Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ

Updated on: Jun 06, 2025 | 6:49 AM

ಭಕ್ತರಲ್ಲಿ ಇರಬೇಕಾದ ಮೂರು ಅಗತ್ಯ ಗುಣಗಳೆಂದರೆ ಸತ್ಯವಾದ ಮಾತು, ಧಾರ್ಮಿಕ ನಡವಳಿಕೆ ಮತ್ತು ಭಗವಂತನ ನಿರಂತರ ಸ್ಮರಣೆ. ಈ ಗುಣಗಳು ವ್ಯಕ್ತಿಯ ಜೀವನದ ಎಲ್ಲಾ ಹಂತಗಳಲ್ಲಿ ಭಗವಂತನ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ. ಈ ಬಗ್ಗೆ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ ನೋಡಿ.

ಬೆಂಗಳೂರು, ಜೂನ್​ 06: ಡಾ. ಬಸವರಾಜ ಗುರೂಜಿ ಅವರ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ, ನಿಜವಾದ ಭಕ್ತನಲ್ಲಿ ಇರಬೇಕಾದ ಮೂರು ಮುಖ್ಯ ಗುಣಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮೊದಲನೆಯದು ಸತ್ಯ. ಮಾತಿನಲ್ಲಿ ಮತ್ತು ಕ್ರಿಯೆಯಲ್ಲಿ ಸತ್ಯವನ್ನು ಪಾಲಿಸುವುದು ಅತ್ಯಗತ್ಯ. ಸುಳ್ಳು ಮತ್ತು ವಂಚನೆಗಳು ಭಗವಂತನಿಗೆ ಅಪ್ರಿಯ. ಎರಡನೆಯದು ಧರ್ಮ. ನಮ್ಮ ದಿನನಿತ್ಯದ ಜೀವನದಲ್ಲಿ ನಾವು ವೃದ್ಧರು, ಮಕ್ಕಳು ಮತ್ತು ಪ್ರಾಣಿಗಳೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ಮುಖ್ಯ. ನಮ್ಮ ನಡವಳಿಕೆಯಲ್ಲಿ ಧರ್ಮವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಮೂರನೆಯದು ಭಗವಂತನ ನಿರಂತರ ಸ್ಮರಣೆ. ಹೃದಯದಿಂದ ಭಗವಂತನನ್ನು ಸ್ಮರಿಸುವುದು ಮತ್ತು ಅವನೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುವುದು ಅತ್ಯಂತ ಮುಖ್ಯ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More