ಮತ್ತು ಪ್ರಸಾದ ಕೊಡುತ್ತಾರೆ. ಜೊತೆಗೆ ನಮ್ಮ ತಲೆ ಮೇಲೆ ಶಟಗೋಪ ಇಟ್ಟು, ಶತಮಾನಂಭವತಿ ಆಶಿರ್ವದಿಸುತ್ತಾರೆ. ಶಟಗೋಪವನ್ನು ನಮ್ಮ ತಲೆ ಮೇಲೆ ಇಡುವುದರ ಫಲವೇನು? ಇದರ ಮಹತ್ವವೇನು? ಬಸವರಾಜ ಗುರೂಜಿ ತಿಳಿಸಿದ್ದಾರೆ.
ಭಗವಂತನಲ್ಲಿ ನಮ್ಮ ಕಷ್ಟ, ಪೂಜೆ, ಅಥವಾ ಅರ್ಚನೆ ಮಾಡಿಸಲು ದೇವಸ್ಥಾನಕ್ಕೆ (Temple) ಹೋದ ಸಂದರ್ಭದಲ್ಲಿ ಅಲ್ಲಿನ ಅರ್ಚಕರು, ನಮ್ಮ ಹೆಸರಿನಲ್ಲಿ ಅರ್ಚನೆ ಮಾಡಿ, ತೀರ್ಥ ಮತ್ತು ಪ್ರಸಾದ ಕೊಡುತ್ತಾರೆ. ಜೊತೆಗೆ ನಮ್ಮ ತಲೆ ಮೇಲೆ ಶಟಗೋಪ (Shatagopa) ಇಟ್ಟು, ಶತಮಾನಂಭವತಿ ಅಥವಾ ದೀರ್ಘಾಯುಷ್ಯಮಾನ ಭವ ಅಥವಾ ಭಗವಂತನ ಕೃಪೆ ನಿಮ್ಮ ಮೇಲೆ ಇರಲಿ ಅಂತ ಆಶಿರ್ವದಿಸುತ್ತಾರೆ. ಈ ಶಟಗೋಪುರವನ್ನು ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಲ್ಲಿ ಇಡುತ್ತಾರೆ. ವಿಶೇಷವಾಗಿ ಕೃಷ್ಣ, ತಿರುಪತಿ ಅಥವಾ ವಿಷ್ಣುವಿನ ದೇವಸ್ಥಾನದಲ್ಲಿ ಶಟಗೋಪವನ್ನು ನಮ್ಮ ತಲೆಯ ಮೇಲೆ ಇಡುತ್ತಾರೆ. ಶಟಗೋಪವನ್ನು ನಮ್ಮ ತಲೆ ಮೇಲೆ ಇಡುವುದರ ಫಲವೇನು? ಇದರ ಮಹತ್ವವೇನು? ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮನುಷ್ಯನ ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳಿಂದ ದೂರವಿರುತ್ತೇನೆ ಎಂದು ನಮಸ್ಕರಿಸಿ ಪ್ರಮಾಣ ಮಾಡುವುದೇ ಅದರ ಇನ್ನೊಂದು ಅರ್ಥ. ನೀವು ದೇವಸ್ಥಾನಕ್ಕೆ ಹೋದಾಗಲೆಲ್ಲಾ ನಿಮ್ಮ ತಲೆಯ ಮೇಲೆ ಶಟಗೋಪ ಇಡಿಸಿಕೊಳ್ಳುವುದನ್ನು ಮರೆಯಬೇಡಿ.