Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕೆಲವೊಬ್ಬರು ಹಗಲು-ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ ಆದರೂ ಮನೆ ಕೊಂಡುಕೊಳ್ಳಲು ಆಗಲ್ಲ. ಇನ್ನೂ ಕೆಲವರು ಆರೇ ತಿಂಗಳಲ್ಲಿ ಮನೆ ಖರೀದಿಸುತ್ತಾರೆ. ಇದು ಹೇಗೆ, ನಾವು ಖರೀದಿಸಬೇಕೆಂದರೆ ಏನು ಮಾಡಬೇಕು? ನಮ್ಮ ಗ್ರಹಗತಿ ಹೇಗಿದೆ? ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
ಪ್ರತಿಯೊಬ್ಬ ವ್ಯಕ್ತಿಗೂ ಮನೆ, ಸೈಟ್ ಕೊಂಡುಕೊಳ್ಳಬೇಕು ಎಂಬ ಆಸೆ ಇರುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ, ಸೈಟ್ ಕೊಂಡುಕೊಳ್ಳುವುದು ತುಂಬಾನೆ ಕಷ್ಟ. ಮನೆ ಮತ್ತು ಸೈಟ್ ಬೆಲೆ ಗಗನಕ್ಕೆ ಏರಿವೆ. ಹೀಗಾಗಿ, ಕಡೆ ಪಕ್ಷ ಅಪಾರ್ಟ್ಮೆಂಟ್ನಲ್ಲಿ ಒಂದು ಫ್ಲಾಟ್ ಆದರೂ ಕೊಂಡುಕೊಂಡರೆ ಸಾಕು ಎಂಬ ಮನೋಭಾವ ಬರುತ್ತದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿರುತ್ತೇವೆ. ಬೇಗ ಮನೆ ಅಥವಾ ಸೈಟ್ ಕೊಂಡುಕೊಳ್ಳಬೇಕೆಂದರೆ ನಮ್ಮ ಜಾತಕದಲ್ಲಿ ಗ್ರಹಗತಿಗಳು ಹೇಗಿರುತ್ತವೆ, ನವಗ್ರಹಗಳಲ್ಲಿ ಯಾವ ಗ್ರಹ ನಮಗೆ ಪೂರಕವಾಗಿದೆ, ಸೈಟ್, ಮನೆ ಅಥವಾ ಜಮೀನು ಖರೀದಿಸಲು ಯೋಗ ಇದೆಯಾ? ಎಂಬ ಪ್ರಶ್ನೆಗಳು ಮೂಡುತ್ತವೆ. ಕೆಲವೊಬ್ಬರು ಹಗಲು-ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ ಆದರೂ ಮನೆ ಕೊಂಡುಕೊಳ್ಳಲು ಆಗಲ್ಲ. ಇನ್ನೂ ಕೆಲವರು ಆರೇ ತಿಂಗಳಲ್ಲಿ ಮನೆ ಖರೀದಿಸುತ್ತಾರೆ. ಇದು ಹೇಗೆ, ನಾವು ಖರೀದಿಸಬೇಕೆಂದರೆ ಏನು ಮಾಡಬೇಕು? ನಮ್ಮ ಗ್ರಹಗತಿ ಹೇಗಿದೆ? ತಿಳಿದುಕೊಳ್ಳಲು ಈ ವಿಡಿಯೋ ನೋಡಿ.