ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್ಗೆ ಭರ್ಜರಿ ಜಯ
173 ರನ್ಗಳ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಪರ ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ತಾಹ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ 17 ರನ್ಗಳಿಸಿ ತಾಹ ಬೇಗನೆ ಔಟಾದರು. ಆ ಬಳಿಕ ಜೊತೆಯಾದ ಪಡಿಕ್ಕಲ್ ಹಾಗೂ ಕಾರ್ತಿಕೇಯ ಅದ್ಭುತ ಜೊತೆಯಾಟ ಪ್ರದರ್ಶಿಸಿದರು. ಇದರ ನಡುವೆ ದೇವದತ್ ಪಡಿಕ್ಕಲ್ 47 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 69 ರನ್ ಬಾರಿಸಿದರು.
ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಮಹರಾಜ ಟ್ರೋಫಿ ಟೂರ್ನಿಯ 23ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ದೇವದತ್ ಪಡಿಕ್ಕಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ಪರ ನಾಯಕ ಸ್ಮರಣ್ ರವಿಚಂದ್ರನ್ 84 ರನ್ಗಳ ಸ್ಫೋಟಕ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು.
173 ರನ್ಗಳ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಪರ ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ತಾಹ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ 17 ರನ್ಗಳಿಸಿ ತಾಹ ಬೇಗನೆ ಔಟಾದರು. ಆ ಬಳಿಕ ಜೊತೆಯಾದ ಪಡಿಕ್ಕಲ್ ಹಾಗೂ ಕಾರ್ತಿಕೇಯ ಅದ್ಭುತ ಜೊತೆಯಾಟ ಪ್ರದರ್ಶಿಸಿದರು. ಇದರ ನಡುವೆ ದೇವದತ್ ಪಡಿಕ್ಕಲ್ 47 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 69 ರನ್ ಬಾರಿಸಿದರು. ಇದು ಈ ಸೀಸನ್ನಲ್ಲಿನ ಪಡಿಕ್ಕಲ್ ಅವ 4ನೇ ಅರ್ಧಶತಕ ಎಂಬುದು ವಿಶೇಷ.
ಇನ್ನು 48 ಎಸೆತಗಳನ್ನು ಎದುರಿಸಿದ ಕಾರ್ತಿಕೇಯ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 81 ರನ್ ಬಾರಿಸಿದರು. ಈ ಮೂಲಕ 18.2 ಓವರ್ಗಳಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಗುರಿ ತಲುಪಿಸಿ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.

