ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಆಚರಣೆಯ ವಿಧಾನ ತಿಳಿಯಿರಿ

Updated on: Aug 16, 2025 | 7:36 AM

ಆಗಸ್ಟ್ 16 ರಂದು ಆಚರಿಸಲಾಗುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷತೆಗಳನ್ನು ಡಾ. ಬಸವರಾಜ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಜನ್ಮಾಷ್ಟಮಿಯ ಆಚರಣೆ, ಪೂಜಾ ವಿಧಾನಗಳು, ಮನೆಯ ಅಲಂಕಾರ, ಮತ್ತು ಕೃಷ್ಣನ ಲೀಲೆಗಳನ್ನು ತಿಳಿಸಿಕೊಡಲಾಗಿದೆ. ಭಗವದ್ಗೀತೆ ಪಠಣ ಮತ್ತು ಮಂತ್ರ ಪಾರಾಯಣದ ಮಹತ್ವವನ್ನು ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್​ 16: ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆಯ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ತಿಳಿಸಿಕೊಟ್ಟಿದ್ದಾರೆ. ಭಗವಾನ್ ಕೃಷ್ಣನ ಜನ್ಮದಿನವನ್ನು ವಿಶ್ವದಾದ್ಯಂತ ಹಿಂದೂಗಳು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು, ಕೃಷ್ಣನಿಗೆ ಅಭಿಷೇಕ ಮಾಡುವುದು, ಹಾಗೂ ವಿವಿಧ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸುವುದು ಸಾಮಾನ್ಯ ಪದ್ಧತಿ. ಮನೆಗಳನ್ನು ರಂಗೋಲಿ ಮತ್ತು ಹೂವುಗಳಿಂದ ಅಲಂಕರಿಸಿ, ಪುಟ್ಟ ಮಕ್ಕಳನ್ನು ಕೃಷ್ಣನ ವೇಷದಲ್ಲಿ ಅಲಂಕರಿಸುವುದು ಕೂಡಾ ಒಂದು ಸಂಪ್ರದಾಯ.