Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ

Updated on: Aug 23, 2025 | 7:02 AM

ಶ್ರಾವಣ ಮಾಸದ ಅಮಾವಾಸ್ಯೆಯ ಪೂಜಾ ವಿಧಾನಗಳ ಕುರಿತು ಡಾ. ಬಸವರಾಜ ಗುರೂಜಿಯವರು ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅಮಾವಾಸ್ಯೆಯ ಮಹತ್ವ, ಪಿತೃಗಳ ಸ್ಮರಣೆ, ದೀಪಪೂಜೆ ಮತ್ತು ಮಹಾಲಕ್ಷ್ಮಿ ಅಷ್ಟೋತ್ತರ ಪಠಣದ ಪ್ರಾಮುಖ್ಯತೆ ಬಗ್ಗೆ ತಿಳಿಸಕೊಡಲಾಗಿದೆ. ಈ ಪೂಜೆಯಿಂದ ಧಾರ್ಮಿಕ ಲಾಭಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಬೆಂಗಳೂರು, ಆಗಸ್ಟ್​​ 23: ಶ್ರಾವಣ ಮಾಸದ ಅಮಾವಾಸ್ಯೆಯ ಪೂಜಾ ವಿಧಿ-ವಿಧಾನಗಳ ಕುರಿತು ಡಾ. ಬಸವರಾಜ ಗುರೂಜಿಯವರು ಮಾರ್ಗದರ್ಶನ ನೀಡಿದ್ದಾರೆ. ಅಮಾವಾಸ್ಯೆಯು ಪಿತೃಗಳನ್ನು ಸ್ಮರಿಸುವ ಮತ್ತು ಅವರ ಆಶೀರ್ವಾದ ಪಡೆಯುವ ಪವಿತ್ರ ದಿನವಾಗಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಬರುವ ಸಮಯವಾಗಿರುವುದರಿಂದ ಇದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅಮಾವಾಸ್ಯೆಯ ದಿನ ದೀಪ ಪೂಜೆ ಮಾಡುವುದು, ಮಹಾಲಕ್ಷ್ಮಿ ಅಷ್ಟೋತ್ತರ ಪಠಿಸುವುದು, ಮತ್ತು ಪಿತೃ ತರ್ಪಣ ಮಾಡುವುದು ಮುಂತಾದ ಕ್ರಿಯೆಗಳನ್ನು ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.