AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಇಂದೇ ರಥಸಪ್ತಮಿ ಆಚರಣೆಯ ವಿಧಾನ ಹಾಗೂ ಮಹತ್ವ ಗೊತ್ತಾ?

Daily Devotional: ಇಂದೇ ರಥಸಪ್ತಮಿ ಆಚರಣೆಯ ವಿಧಾನ ಹಾಗೂ ಮಹತ್ವ ಗೊತ್ತಾ?

ಭಾವನಾ ಹೆಗಡೆ
|

Updated on: Jan 25, 2026 | 7:03 AM

Share

ರಥಸಪ್ತಮಿಯು ಹಿಂದೂ ಧರ್ಮದ ಮಹಾ ಪರ್ವ ಕಾಲಗಳಲ್ಲಿ ಒಂದಾಗಿದ್ದು, ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿ ಸೂರ್ಯ ಭಗವಾನರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಏಳನೇ ದಿನವಾದ ಸಪ್ತಮಿಯಂದು ಈ ವಿಶೇಷ ಆಚರಣೆ ನಡೆಯುತ್ತದೆ. ಈ ದಿನ ಸೂರ್ಯನ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ರಥಸಪ್ತಮಿ ದಿನದಂದು ಆಚರಿಸಬೇಕಾದ ಪ್ರಮುಖ ವಿಧಾನಗಳಲ್ಲಿ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯನ ಸ್ಮರಣೆಯೊಂದಿಗೆ ಸ್ನಾನ ಮಾಡುವುದು ಮುಖ್ಯವಾಗಿದೆ. ಈ ಸ್ನಾನವು ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞೆ ಮತ್ತು ಧನಾತ್ಮಕ ಶಕ್ತಿಯನ್ನು ನೀಡಿ, ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ. ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಜನವರಿ 25: ರಥಸಪ್ತಮಿಯು ಹಿಂದೂ ಧರ್ಮದ ಮಹಾ ಪರ್ವ ಕಾಲಗಳಲ್ಲಿ ಒಂದಾಗಿದ್ದು, ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿ ಸೂರ್ಯ ಭಗವಾನರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಏಳನೇ ದಿನವಾದ ಸಪ್ತಮಿಯಂದು ಈ ವಿಶೇಷ ಆಚರಣೆ ನಡೆಯುತ್ತದೆ. ಈ ದಿನ ಸೂರ್ಯನ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ರಥಸಪ್ತಮಿ ದಿನದಂದು ಆಚರಿಸಬೇಕಾದ ಪ್ರಮುಖ ವಿಧಾನಗಳಲ್ಲಿ ಏಳು ಎಕ್ಕದ ಎಲೆಗಳನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯನ ಸ್ಮರಣೆಯೊಂದಿಗೆ ಸ್ನಾನ ಮಾಡುವುದು ಮುಖ್ಯವಾಗಿದೆ. ಈ ಸ್ನಾನವು ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞೆ ಮತ್ತು ಧನಾತ್ಮಕ ಶಕ್ತಿಯನ್ನು ನೀಡಿ, ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ. ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.