Daily Devotional: ವೇಂಕಟೇಶ್ವರನಿಗೆ ಕಾಣಿಕೆ ಕಟ್ಟುವ ವಿಧಾನ ಹೇಗೆ ಗೊತ್ತಾ?

Edited By:

Updated on: Dec 28, 2025 | 6:59 AM

ಹರಕೆ ಕಟ್ಟುವ ವಿಧಾನ ಹೀಗಿದೆ. ಶನಿವಾರದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ಧರಾಗಿ, ಮನೆಯಲ್ಲಿರುವ ವೆಂಕಟೇಶ್ವರನ ಚಿತ್ರ ಅಥವಾ ವಿಗ್ರಹದ ಮುಂದೆ ಕುಳಿತು ದೀಪಾರಾಧನೆ ಮಾಡಬೇಕು. ಗಣಪತಿ ಸ್ತೋತ್ರ ಪಠಿಸಿ, ಶುದ್ಧವಾದ ಬಿಳಿಯ ವಸ್ತ್ರಕ್ಕೆ ಅರಿಶಿನ ಲೇಪಿಸಿ ಹಳದಿ ಬಣ್ಣಕ್ಕೆ ಬದಲಾಯಿಸಬೇಕು.

ಬೆಂಗಳೂರು, ಡಿಸೆಂಬರ್ 28: ಎಂದು ಸಹ ನಂಬಲಾಗುತ್ತದೆ. ಭಕ್ತರು ತಮ್ಮ ಮನೋಕಾಮನೆಗಳ ಈಡೇರಿಕೆಗಾಗಿ ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುತ್ತಾರೆ. ಈ ಹರಕೆ ಅಥವಾ ಮುಡುಪನ್ನು ಸರಿಯಾದ ವಿಧಾನದಲ್ಲಿ ಕಟ್ಟಿದರೆ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.

ಹರಕೆ ಕಟ್ಟುವ ವಿಧಾನ ಹೀಗಿದೆ. ಶನಿವಾರದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ ಶುದ್ಧರಾಗಿ, ಮನೆಯಲ್ಲಿರುವ ವೆಂಕಟೇಶ್ವರನ ಚಿತ್ರ ಅಥವಾ ವಿಗ್ರಹದ ಮುಂದೆ ಕುಳಿತು ದೀಪಾರಾಧನೆ ಮಾಡಬೇಕು. ಗಣಪತಿ ಸ್ತೋತ್ರ ಪಠಿಸಿ, ಶುದ್ಧವಾದ ಬಿಳಿಯ ವಸ್ತ್ರಕ್ಕೆ ಅರಿಶಿನ ಲೇಪಿಸಿ ಹಳದಿ ಬಣ್ಣಕ್ಕೆ ಬದಲಾಯಿಸಬೇಕು. ಆ ವಸ್ತ್ರದ ನಾಲ್ಕು ಮೂಲೆಗಳಲ್ಲಿ ಕುಂಕುಮ ಹಚ್ಚಿ, ಅದರಲ್ಲಿ ಅರಿಶಿನದ ಅಕ್ಷತೆ ಮತ್ತು ಹನ್ನೊಂದು ರೂಪಾಯಿ ನಾಣ್ಯಗಳನ್ನು ಇಟ್ಟು ಕಟ್ಟಬೇಕು. ನಂತರ “ಓಂ ನಮೋ ವೆಂಕಟೇಶಾಯ” ಎಂಬ ಮಂತ್ರವನ್ನು 108 ಬಾರಿ ಜಪಿಸಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಾರ್ಥಿಸಬೇಕು. ಈ ಮುಡುಪನ್ನು ದೇವರ ಮನೆಯಲ್ಲಿ ಅಥವಾ ಬೀರುವಿನಲ್ಲಿ ಇಟ್ಟು, ಇಷ್ಟಾರ್ಥಗಳು ನೆರವೇರಿದ ನಂತರ ತಿರುಪತಿಗೆ ತೆರಳಿ ಹುಂಡಿಗೆ ಸಮರ್ಪಿಸಬೇಕು. ಇದರಿಂದ ಎಲ್ಲಾ ಕಾರ್ಯಗಳು ಈಡೇರುತ್ತವೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.